Advertisement
ಜಿಲ್ಲಾಡಳಿತದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ 70ನೇ ಗಣರಾಜ್ಯೋತ್ಸವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸಲ್ಲಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ಸಂಘ: ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ನಗರದ ಸುಬ್ಬರಾಯನ ಕೆರೆಯಲ್ಲಿ ಗಣ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ಸಂಘದ ಅಧ್ಯಕ್ಷರಾದ ಡಾ.ಎಂ.ಜಿ. ಕೃಷ್ಣಮೂರ್ತಿ ಮೊದಲಾದವರು ಹಾಜರಿದ್ದರು.
Related Articles
Advertisement
ಜೆಎಸ್‌ಎಸ್ ಕಾಲೇಜು ಸಮುಚ್ಛಯಗಳ ಮುಖ್ಯ ಕಾರ್ಯ ನಿರ್ವಾಹಕ ಪ್ರೊ ಬಿ.ವಿ. ಸಾಂಬಶಿವಯ್ಯ ಧ್ವಜಾರೋಹಣ ನೆರವೇರಿಸಿದರು, ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ. ಮಹದೇವಪ್ಪ, ಪಿಯು ಕಾಲೇಜಿನ ಪ್ರಾಂಶುಪಾಲ ಎಸ್.ವಿ. ಸೋಮಶೇಖರ್‌ಹಾಜರಿದ್ದರು. ಸಮಾರಂಭದಲ್ಲಿ ಎನ್‌ಸಿ ಸಿ ಕೆಡೆಟ್‌ಗಳು ಆಕರ್ಷಕ ಪಥಸಂಚಲನ ನಡೆಸಿದರು.
ಶಾರದಾ ವಿಲಾಸ ಸಂಸ್ಥೆ: ಶಾರದಾ ವಿಲಾಸ ವಿದ್ಯಾ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆ ಗಣರಾಜ್ಯೋತ್ಸವ ದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಹಾಗೂ ನ್ಯಾಕ್ ಸಮಿತಿ ಮಾಜಿ ನಿರ್ದೇಶಕ ಪ್ರೊ.ಎಚ್.ಎ.ರಂಗನಾಥ್ ಮಾತನಾಡಿ, ಭಾರತ ವೈವಿಧ್ಯತೆಯಲ್ಲಿ ಏಕತೆ ಕಂಡ ಏಕೈಕ ಹೆಮ್ಮೆಯ ದೇಶವಾಗಿದ್ದು, ಸರ್ವರಿಗೂ ಸಮಾನತೆ, ಸಹಬಾಳ್ವೆಗೆ ಅವಕಾಶವನ್ನು ದೊರಕಿಸಿಕೊಟ್ಟಿದೆ. ಜಾತಿ, ಭೇದ, ವರ್ಗ, ಮತಗಳ ಘರ್ಷಣೆಯಿಲ್ಲದೆ ಒಗ್ಗಟ್ಟಿನಿಂದ ಗಣತಂತ್ರ ಹಬ್ಬವನ್ನು ಆಚರಿಸುವ ರಾಷ್ಟ್ರೀಯ ಹಬ್ಬವೇ ಗಣರಾಜ್ಯೋತ್ಸವ ಎಂದರು.
ಸ್ವಾತಂತ್ರ್ಯ, ಸಮಾನತೆ, ಸೋದರತ್ವದ ಮತ್ತೂಂದು ಹೆಸರೇ ನ್ಯಾಯ. ಈ ಹಿನ್ನೆಲೆಯಲ್ಲಿ ಇಂದಿನ ಯುವಕರು ದೇಶವನ್ನು ಮುನ್ನಡೆಸಲು ಒಗ್ಗಟ್ಟಿನಿಂದ ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸಬೇಕಿದೆ ಎಂದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಎಚ್.ಕೆ. ಶ್ರೀನಾಥ್, ಆಡಳಿತ ಮಂಡಳಿ ಸದಸ್ಯರಾದ ವೈ.ಕೆ.ಭಾಸ್ಕರ್, ಎಸ್. ನಾಗರಾಜ್, ಹರೀಶ್, ಕೃಷ್ಣ, ಡೋಂಗ್ರೆ ಉಪಸ್ಥಿತರಿದ್ದರು.
ಮರಿಮಲ್ಲಪ್ಪ ಸಂಸ್ಥೆ: ಮರಿಮಲ್ಲಪ್ಪ ವಿದ್ಯಾಸಂಸ್ಥೆಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್. ಪರಮಶಿವಯ್ಯ ಅಧ್ಯಕ್ಷತೆವಹಿಸಿದ್ದರು. ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ 70ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಟಿ.ರಂಗಪ್ಪ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಯಾಗಿದ್ದ ಭಾರತ ವಿಕಾಸ ಪರಿಷದ್‌ನ ಕರ್ನಾಟಕ ದಕ್ಷಿಣ ಪ್ರಾಂತದ ಸಂಘಟನಾ ಕಾರ್ಯ ದರ್ಶಿ ನಾಗಭೂಷಣ್ ಮಾತ ನಾಡಿ, ಒತ್ತಡಕ್ಕೆ ಮಣಿಯದೆ ಶ್ರದ್ಧಾಪೂರ್ವಕವಾಗಿ ಆಸಕ್ತಿಯಿಂದ ಕಲಿತಾಗ ಮಾತ್ರ ವಿದ್ಯೆಯನ್ನು ಗಳಿಸ ಬಹುದು ಎಂದು ಹೇಳಿದರು.
ಭಾರತ ವಿಕಾಸ ಪರಿಷದ್: ಭಾರತ ವಿಕಾಸ ಪರಿಷದ್ ಪರಮಹಂಸ ಶಾಖೆಯ ಅಧ್ಯಕ್ಷ ಜಗದೀಶ್, ಸಂಸ್ಕೃತ ಉಪನ್ಯಾಸಕ ಡಾ.ಪ್ರದೀಪ್ ದೀಕ್ಷಿತ್ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಕಾಂತಿ ನಾಯಕ್, ಶಾಲಾ ಮುಖ್ಯೋಪಾಧ್ಯಾಯಿನಿ ಝರೀನಾ ಬಾಬುಲ್, ಕಾಲೇಜಿನ ಪ್ರಾಂಶುಪಾಲ ಸುನಿಲ್ ಕುಮಾರ್ ಉಪಸ್ಥಿತರಿದ್ದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿ ಗಳನ್ನು ಪುರಸ್ಕರಿಸಲಾಯಿತು.
ನಮೋ ಭಾರತ: ನಮೋ ಭಾರತ ಮೈಸೂರು ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಫೀಲ್ಡ್ ಮಾರ್ಷಲ್ ವೃತ್ತದಿಂದ ದೇಶಕ್ಕಾಗಿ ನಡಿಗೆ ತಿರಂಗಾ ಯಾತ್ರೆ ನಡೆಸಲಾಯಿತು. ನಿವೃತ್ತ ಸೇನಾ ಬ್ರಿಗೇಡಿಯ್ ಪಿ.ಡಿ. ಮೇದಪ್ಪ ಚಾಲನೆ ನೀಡಿದರು.ಸಂಜೆ ಕಲಾಮಂದಿರ ಸೇರಿದಂತೆ ನಗರದ ವಿವಿಧೆಡೆ ಗಣರಾಜ್ಯೋತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು.