Advertisement

18 ತಾಸು ವಿದ್ಯುತ್‌ ಪೂರೈಕೆಗೆ ಮನವಿ

01:09 PM Jan 14, 2020 | Team Udayavani |

ಯಾದಗಿರಿ: ಭೀಮಾ ನದಿ ಮತ್ತು ಕೃಷ್ಣಾ ನದಿ ತೀರದ ರೈತರ ಪಂಪ್‌ಸೆಟ್‌ಗಳಿಗೆ ದಿನದಲ್ಲಿ 18 ತಾಸು ವಿದ್ಯುತ್‌ ಸರಬರಾಜು ಮಾಡುವಂತೆ ಆಗ್ರಹಿಸಿ ಯಾದಗಿರಿ ಜಿಲ್ಲಾ ಭೀಮಾ ಮತ್ತು ಕೃಷ್ಣಾ ನದಿ ನೀರು ಹಾಗೂ ವಿದ್ಯುತ್‌ ಬಳಕೆದಾರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಯಾದಗಿರಿ ಜಿಲ್ಲೆ ಅತಿ ಹಿಂದುಳಿದಿದೆ. ಎರಡು ವರ್ಷಗಳಿಂದ ಸರಿಯಾಗಿ ಮಳೆಯಾಗದೇ ಬರಗಾಲದಿಂದ ಈ ಭಾಗದ ರೈತರಿಗೆ ತತ್ತರಿಸಿದ್ದಾರೆ. ಈ ವರ್ಷ ನೆರೆ ಪ್ರವಾಹದಿಂದ ಬೆಳೆ ಹಾಳಾಗಿದೆ. ಇದರಿಂದ ರೈತರು ತುಂಬಾ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಪ್ರಸ್ತುತ ಭೀಮಾ ನದಿಯಿಂದ ಮತ್ತು ಕೃಷ್ಣಾ ನದಿಯಿಂದ ಪೈಪ್‌ಲೈನ್‌ ಮೂಲಕ ನೀರಾವರಿ ಮಾಡಿ ಬೆಳೆ ಬೆಳೆಯುತ್ತಿದ್ದು, ಪಂಪ್‌ಸೆಟ್‌ಗಳಿಗೆ ಕೇವಲ 7 ತಾಸು ವಿದ್ಯುತ್‌ ನೀಡುತ್ತಿರುವುದರಿಂದ ಭತ್ತದ ಬೆಳೆಗೆ ನೀರು ಕಡಿಮೆಯಾಗಿ ರೈತರು ಪರಿತಪಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಬೇಸಿಗೆಯಲ್ಲಿ ಬೆಳೆ ಬೆಳೆಯಲು ದಿನದಲ್ಲಿ ಕನಿಷ್ಠ 18 ತಾಸು ವಿದ್ಯುತ್‌ ಪೂರೈಕೆ ಮಾಡಿದ್ದಲ್ಲಿ ಬಡ ರೈತರು, ಕೂಲಿಕಾರ್ಮಿಕರಿಗೆ ಅನುಕೂಲವಾಗುತ್ತದೆ. ಇದರಿಂದ ರೈತರು, ಕೂಲಿಕಾರ್ಮಿಕರು, ಬಡವರು ನಗರಗಳಿಗೆ ಉದ್ಯೋಗ ಅರಿಸಿ ವಲಸೆ ಹೋಗುವುದು ತಪ್ಪುತ್ತದೆ. ಅಲ್ಲದೇ ದುಡಿಯುವ ಕೈಗಳಿಗೆ ಕೆಲಸ ಸಿಗುತ್ತದೆ. ರೈತರಿಗೆ, ಕಾರ್ಮಿಕರಿಗೆ ಮತ್ತು ಬಡವರಿಗೆ ಅನುಕೂಲವಾಗುವಂತೆ ಕ್ರಮವಹಿಸಲು ಆಗ್ರಹಿಸಿದರು.

ಯಾದಗಿರಿ ಜಿಲ್ಲಾ ಭೀಮಾ ಮತ್ತು ಕೃಷ್ಣಾ ನದಿ ನೀರು ಹಾಗೂ ವಿದ್ಯುತ್‌ ಬಳಕೆದಾರರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀ ರಡ್ಡಿ ಅನಪೂರ, ಕಾರ್ಯದರ್ಶಿ ವೈಜನಾಥ ಪಾಟೀಲ, ಶಾಂತಪ್ಪಗೌಡ ದೇಸಾಯಿ, ಹಣಮಂತ್ರಾಯಗೌಡ ಮುಷ್ಟರ, ಮಲ್ಲನಗೌಡ ಹೊಸ್ಮನಿ, ಕೌಳ್ಳೂರು, ಮಹಾದೇವಪ್ಪಗೌಡ ಅಬ್ಬೆತುಮಕೂರ, ಬಸವಂತರಾಗೌಡ ನಾಯ್ಕಲ, ಗುರುನಾಥರಡ್ಡಿಗೌಡ ಕದರಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next