Advertisement
ಇಲ್ಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಪಕ್ಕದ ತೂಗುಸೇತುವೆಯ ತನಕ ತೆರಳಲು ಮಂಗಳೂರು ಮತ್ತು ಬಂಟ್ವಾಳ ಭಾಗದಲ್ಲಿ ಮಿನಿ ಬಸ್, ಲಘು ವಾಹನಗಳ ಸಂಚಾರಕ್ಕೆ ಹಾಗೆಯೇ ಮೂಲರಪಟ್ನ, ಬಿ.ಸಿ. ರೋಡ್ ಮಾರ್ಗವಾಗಿ ಮಂಗಳೂರಿಗೆ 2 ಸರಕಾರಿ ಬಸ್ ಸೌಲಭ್ಯವನ್ನು ಈ ಕೂಡಲೇ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಭರವಸೆ ನೀಡಿದರು. ಕೊಳತ್ತಮಜಲು, ಪೊಳಲಿ, ಕೈಕಂಬ ಮೂಲಕ ಈಗಾಗಲೇ ಸಂಚರಿಸುತ್ತಿರುವ ಸರಕಾರಿ ಬಸ್ಸನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮೂಲರಪಟ್ನಕ್ಕೂ ಬರುವಂತೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಈ ಸಂದರ್ಭದಲ್ಲಿ ಹೇಳಿದರು. ತೂಗು ಸೇತುವೆಯ ಇಕ್ಕೆಲಗಳಲ್ಲಿ ತೆರಳಲು ರಸ್ತೆ, ಕಾಲು ಸಂಕವನ್ನು ತತ್‌ಕ್ಷಣ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಲೋಕೋಪಯೋಗಿ ಎಂಜಿನಿಯರ್‌ಗಳಿಗೆ ಸೂಚಿಸಿದರು.
ಉಪವಿಭಾಗದ ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್, ಬಂಟ್ವಾಳ ಪ್ರಭಾರ ತಹಶೀಲ್ದಾರ್ ಸಂತೋಷ್ ಜಿ. ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಾದ ಉಮೇಶ್ ಭಟ್, ರವಿ ಕುಮಾರ್, ಆರ್‌ಟಿಒ ಜಾನ್ ಮಿಸ್ಕಿತ್ ಈ ವೇಳೆ ಉಪಸ್ಥಿತರಿದ್ದರು.