Advertisement
ಕೃಷಿ ಇಲಾಖೆಯಲ್ಲಿ ಕಳೆದ 10-12 ವರ್ಷಗಳಿಂದ ರೈತ ಅನುವುಗಾರರು ಭೂ ಚೇತನ ಯೋಜನೆ, ರೈತ ಕ್ಷೇತ್ರ ಪಾಠ ಶಾಲೆ, ಮಣ್ಣು ಪರೀಕ್ಷೆ, ಬೆಳೆ ಸಮೀಕ್ಷೆ, ಬೆಳೆ ಕಟಾವು ಸಮೀಕ್ಷೆ, ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಹಾಗೂ ಇಲಾಖೆಯಲ್ಲಿನ ವಿವಿಧ ಪರಿಕರಗಳ ಮಾಹಿತಿಗಳನ್ನು ರೈತರ ಮನೆ ಬಾಗಿಲಿಗೆ ಹೋಗಿ ನೀಡಲಾಗುತ್ತಿದೆ. ಕಾರಣ ಈಗ ಕೃಷಿ ಇಲಾಖೆಯಲ್ಲಿ ಹೊಸದಾಗಿ ರೈತ ಮಿತ್ರ ಎಂದು ನಾಮಕರಣ ಮಾಡಿ ಇಲಾಖೆಯು ಹೊಸ ಪ್ರಕ್ರಿಯೆ ನಡೆಸುತ್ತಿದ್ದು, ರೈತ ಮಿತ್ರ ನೇಮಕಾತಿಗೆ ಕೃಷಿ ಡಿಪ್ಲೋಮಾ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ರೈತ ಅನುವುಗಾರರ ಕುಟುಂಬ ಬೀದಿಗೆ ಬರಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಪದ್ಧತಿ ಕೈಬಿಟ್ಟು ಕಳೆದ 10-12 ವರ್ಷಗಳಿಂದ ಅನುಭವ ಹೊಂದಿರುವ ಹಾಗೂ ಪ್ರತಿ ವರ್ಷ ಕೃಷಿಗೆ ಸಂಬಂಧಿ ಸಿದ ತರಬೇತಿ ಪಡೆದ ಅನುವುಗಾರರನ್ನು ನೇಮಕ ಮಾಡಬೇಕೆಂದು ಮನವಿ ಮಾಡಲಾಗಿದೆ.
Advertisement
ರೈತ ಅನುವುಗಾರರ ನೇಮಕಕ್ಕೆ ಮನವಿ
07:19 AM Jun 12, 2020 | Suhan S |
Advertisement
Udayavani is now on Telegram. Click here to join our channel and stay updated with the latest news.