Advertisement

ಹಕ್ಕು ಪತ್ರಕ್ಕೆ ಆಗ್ರಹಿಸಿ ಎ.ಸಿ.ಗೆ ಮನವಿ

07:25 AM Oct 27, 2017 | Harsha Rao |

ಕೋಟ: ಹಕ್ಕು ಪತ್ರ ವಂಚಿತ ದಲಿತ ಕುಟುಂಬಗಳಿಗೆ ಹಕ್ಕು ಪತ್ರ ನೀಡುವಂತೆ  ಆಗ್ರಹಿಸಿ ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಕುಂದಾಪುರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಉಡುಪಿ ಜಿಲ್ಲೆಯ ಶಿರಿಯಾರ ಗ್ರಾ.ಪಂ. ವ್ಯಾಪ್ತಿಯ ಕಟ್ಟೆಹಕ್ಲು  ಸೆರ್ವೆ ನಂಬ್ರ 213ರ ಸರಕಾರಿ ಜಾಗದಲ್ಲಿ ಸುಮಾರು 25ವರ್ಷಗಳಿಂದ ಪ.ಜಾತಿ, ಪ.ಪಂಗಡದ ಕುಟುಂಬ ವಾಸವಾಗಿದ್ದು, ಈ ಕುಟುಂಬಗಳು ಹಕ್ಕು ಪತ್ರ ನೀಡುವಂತೆ  ಹಲವು ಬಾರಿ ಮನವಿ ಸಲ್ಲಿಸಿದೆ. ಆದರೆ ಸರಕಾರ ಇದುವರೆಗೆ ಇವರ ಮನವಿಯನ್ನು ಪುರಸ್ಕರಿಸಿಲ್ಲ. ಆದ್ದರಿಂದ ಈ ಕುರಿತು ಪರಿಶೀಲನೆ ನಡೆಸಿ ಈ ಕುಟುಂಬಕ್ಕೆ ಹಕ್ಕು ಪತ್ರ ನೀಡುವ ಕುರಿತು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಲಾಯಿತು.

ಮನವಿ ಸ್ವೀಕರಿಸಿದ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾನಾಗ್‌ ಅವರು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಸಮತಾ ಸೈನಿಕ ದಳದ ಉಡುಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಧಾಕರ ಸೂರೊYàಳಿ, ಜಿಲ್ಲಾ ಖಜಾಂಚಿ ಮಂಜುನಾಥ ಮಧುವನ, ಶಿರಿಯಾರ ಗ್ರಾಮಶಾಖೆ ಅಧ್ಯಕ್ಷ  ಪ್ರವೀಣ್‌, ಉಡುಪಿ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next