ಅರಸೀಕೆರೆ: ಜನಪ್ರತಿನಿಧಿಗಳಾದವರೂ ಸಾಮಾನ್ಯಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಬಡವರ್ಗದ ಜನರಿಗೆ ಆರೋಗ್ಯ ಚಿಕಿತ್ಸೆ ಹಾಗೂ ಔಷಧಿ ಉಪಾಚಾರ ಕಾರ್ಯಗಳಿಗೆ ಸಹಾಯ ಹಸ್ತ ನೀಡುವ ಸೇವಾಕಾರ್ಯವನ್ನು ಸುಜಾತ ರಮೇಶ್ ಸ್ನೇಹಿತರ ಬಳಗ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಆರಂಭಿಸಿದೆ ಎಂದು ನಗರಸಭೆ ಸದಸ್ಯೆ ಸುಜಾತ ರಮೇಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಬಡಕುಟುಂಬಗಳಿಗೆ ಲ್ಯಾಪ್‌ಟ್ಯಾಪ್ ಹಾಗೂ ಹೊಲಿಗೆ ಯಂತ್ರ ವಿತರಣೆ ಮಾಡಿ ಮಾತನಾಡಿದ ಅವರು, ನಗರದ ಮಾರುತಿನಗರದ ನಾಗರಿಕರು ಉತ್ತಮ ಹವ್ಯಾಸ ಗಳನ್ನು ಹೊಂದಿದ್ದು, ಒಳ್ಳೆಯ ಮನಸ್ಸುಳ್ಳ ಪರಿಸರ ಪ್ರೇಮಿಗಳು ಹಾಗೂ ಸ್ನೇಹ ಜೀವಿಗಳನ್ನೊಳಗೊಂಡ ಬಳ ಗವಾಗಿದ್ದು, ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಹಾಗೂ ಪರಿಸರ ಸಂರಕ್ಷಣೆ ಕಾರ್ಯ ಕೈಗೊಳ್ಳುವ ಮೂಲಕ ಅತ್ಯಂತ ಕ್ರಿಯಾಶೀಲರ ತಂಡವಾಗಿ ನಿರಂತರವಾಗಿ ಒಂದಲ್ಲ ಒಂದು ಸೇವಾ ಕಾರ್ಯಕ್ರಮಗಳ ನ್ನು ಮಾಡುವಲ್ಲಿ ತನ್ನನ್ನೂ ತಾನೂ ತೊಡಗಿಸಿಕೊಂಡು ಮಾಡುತ್ತಿದ್ದೇವೆ ಎಂದು ಹೇಳಿದರು.
ಸೇವಾ ಕಾರ್ಯಗಳು: ನಗರದ 31 ನೇ ವಾಡ್ ìನಲ್ಲಿ ಟ್ರೀ ಗಾರ್ಡ್‌ನ್‌ಗಳನ್ನು ಮಾಡಿಸಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿರುವುದು, ವಾರ್ಡ್‌ನ ಬಡ ಕುಟುಂಬಗಳಿಗೆ ಅಗತ್ಯ ಔಷಧಿಗಳನ್ನು ಉಚಿತವಾಗಿ ನೀಡುವುದು, ಸರಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು,ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಬಂದಾಗ ಸ್ನೇಹಿತರ ಬಳಗದಿಂದ ಸಹಾಯ ಹಸ್ತ, ವಾರ್ಡ್‌ನಲ್ಲಿ ಮರಣ ಹೊಂದಿದ ಬಡ ಕುಟುಂಬದವರಿಗೆ ಅಂತ್ಯ ಸಂಸ್ಕಾರಕ್ಕಾಗಿ 5 ಸಾವಿರ ಸಹಾಯಧನ, ಶಸ್ತ್ರ ಚಿಕಿತ್ಸೆಗಾಗಿ 5 ಸಾವಿರ ಸಹಾಯ ಧನ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ಇಂಗ್ಲಿಷ್ ವ್ಯಾಕರಣ ತರಗತಿಗಳು, ವಾರ್ಡ್‌ನ ಅಭಿವೃದ್ಧಿಗೆ ಶ್ರಮ, ವಾರ್ಡ್‌ನ ರಸ್ತೆಗಳಲ್ಲಿ ಅಪಘಾತಗಳನ್ನು ತಪ್ಪಿಸಲು ಸಂಚಾರಿ ಕನ್ನಡಿಗಳು ಅಳ ವಡಿಸಿರುವುದು ರಕ್ತದಾನ ಶಿಬಿರ, ಪರಿಸರ ನೈರ್ಮಲ್ಯಕ್ಕೆ ಆದ್ಯತೆ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯ ಕ್ರಮ ಆಯೋಜನೆ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದೇವೆ ಎಂದು ಹೇಳಿದರು.
ಸಮಾಜಮುಖಿಯಾಗಿ ನೆರವು: ಸಮಾಜ ಸೇವಕ ರಮೇಶ್ ಮಾತನಾಡಿ, ನಮ್ಮ ಸ್ನೇಹಿತರ ಬಳಗದ ಒತ್ತಾಸೆಯಂತೆ ಹಲವು ಯೋಜನೆಗಳನ್ನು ರೂಪಿಸಲು ನಿರ್ಧರಿಸಿದ್ದು 31ನೇ ವಾರ್ಡಿನ ಸರಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೋಟ್‌ಬುಕ್ ಲೇಖನ ಸಾಮಗ್ರಿಗಳನ್ನು ನೀಡುವುದು, ವಿದ್ಯಾಭ್ಯಾಸಕ್ಕಾಗಿ ಮಕ್ಕಳನ್ನು ದತ್ತು ತೆಗೆದು ಕೊಳ್ಳುವುದು, ಇಂಜಿನಿಯರಿಂಗ್ ಪ್ರತಿಭಾನ್ವಿತ ವಿದ್ಯಾರ್ಥಿಗೆ ಉಚಿತವಾಗಿ ಲ್ಯಾಪ್ ಟ್ಯಾಪ್, ಮಾರುತಿನಗರದ ಎರಡು ಬಡಕುಟುಂಬಗಳಿಗೆ ಹೊಲಿಗೆ ಯಂತ್ರ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆದರ್ಶ ಲ್ಯಾಬ್‌ನ ಜಗನ್ನಾಥ್ ರೈ, ನಯಾಜ್ ಮಾಸ್ಟರ್, ಶ್ರೀಧರ್, ಕರವೇ ತಾ.ಅಧ್ಯಕ್ಷ ಹೇಮಂತ್ ಕುಮಾರ್, ನಗರಾಧ್ಯಕ್ಷ ಕಿರಣ್‌ಕುಮಾರ್, ಕೃಷ್ಣನಾಯ್ಡು, ಉಮೇಶ್ ನಾಯ್ಕ, ಮಂಜುನಾಥ್, ಶೇಖರ್ ನಾಯ್ಕ, ಅರುಣ್, ರಿಜ್ವಾನ್, ಸಂತೋಷ್, ಮನುಕುಮಾರ್, ಸುರೇಶ್, ಗಿರೀಶ್, ರೇಷ್ಮಾಭಾನು, ಮಂಗಳ ಉಪಸ್ಥಿತರಿದ್ದರು.