Advertisement

53ನೇ ಇಫಿ ಯಲ್ಲಿ 39 ದೇಶಗಳ ಪ್ರತಿನಿಧಿಗಳು ಭಾಗಿ: ರವೀಂದ್ರ ಭಾಕರ್

06:12 PM Nov 24, 2022 | Team Udayavani |

ಪಣಜಿ: ರಾಜ್ಯದಲ್ಲಿ ನಡೆಯುತ್ತಿರುವ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದುವರೆಗೆ 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ 39 ದೇಶಗಳ ಪ್ರತಿನಿಧಿಗಳು ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಅಮೆರಿಕ, ರಷ್ಯಾ, ಯುಕೆ, ದಕ್ಷಿಣ ಕೊರಿಯಾ, ಫ್ರಾನ್ಸ್ ಸೇರಿವೆ ಎಂದು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಸಿಇಒ ರವೀಂದ್ರ ಭಾಕರ್ ತಿಳಿಸಿದ್ದಾರೆ.

Advertisement

ಪಣಜಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ನಿಂದಾಗಿ ಎರಡು ವರ್ಷಗಳ ನಂತರ ಸಂಪೂರ್ಣ ಪ್ರಮಾಣದಲ್ಲಿ ಈ ಚಿತ್ರೋತ್ಸವ ನಡೆಯುತ್ತಿದೆ. ಇದರಿಂದಾಗಿ ದೇಶ-ವಿದೇಶಗಳ ಸಿನಿರಸಿಕರು ಹಬ್ಬಕ್ಕೆ ಸ್ಪಂದಿಸಿದ್ದಾರೆ. ಗೋವಾ ಸರ್ಕಾರವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜೊತೆಗೆ ಈ ವರ್ಷ ಉತ್ಸವವನ್ನು ಹೆಚ್ಚು ಯಶಸ್ವಿಗೊಳಿಸಲು ವಿಶೇಷ ಸಹಾಯವನ್ನು ನೀಡಿದೆ. ಈ ವರ್ಷ, ಮೊದಲ ಬಾರಿಗೆ, 39 ದೇಶಗಳ ಪ್ರತಿನಿಧಿಗಳು ಈ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಪ್ರಸಕ್ತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತಿದೊಡ್ಡ ನಿಯೋಗ ಅಮೆರಿಕದಿಂದ, ನಂತರ ರಷ್ಯಾದ ಪ್ರತಿನಿಧಿಗಳು ಆಗಮಿಸಿದ್ದಾರೆ. ಉತ್ಸವವು ವಿವಿಧ ವಿಭಾಗಗಳಲ್ಲಿ 79 ದೇಶಗಳ 100 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಿದೆ. ಇನ್ನೂ 180 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮೇಲಾಗಿ ಈ ಉತ್ಸವದ  ನಿಮಿತ್ತ ಆಯೋಜಿಸಿದ್ದ ‘ಫಿಲ್ಮ್ ಬಜಾರ್’ಗೆ ನಿರ್ಮಾಪಕರು-ನಿರ್ದೇಶಕರು ಭರ್ಜರಿ ರೆಸ್ಪಾನ್ಸ್ ನೀಡಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವಚಂದ್ರ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next