Advertisement

ವಿಶ್ವದ ಮೊದಲ ರೊಬೋಟ್‌ ರಿಪೋರ್ಟರ್‌!

08:00 AM Jan 19, 2017 | Team Udayavani |

ಗ್ವಾಂಗೌl (ಚೀನ): ಇನ್ನು ಪತ್ರಕರ್ತರ ಹುದ್ದೆಯನ್ನೂ ರೊಬೋಟ್‌ ಕಿತ್ತುಕೊಳ್ಳಲಿದೆ! ಹೌದು, ಈ ಅಪಾಯದ ಮುನ್ಸೂಚನೆ ಇದೀಗ ಚೀನದಿಂದ ಬಂದಿದೆ.

Advertisement

ಇಲ್ಲಿನ “ಮೆಟ್ರೋಪೊಲೀಸ್‌ ಡೈಲಿ’ ಪತ್ರಿಕೆ ರೊಬೋಟ್‌ ಬರೆದ ಮೊದಲ ಲೇಖನ ಪ್ರಕಟಿಸಿದೆ. ವಸಂತೋತ್ಸವದಲ್ಲಿನ ಪ್ರವಾಸ ದಟ್ಟ ಣೆಯ ಕುರಿತ ಲೇಖನ ಇದಾಗಿದ್ದು, 300 ಪದಗಳನ್ನೊಳಗೊಂಡಿದೆ.

ಈ ರೊಬೋಟ್‌ ಅನ್ನು ಅಧ್ಯಯಿನಿ ಸಿರುವ ಪೀಕಿಂಗ್‌ ವಿವಿಯ ಪ್ರೊ| ವ್ಯಾನ್‌ ಕ್ಸಿಯೋಜುನ್‌, “ಕ್ಸಿಯೊ ನ್ಯಾನ್‌ ಹೆಸರಿನ ಈ ರೊಬೊಟ್‌ಗೆ ಯಾವುದೇ ಬರಹ ರಚಿಸಲು ಕೇವಲ ಸೆಕೆಂಡುಗಳು ಸಾಕು. ಸಣ್ಣಕತೆ, ದೀರ್ಘ‌ವರದಿಗಳನ್ನೂ ರಚಿಸಬಲ್ಲುದು. ಪತ್ರಿಕಾಲಯದ ಸಿಬಂದಿಗೆ ಹೋಲಿಸಿದರೆ ಇದರ ಪದಕೋಶ ಸಾಮರ್ಥಯ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ವರದಿಗಾರರ ಕೆಲಸವನ್ನು ಇಂಥ ರೊಬೊಟ್‌ಗಳು ಮಾಡಬಲ್ಲವು’ ಎಂದಿದ್ದಾರೆ.

ಆದರೆ, ಕ್ಸಿಯೊ ನ್ಯಾನ್‌ ರೊಬೊಟ್‌ಗೆ ಇಂಟರ್‌ವ್ಯೂ ವೇಳೆ ಫಾಲೋಅಪ್‌ ಪ್ರಶ್ನೆ ಕೇಳಲು, ಗುಣಮಟ್ಟದ ಸುದ್ದಿಗಳನ್ನು ಆರಿಸುವ ಬಗ್ಗೆ ಗೊತ್ತಿಲ್ಲ. ಮೆಟ್ರೊಪೊಲೀಸ್‌ ಡೈಲಿಯ ವಿಶೇಷ ಲ್ಯಾಬೊರೇಟರಿ ಇದನ್ನು ನಿರ್ಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next