ಹೊಸದಿಲ್ಲಿ: ಇನ್ನು ಮುಂದೆ ಪ್ರತೀ ವರ್ಷ ಜ. 23ರಿಂದಲೇ ಗಣರಾಜ್ಯೋತ್ಸವ ಸಂಭ್ರಮ ಆರಂಭವಾಗಲಿದೆ. ಪ್ರತೀ ವರ್ಷದ ಜ. 23ರಂದು ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಜನ್ಮದಿನವನ್ನು “ಪರಾಕ್ರಮ ದಿವಸ’ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಇನ್ನು ಮುಂದೆ ಗಣರಾಜ್ಯೋತ್ಸವ ಸಂಭ್ರಮಕ್ಕೆ ಈ ಪರಾಕ್ರಮ ದಿನವನ್ನೂ ಸೇರಿಸಲಾಗುತ್ತದೆ.
ಕಳೆದ ವರ್ಷವಷ್ಟೇ ಕೇಂದ್ರದ ಪ್ರಧಾನಿ ಮೋದಿ ಸರಕಾರವು ನೇತಾಜಿ ಜಯಂತಿಯನ್ನು “ಪರಾಕ್ರಮ ದಿನ’ವೆಂದು ಆಚರಿಸಲು ಆರಂಭಿಸಿತ್ತು. 2021ರ ಜ. 23ಕ್ಕೆ ನೇತಾಜಿ ಅವರು ಜನ್ಮತಾಳಿ 125 ವರ್ಷಗಳು ಆಗಿದ್ದವು.
ಇದನ್ನೂ ಓದಿ:ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇವಲ 24,000 ಪ್ರೇಕ್ಷಕರಿಗೆ ಮಾತ್ರ ಅವಕಾಶ
ಈಗ ನೇತಾಜಿ ಜನ್ಮದಿನವನ್ನು ಗಣರಾಜ್ಯೋತ್ಸವ ಸಂಭ್ರಮಕ್ಕೆ ಸೇರಿಸಿರುವುದು ಮಹತ್ವದ ನಡೆ ಎಂದೇ ಹೇಳಲಾಗುತ್ತಿದೆ. ಈ ಮುನ್ನ ಮೋದಿ ಸರಕಾರ ಆ. 14ರಂದು ದೇಶ ವಿಭಜನೆಯ ಕರಾಳ ದಿನ, ಅ. 31ನ್ನು ಏಕತಾ ದಿನ, ನ. 15ನ್ನು ಜನ
ಜಾತೀಯ ಗೌರವ ದಿವಸ, ನ. 26ನ್ನು ಸಂವಿಧಾನ ದಿನ, ಡಿ. 26ನ್ನು ವೀರ ಬಾಲ ದಿವಸ ಎಂದು ಕರೆಯಲು ನಿರ್ಧರಿಸಿತ್ತು.