Advertisement
ವಿವಾದವೇನು ?ಪಶ್ಚಿಮ ಬಂಗಾಲ ಸುಭಾಷ್ ಚಂದ್ರಬೋಸ್ ಅವರ ಕುರಿತ ಸ್ತಬ್ಧಚಿತ್ರ ಮತ್ತು ಕೇರಳ ಸರಕಾರ ನಾರಾಯಣಗುರು ಅವರ ಸ್ತಬ್ಧ ಚಿತ್ರವನ್ನು ರೂಪಿಸಿಕೊಡುವುದಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಆದರೆ ಇದನ್ನು ಕೇಂದ್ರ ಸರಕಾರ ಒಪ್ಪಿಲ್ಲ. ಈ 2 ರಾಜ್ಯಗಳು, ರಾಜಕೀಯ ಕಾರಣಕ್ಕಾಗಿ ನಮ್ಮ ಸ್ತಬ್ಧಚಿತ್ರ ಗಳನ್ನು ತಿರಸ್ಕರಿಸಲಾಗಿದೆ ಎಂದು ಆರೋಪಿಸಿವೆ.
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗುವ ಸ್ತಬ್ಧಚಿತ್ರಗಳನ್ನು ಆರಿಸುವುದು ರಕ್ಷಣಾ ಇಲಾಖೆ. ಇದಕ್ಕಾಗಿಯೇ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರದ ವಿವಿಧ ಇಲಾಖೆಗಳು, ಕೆಲವು ಸಂಸದೀಯ ವಿಭಾಗಗಳಿಗೆ ಸ್ತಬ್ಧಚಿತ್ರಗಳನ್ನು ರಚಿಸಿಕೊಡುವಂತೆ ಆಹ್ವಾನ ನೀಡುತ್ತದೆ. ಈ ಬಾರಿ 80 ಕೇಂದ್ರ ಸರಕಾರದ ಇಲಾಖೆಗಳು, ಎಲ್ಲ 36 ರಾಜ್ಯಗಳು, ಚುನಾವಣಾ ಆಯೋಗ, ನೀತಿ ಆಯೋಗಕ್ಕೆ ಸೆ.16ರಂದು ಆಹ್ವಾನ ಕಳಿಸಿತ್ತು. ಸೆ. 27ರ ಒಳಗೆ ಪ್ರಸ್ತಾವನೆಯನ್ನು ಕಳಿಸಲು ಸೂಚಿಸಿತ್ತು. ಅಕ್ಟೋಬರ್‌ನ ಎರಡನೇ ವಾರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಸೂಚನೆಗಳಿರುತ್ತವೆಯೇ?
ಹೌದು, ರಕ್ಷಣಾ ಇಲಾಖೆ ಈ ಬಾರಿ ಸ್ವಾತಂತ್ರ್ಯದ 75ನೇ ವರ್ಷದ ಅಂಗವಾಗಿ ಇಂಥದ್ದೇ ರೀತಿಯ ಸ್ತಬ್ಧಚಿತ್ರಗಳು ಬೇಕು ಎಂದು ಎಲ್ಲ ರಾಜ್ಯಗಳಿಗೆ, ಕೇಂದ್ರದ ಇಲಾಖೆಗಳಿಗೆ ಮಾರ್ಗಸೂಚಿಗಳನ್ನು ಕಳುಹಿಸಿತ್ತು. ಈ ಸ್ತಬ್ಧಚಿತ್ರಗಳ ಮೇಲೆ ರಾಜ್ಯಗಳ ಹೆಸರು ಹೊರತುಪಡಿಸಿ ಯಾವುದೇ ಲೋಗೋ ಇರುವಂತಿಲ್ಲ. ಮುಂದೆ ಹಿಂದಿ, ಹಿಂದೆ ಇಂಗ್ಲಿಷ್, ಪಕ್ಕ ದಲ್ಲಿ ಆಯಾ ಪ್ರಾದೇಶಿಕ ಭಾಷೆಯಲ್ಲಿ ರಾಜ್ಯಗಳ, ಇಲಾಖೆಗಳ ಹೆಸರು ಬರೆದಿರ ಬೇಕು.
Related Articles
ರಕ್ಷಣಾ ಇಲಾಖೆ ಇದಕ್ಕಾಗಿಯೇ ಒಂದು ಸಮಿತಿಯೊಂದನ್ನು ನೇಮಕ ಮಾಡಿರು ತ್ತದೆ. ಇದರಲ್ಲಿ ಕಲೆ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ಗೃಹವಿನ್ಯಾಸ, ನೃತ್ಯ ಸಹಿತ ಇತರ ವಲಯಗಳ ತಜ್ಞರು ಇರುತ್ತಾರೆ. ಇವರು ಬಂದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಶಾರ್ಟ್‌ಲಿಸ್ಟ್ ಮಾಡುತ್ತಾರೆ. ಮೊದಲಿಗೆ, ಏನಾದರೂ ಬದಲಾವಣೆಯಾಗಬೇಕು ಎಂದಾದಲ್ಲಿ ಸೂಚಿಸು ತ್ತಾರೆ. ಇದರಂತೆ ರಾಜ್ಯಗಳು, ಇಲಾ ಖೆಗಳು ಸ್ತಬ್ಧಚಿತ್ರ ಬದಲಿಸಿಕೊಡಬೇಕು.
Advertisement