Advertisement

ಬಜೆಟ್‌ನಲ್ಲಿ ರೀಲರ್‌ಗಳಿಗೆ ಸಬ್ಸಿಡಿ ಘೋಷಿಸುವಂತೆ ಮನವಿ

03:54 PM Jan 28, 2018 | Team Udayavani |

ರಾಮನಗರ: ರೀಲರ್‌ಗಳಿಗೆ ನೀಡುವ ಸಬ್ಸಿಡಿಯನ್ನು ಬಜೆಟ್‌ನಲ್ಲೇ ನಮೂದಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡುವಂತೆ ರೀಲರ್ ಸಂಘದ  ಅಧ್ಯಕ್ಷ ಮಹೀಬ್‌ ಪಾಷ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಮನವಿ ಮಾಡಿಕೊಂಡರು.

Advertisement

ನಗರದ ಪರಿವೀಕ್ಷಣಾ ಮಂದಿರದಲ್ಲಿ ಟ್ವಿಸ್ಟಿಂಗ್‌ ಮತ್ತು ವೀವರ್ ಸಂಘದ ಪ್ರಮುಖರು ಸಚಿವರನ್ನು ಅಭಿನಂದಿಸಿದ ವೇಳೆ ಅವರು ಮನವಿ ಅರ್ಪಿಸಿ ಮಾತನಾಡಿದರು.  ಸರ್ಕಾರದ ಸಿಲ್ಕ್ ಎಕ್ಸಚೇಂಜ್‌ ಮೂಲಕ ವಹಿವಾಟು ನಡೆಸುವ ರೀಲರ್‌ಗಳಿಗೆ ಸಬ್ಸಿಡಿಯನ್ನು ರಾಜ್ಯ ಸರ್ಕಾರ ನೀಡುತ್ತಿದೆ.

ಕಚ್ಚಾ ರೇಷ್ಮೆ ನೂಲು ಮಾರಾಟ ಈಗ ಖಾಸಗಿ ವಲಯದಲ್ಲಿ ಹೆಚ್ಚಾಗಿ ನಡೆಯುತ್ತಿರುವುದರಿಂದ ಅನೇಕ ರೀಲರ್‌ಗಳು ಈ ಸಬ್ಸಿಡಿಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ರೇಷ್ಮೆ ಗೂಡು ಖರೀದಿಯನ್ನಾಧರಿಸಿ ಸಬ್ಸಿಡಿ  ನೀಡುವ ವ್ಯವಸ್ಥೆ ಜಾರಿಯಗಲಿ  ಎಂದರು. 

ರೀಲರ್ಗಳಿಗೆ ನೀಡುವ ಸಬ್ಸಿಡಿ ಮೊತ್ತವನ್ನು  ಇಲಾಖೆಯ ಒಟ್ಟಾರೆ ಅನುದಾನಕ್ಕೆ ಸೇರಿಸುವುದು ಬೇಡ ಪ್ರತ್ಯೇಕವಾಗಿಯೇ ಬಜೆಟ್‌ನಲ್ಲಿ ನಮೂದಿಸಿ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಅವರು ಸಚಿವರಿಗೆ ಮನವಿ ಮಾಡಿದರು. ರೇಷ್ಮೆ ರೀಲಂಗ್‌ ಘಟಕಗಳಿಗೆ ಬೆಸ್ಕಾಂ ಹೆಚ್ಚುವರಿ ಡಿಪಾಸಿಟ್‌ ಪಾವತಿಸುವಂತೆ ಒತ್ತಾಯಿಸುತ್ತಿದೆ.

ಹೆಚ್ಚುವರಿ ಡಿಪಾಸಿಂಟ್‌ ಹಲವಾರು ಸಾವಿರ ರೂ. ಆಗುವುದರಿಂದ ಒಂದೇ ಬಾರಿಗೆ ಕಟ್ಟಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ತಿಂಗಳಿಗಿಷ್ಟು ಎಂದು ಇಎಂಐ ಮಾದರಿಯಲ್ಲಿ ವಿದ್ಯುತ್‌ ಬಿಲ್‌ವುೂಲಕ ವಸೂಲು ಮಾಡಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸವಂತೆ ಮನವಿ ಮಾಡಿದರು.

Advertisement

ಸಚಿವರಿಗೆ ಅಭಿನಂದನೆ: ಜವಳಿ ಇಲಾಖೆಯಿಂದ ರೇಷ್ಮೆ ಟ್ವಿಸ್ಟಿಂಗ್‌ ಮತ್ತು ವೀವಿಂಗ್‌ ಘಟಕಗಳಿಗೆ ನೀಡುತ್ತಿದ್ದ ವಿದ್ಯುತ್‌ ಸಬ್ಸಿಡಿಯನ್ನು ವಿದ್ಯುತ್‌ ಬಿಲ್‌ನಲ್ಲೇ ಕಡಿತವಾಗುತ್ತಿದ್ದ ಹಳೇ ವ್ಯವಸ್ಥೆ ಮತ್ತೆ ಜಾರಿಯಾಗುವಂತೆ ಸಚಿವ ಡಿ.ಕೆ.ಶಿವಕುಮಾರ್‌ ಶ್ರಮಿಸಿದ್ದಾರೆ ಎಂದು ಟ್ವಿಸ್ಟಿಂಗ್‌ ಮತ್ತು ವೀವರ್‌ಗಳು ಸಚಿವರನ್ನು ಅಭಿನಂದಿಸಿದರು.

ಈ ವೇಳೆ ಎಂಎಲ್‌ಸಿ ಸಿ.ಎಂ.ಲಿಂಗಪ್ಪ, ಎಂಇಐ ಲಿಮಿಟೆಡ್‌ ಅಧ್ಯಕ್ಷ ಕೆ.ಶೇಷಾದ್ರಿ, ನಗರಸಭಾಧ್ಯಕ್ಷ ಪಿ.ರವಿಕುಮಾರ್‌, ಸದಸ್ಯ ತಲ್ಹಾ ಪಾಷ, ನಗರ ಕಾಂಗ್ರೆಸ್‌ ಘಟಕದ ಎ.ಬಿ.ಚೇತನ್‌ ಕುಮಾರ್‌, ಟ್ವಿಸ್ಟಿಂಗ್‌ ಮತ್ತು ವೀವರ್  ಸಂಘದ ಪ್ರಮುಖರಾದ ಮೊಹಮದ್‌ ಸಲಾವುದ್ದಿನ್‌, ಸೈಯದ್‌ ಮುಜೀಬ್‌, ಮೊಹಮದ್‌ ಸಲೀಂ, ರಂಗರಾಜು, ಮುಸ್ತಾಕ್‌, ರೀಲರ್ ಗಳ ಸಂಘದ ರವಿ, ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next