Advertisement

ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ಒತ್ತಾಯಿಸಿ ಮನವಿ

01:27 PM Feb 04, 2020 | Suhan S |

ಕುರುಗೋಡು: ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುವಂತೆ ಒತ್ತಾಯಿಸಿ ತಾಲೂಕಿನ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಶನಿವಾರ ತಾಪಂ ಇಒ ಮಡಗಿನ ಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಸಂಘಟನೆಯ ತಾಲೂಕು ಕಾರ್ಯದರ್ಶಿ ಗಾಳಿ ಬಸವರಾಜ ಮಾತನಾಡಿ, ಉದ್ಯೋಗ ಖಾತ್ರಿ ಕೂಲಿಯನ್ನು 750 ರೂಗೆ ಹೆಚ್ಚಿಸಬೇಕು. ಕೆಲಸದ ದಿನಗಳನ್ನು 200 ದಿನಗಳವರೆಗೆ ವಿಸ್ತರಿಸಬೇಕು. ಎಲ್ಲ ಕೂಲಿಕಾರರ ಕುಟುಂಬಗಳಿಗೆ 100 ದಿನಗಳ ಸಂಪೂರ್ಣ ಕೆಲಸ ನೀಡಬೇಕು. ಹಿಂದಿನಂತೆ ಮಾನವ ದಿನಗಳಿಗೆ ಶೇ. 60ರಷ್ಟು ಹಾಗೂ ಸಾಮಗ್ರಿ ವೆಚ್ಚಕ್ಕೆ ಶೇ.40 ರಷ್ಟು ಅನುಪಾತವನ್ನೇ ಜಾರಿಗೆ ತರಬೇಕು. ಇನ್ನೂ ಕೂಲಿಕಾರರಿಗೆ ಕೂಡಲೇ ಸ್ಮಾರ್ಟ್‌ ಕಾರ್ಡ್‌ ವಿತರಿಸಬೇಕು.

ಪ್ರತ್ಯೇಕ ಕೂಲಿ ಮತ್ತು ಸಲಕರಣ ಕಿಟ್‌ ವಿತರಿಸಬೇಕು. ಕೆರೆ ಹೂಳೆತ್ತುವ ಹಾಗೂ ಲೋಡ್‌ ಮಾಡುವ ಕೆಲಸಕ್ಕೆ ಪ್ರತ್ಯೇಕ ಕೂಲಿ ನೀಡಬೇಕು ಎಲ್ಲ ಗ್ರಾಪಂಗಳಲ್ಲಿ ಉದ್ಯೋಗ ಖಾತರಿ ಕೆಲಸಕ್ಕಾಗಿ ಪ್ರತ್ಯೇಕ ಕಂಪ್ಯೂಟರ್‌ ವ್ಯವಸ್ಥೆ ಮಾಡಬೇಕು. ಅಲ್ಲದೆ ಅಗತ್ಯ ಸಿಬ್ಬಂದಿ ನೇಮಿಸಬೇಕು. ಉದ್ಯೋಗ ಖಾತರಿ ಕೆಲಸದ ಸ್ಥಳದಲ್ಲಿ ನೀರಿನ ವ್ಯವಸ್ಥೆ ನೆರಳಿನ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸೆ ಕಡ್ಡಾಯವಾಗಿ ವ್ಯವಸ್ಥೆಗಳನ್ನು ಮಾಡಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿ ತಾಪಂ ಇಒ ಬಸಪ್ಪ ಮಾತನಾಡಿ, ಕೂಡಲೇ ಮನವಿಯನ್ನು ಸಂಬಂಧಿಸಿ ಮೇಲಧಿಕಾರಿಗಳಿಗೆ ರವಾನಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಚ್‌. ಸೋಮಪ್ಪ, ಎ. ಮಂಜುನಾಥ, ಎಚ್‌. ಕೆಂಚಪ್ಪ, ಲೋಕೇಶ, ಎಚ್‌. ಯಂಕಮ್ಮ, ಎಂ. ಹೂನ್ನುರ ಸೇರಿದಂತೆ ಮತ್ತಿರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next