Advertisement

US: ಟ್ರಂಪ್‌ ಅಭ್ಯರ್ಥಿ ಎಂದು ಘೋಷಿಸುವ ನಿರ್ಣಯದಿಂದ ಹಿಂದೆ ಸರಿದ ರಿಪಬ್ಲಿಕನ್‌

12:55 AM Jan 28, 2024 | Team Udayavani |

ವಾಷಿಂಗ್ಟನ್‌: ವರ್ಷಾಂತ್ಯದಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಎಂದು ಡೊನಾಲ್ಡ್‌ ಟ್ರಂಪ್‌ರನ್ನು ಘೋಷಿಸುವ ನಿರ್ಣಯದಿಂದ ರಿಪಬ್ಲಿಕನ್‌ ಪಕ್ಷದ ರಾಷ್ಟ್ರೀಯ ಸಮಿತಿ ಹಿಂದೆ ಸರಿದಿದೆ. ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸಲು ನಿಗದಿತ ಮತ ಬೆಂಬಲ ಬೇಕಿದೆ. ಅದಕ್ಕಿಂತ ಮೊದಲೇ ಟ್ರಂಪ್‌ ಅವರನ್ನು ಸಂಭಾವ್ಯ ಅಭ್ಯರ್ಥಿ ಎಂದು ಘೋಷಿಸಲು ಪಕ್ಷ ನಿರ್ಧರಿಸಿತ್ತು.

Advertisement

ಆದರೆ ಖುದ್ದು ಟ್ರಂಪ್‌ ಈ ಪ್ರಸ್ತಾವ ತಿರಸ್ಕರಿಸಿದ್ದರು. ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಅವರು, ಪ್ರಸ್ತಾವದ ಬಗ್ಗೆ ನನಗೆ ಗೌರವವಿದೆ. ಚುನಾವಣೆ ಪ್ರಕ್ರಿಯೆ ಹೇಗಿದೆಯೋ ಅದೇ ರೀತಿಯೇ ಅಭ್ಯರ್ಥಿಯಾಗಿ ಆಯ್ಕೆಯಾಗಲು ಬಯಸುತ್ತೇನೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next