Advertisement

ವೀನಸ್‌ಗೆ “ಗೋರಿಲ್ಲಾ’ಎಂದ ಕಮೆಂಟೇಟರ್‌ಗೆ ಗೇಟ್‌ಪಾಸ್‌!

03:50 AM Jan 21, 2017 | Team Udayavani |

ಮೆಲ್ಬರ್ನ್: ವಿಶ್ವದ ಖ್ಯಾತ ಟೆನಿಸ್‌ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ಅವರನ್ನು “ಗೋರಿಲ್ಲಾ’ ಎಂದು ಕರೆದ ಟಿ.ವಿ. ವೀಕ್ಷಕ ವಿವರಣಕಾರರೊಬ್ಬರು ನೌಕರಿ ಕಳೆದುಕೊಂಡಿದ್ದಾರೆ. 

Advertisement

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ವೇಳೆ ಘಟನೆ ನಡೆದಿದೆ. ಈ ಕಮೆಂಟೇಟರ್‌ ಅಮೆರಿಕದ ಡಗ್‌ ಆ್ಯಡ್ಲರ್‌.
ಬುಧವಾರದ ಮಹಿಳಾ ಸಿಂಗಲ್ಸ್‌ ದ್ವಿತೀಯ ಸುತ್ತಿನ ಪಂದ್ಯದ ವೇಳೆ ಆ್ಯಡ್ಲರ್‌ ವೀಕ್ಷಕ ವಿವರಣಕಾರರಾಗಿ ಆಂಗ್ಲ ಖಾಸಗಿ ಟಿ.ವಿ. ವಾಹಿನಿ ಇಎಸ್‌ಪಿಎನ್‌-3 ಜತೆ ಕೆಲಸ ಮಾಡುತ್ತಿದ್ದರು. 7 ಬಾರಿಯ ಗ್ರ್ಯಾನ್‌ ಸ್ಲಾಮ್‌ ವಿಜೇತೆ ವೀನಸ್‌ ವಿಲಿಯಮ್ಸ್‌-ಸ್ಟಿಫಾನಿ ವೋಗಲ್‌ ನಡುವಿನ ಪಂದ್ಯವದು. ವೀನಸ್‌ ಮೊದಲ ಸೆಟ್‌ ಗೆದ್ದಾಗ ಆ್ಯಡ್ಲರ್‌, ವೀನಸ್‌ “ಗೋರಿಲ್ಲಾ’ ರೀತಿಯಲ್ಲಿ ಎದುರಾಳಿಗೆ ಬಿಸಿ ಮುಟ್ಟಿಸಿದ್ದಾರೆ ಎಂಬ ವಾಕ್ಯ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಟಿ.ವಿ. ಸಂಸ್ಥೆ ಇದನ್ನು ನಿರಾಕರಿಸಿದೆ.

“ಆ್ಯಡ್ಲರ್‌ ಗೋರಿಲ್ಲಾ ಎನ್ನುವ ಪದವನ್ನು ಬಳಕೆ ಮಾಡಿಲ್ಲ. ಅವರು ಹೇಳಿದ್ದು “ಗೆರಿಲ್ಲಾ’ (ಯುದ್ಧದ ಒಂದು ಮಾದರಿ)…’ ಎಂದು ಟಿ.ವಿ. ವಾಹಿನಿ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕ ವಿವರಣೆಕಾರನ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಬಳಿಕ ಎಚ್ಚೆತ್ತ ಆ್ಯಡ್ಲರ್‌ ಕ್ಷಮೆಯನ್ನೂ ಕೇಳಿದ್ದಾರೆ. ಆದರೂ ಆ್ಯಡ್ಲರ್‌ ಅವರನ್ನು ಟಿ.ವಿ. ಸಂಸ್ಥೆ ವಜಾ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next