Advertisement

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿಂದುಳಿದ ಜಾತಿಗಳಿಗೆ ಪ್ರಾತಿನಿಧ್ಯ ನೀ

03:11 PM Dec 14, 2018 | Team Udayavani |

ಹೊಸಪೇಟೆ: ರಾಜ್ಯದ ಪ್ರತಿಶತಃ ಶೇ.35ರಷ್ಟಿರುವ ಜನಂಖ್ಯೆಯಲ್ಲಿ ಹಿಂದುಳಿದ ಮತ್ತು ಅತಿ ಹಿಂದುಳಿದ ಸಣ್ಣ ಪುಟ್ಟ ಜಾತಿಗಳಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಾತಿನಿಧ್ಯ ನೀಡಲು ಸರ್ಕಾರ ಕ್ರಮ ಕೈಗೊ ಳ್ಳ ಬೇಕು ಎಂದು ಆಗ್ರಹಿಸಿ ಕರ್ನಾಟಕ ಹಿಂದುಳಿದ ವರ್ಗಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು,ತಾಲೂಕು ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ತಹಶೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ
ಮನವಿ ಸಲ್ಲಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ವೈ.ಯಮುನೇಶ್‌ ಮಾತನಾಡಿ, ಬಳ್ಳಾರಿ ಜಿಲ್ಲೆಯ 6 ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ 2019ರ ಮಾರ್ಚ್‌ ತಿಂಗಳಿಗೆ
ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ವಾರ್ಡ್‌ಗಳ ಮರುವಿಂಗಡಣೆ ಹಾಗೂ ಜಾತಿವಾರು ಮೀಸಲಾತಿ ನಿಗದಿಗೆ 2011ರ ಜನಗಣತಿ ಆಧಾರವಾಗಿಟ್ಟುಕೊಂಡಿದೆ. ನ್ಯಾಯಮೂರ್ತಿ ಕಾಂತರಾಜ್‌ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿವಾರು ಗಣತಿ ಹಾಗೂ ಸಾಮಾಜಿಕ ಶೈಕ್ಷಣಿಕ ರಾಜಕೀಯ ಸ್ಥಿತಿಗತಿಗಳ ಸಮೀಕ್ಷೆಯ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಹಿಂದುಳಿದ ಜಾತಿಗಳಿಗೆ ಶೇ.35ರಷ್ಟು ಮೀಸಲಾತಿ ನಿಗದಿಪಡಿಸಿದ ಬಳಿ ಕ ಚುನಾವಣೆ ನಡೆಸಲು ಹೊಸದಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ನಗರ ಹಾಗೂ ಪಟ್ಟಣ ಪ್ರದೇಶದ ವಾರ್ಡ್‌ಗಳಲ್ಲಿ ಶೇ.50ಕ್ಕಿಂತ ಹೆಚ್ಚು ಒಬಿಸಿ ಮತದಾರರು ವಾಸಿಸುವ ವಾರ್ಡ್‌ಗಳನ್ನು ಕಡ್ಡಾಯವಾಗಿ ಒಬಿಸಿ ಅಭ್ಯರ್ಥಿಗಳಿಗೆ ಮೀಸಲಾಗಿಡಬೇಕು. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಾಸಿಸುವ ಒಬಿಸಿ ಸಮುದಾಯಗಳ ಒಟ್ಟು ಜನಸಂಖ್ಯೆಯ ಅನುಗುಣವಾಗಿ ಸ್ಥಳಿಯ ಸಂಸ್ಥೆಗಳಲ್ಲಿ ಸ್ಥಾನಗಳ ಹಂಚಿಕೆಯಾಗಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ತಾಲೂಕು ಅಧ್ಯಕ್ಷ ರವಿಶಂಕರ ದೇವರಮನಿ, ಪದಾಧಿಕಾರಿಗಳಾದ, ಬಿ.ಕುಮಾರಸ್ವಾಮಿ, ರಾಘವೇಂದ್ರ, ಭೋಜರಾಜ, ದೇವರಮನಿ ಚಂದ್ರಶೇಖರ್‌, ಬಿಸಾಟಿ ಸತ್ಯನಾರಾಯಣ, ಕಬ್ಬೇರ ಶ್ರೀನಿವಾಸ, ಕೆ.ಶಿವಾನಂದ, ಟಿ.ಹನುಮಂತ, ಶುಭಾಷ್‌ಚಂದ್ರ, ಶ್ಯಾಮಪ್ಪ ಅಗೋಲಿ,
ಗೌರಿಶಂಕರ, ದೇವರೆಡ್ಡಿ, ಜಿ.ಓಂಕಾರೇಶ, ಕೆ.ಶಿವಪ್ಪ, ಬಿಸಾಟಿ ಮೂರ್ತಿ, ರಘುನಾಥ ಸ್ವಕುಳಸಾಳಿ, ಪರಶುರಾಮ, ಜಿ.ಕೆ.ವೆಂಕಟೇಶ್‌, ಭದ್ರಿನಾಥ ಹಾಗೂ ಅಂಬಣ್ಣ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next