Advertisement

ಜನರ ಸಂಕಷ್ಟಕ್ಕೆ ಜನಪ್ರತಿನಿಧಿಗಳ ಸ್ಪಂದನೆ ಅಗತ್ಯ: ನಡಹಳ್ಳಿ

09:33 AM Jul 03, 2020 | Suhan S |

ತಾಳಿಕೋಟೆ: ಜನಪ್ರತಿನಿಧಿ ಯಾದವನು ಜನರ ಕಷ್ಟಗಳಿಗೆ ಸ್ಪಂದಿಸುತ್ತ ಅವರ ನಾಡಿಮಿಡಿತ ಅರಿತುಕೊಂಡಿರಬೇಕು ಎಂದು ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಹೇಳಿದರು.

Advertisement

ಗುರುವಾರ ಪಟ್ಟಣದ ವಿಜಯಪುರ ಸರ್ಕಲ್‌ದಿಂದ ಶಿವಾಜಿ ವೃತ್ತದವರೆಗೆ ಹಾಗೂ ಜಾನಕಿ ಹಳ್ಳದವರೆಗೆ ಮತ್ತು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಸುಧಾರಣೆ, ಚರಂಡಿ ನಿರ್ಮಾಣ ಸೇರಿ ಒಟ್ಟು 10 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎರಡು ಡ್ಯಾಂಗಳ ಮಧ್ಯೆ ಇರುವ ಈ ತಾಲೂಕು ಅಭಿವೃದ್ಧಿ ಹೊಂದುವುದಕ್ಕೆ ಸಾಕಷ್ಟು ಅವಕಾಶಗಳಿದ್ದರೂ ಇಷ್ಟು ವರ್ಷ ನಿರ್ಲಕ್ಷéಕ್ಕೊಳಗಾಗಿತ್ತು. 30, 40 ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಅಭಿವೃದ್ಧಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತೇನೆ. ತಾಳಿಕೋಟೆ ಅಭಿವೃದ್ಧಿಗೆ ಇನ್ನೂ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಮಾಡಲು ಸಾಕಷ್ಟು ಅವಕಾಶವಿದೆ. ಟೀಕೆಗಳು ವಾಸ್ತವಕ್ಕೆ ಹತ್ತಿರವಾಗಿರಬೇಕು ಅಥವಾ ಸಾರ್ವಜನಿಕರ ಹಿತದೃಷ್ಟಿಯಿಂದ ಇರಬೇಕು. ಇಲ್ಲದಿದ್ದರೆ ಟೀಕೆ ಮಾಡಿದವರ ವ್ಯಕ್ತಿತ್ವ ಕಡಿಮೆಯಾಗುತ್ತದೆ ವಿನಃ ಟೀಕೆಗೊಳಗಾದವನ ಘನತೆ ಕುಂದುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷ ಎರಡೂ ಇರಬೇಕು. ಇವುಗಳಿದ್ದರೆ ಯಶಸ್ವಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಖಾಸYತೇಶ್ವರ ಮಠದ ಸಿದ್ದಲಿಂಗ ದೇವರು ಆಶೀರ್ವಚನ ನೀಡಿದರು. ಈ ವೇಳೆ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ), ಪುರಸಭೆ ಸದಸ್ಯರಿಗೆ ಸನ್ಮಾನಿಸಲಾಯಿತು. ನಂತರ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಶಾಸಕರು ರಸ್ತೆ ಸುಧಾರಣೆಗೆ ಭೂಮಿಪೂಜೆ ನೆರವೇರಿಸಿದರು.

Advertisement

ವಿಠuಲಸಿಂಗ್‌ ಹಜೇರಿ, ತಹಶೀಲ್ದಾರ್‌ ಅನಿಲಕುಮಾರ ಢವಳಗಿ, ಪುರಸಭೆ ಮುಖ್ಯಾ ಧಿಕಾರಿ ಸಿ.ವಿ. ಕುಲಕರ್ಣಿ, ಡಿ.ಬಿ. ಕಲಬುರ್ಗಿ, ಪಿಎಸೈ ಎಸ್‌.ಎಚ್‌. ಪವಾರ, ವೀರಭದ್ರಗೌಡ ಹೊಸಮನಿ, ವಾಸುದೇವ ಹೆಬಸೂರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಡಿ.ವಿ. ಪಾಟೀಲ, ಮುದಕಣ್ಣ ಬಡಿಗೇರ, ಜೈಸಿಂಗ್‌ ಮೂಲಿಮನಿ, ಮಂಜೂರ ಬೇಪಾರಿ, ಮುತ್ತಪ್ಪ ಚಮಲಾಪುರ, ಜಮಾದಾರ, ಬಸು ಹೊಟ್ಟಿ, ಪರಶುರಾಮ ತಂಗಡಗಿ, ಬಸವರಾಜ ಕುಂಬಾರ, ನಿಂಗು ಕುಂಟೋಜಿ, ಸಂಗಮೇಶ ಇಂಗಳಗಿ, ರಾಜು ಚಿತ್ತರಗಿ, ಮುಸ್ತಫಾ ಚೌದ್ರಿ, ಅಣ್ಣಪ್ಪ ಜಗತಾಪ, ವಿಶ್ವನಾಥ ಬಿದರಕುಂದಿ, ಮಾನಸಿಂಗ್‌ ಕೊಕಟನೂರ, ಬಾಬು ಹಜೇರಿ, ವಿಠuಲ ಮೋಹಿತೆ, ನಾಗಪ್ಪ ಚಿನಗುಡಿ, ಸುರೇಶ ಗುಂಡಣ್ಣವರ, ಬಿಜ್ಜು ನೀರಲಗಿ, ಸಂಗು ಹಾರಿವಾಳ, ದತ್ತು ಹೆಬಸೂರ, ಎಂ.ಎಸ್‌. ಸರಶೆಟ್ಟಿ, ಸುರೇಶ ಹಜೇರಿ, ಈಶ್ವರ ಹೂಗಾರ, ಶಿವಶಂಕರ ಹಿರೇಮಠ, ನಿರಂಜನಶಾ ಮಕಾಂದಾರ, ಶರಣು ಗೊಟಗುಣಕಿ, ಕಾಶೀನಾಥ ಮುರಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next