Advertisement

ನದಿ ಉಳಿವಿನ ಬಗ್ಗೆ ಅ.2ರಂದು ವರದಿ

08:30 AM Sep 06, 2017 | Harsha Rao |

ತಿರುವನಂತಪುರಂ: ನದಿಗಳ ಪುನರುಜ್ಜೀವನಕ್ಕೆ ಸಮಗ್ರ ಮತ್ತು ಸುಸ್ಥಿರ ಯೋಜನೆಯ ಅಗತ್ಯವಿದೆ. ಇದಕ್ಕೆ ಸಂಬಂಧಿಸಿದ ಯೋಜನಾ ವರದಿಯನ್ನು ಅ.2ಕ್ಕೆ  ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು ಎಂದು ನದಿ ಉಳಿಸಿ ಅಭಿಯಾನ ರೂವಾರಿ ಸದ್ಗುರು ಜಗ್ಗಿ ವಾಸುದೇವ್‌ ಹೇಳಿದ್ದಾರೆ.  ನದಿಗಳನ್ನು ಉಳಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಸಮಗ್ರ ಯೋಜನೆಯೇ ಇಲ್ಲ. ನದಿಗಳನ್ನು ಮತ್ತೆ ಜೀವಂತವಾಗಿಸಿ, ಹರಿಯುವಂತೆ ಮಾಡಿದರೆ ನಮ್ಮ ಜನಜೀವನವೂ ಮತ್ತೆ ಹರಿದಂತೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

ದೇಶದಲ್ಲಿರುವ ನದಿಗಳಲ್ಲಿ ಶೇ.96ರಷ್ಟು ಅರಣ್ಯ ಪ್ರದೇಶಗಳಿಂದ ಹರಿಯುವಂಥವು. ಶೇ. 25ರಷ್ಟು ಭೂಮಿ ಸರ್ಕಾರಕ್ಕೆ ಸೇರಿದ್ದು, ಅಲ್ಲಿ ಕಾಡು ಬೆಳೆಸಿದರೆ ನದಿಗಳ ಉಳಿವಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದರು. ಜೊತೆಗೆ ರೈತರು ತಮ್ಮ ಆದಾಯಗಳನ್ನು ಹೆಚ್ಚಿಸಲು ವಿವಿಧ ಮಾದರಿಯ ಬೆಳೆ ಆಧಾರಿತ ಕೃಷಿಯ ಮಾದರಿಗಳನ್ನು ಪ್ರಸ್ತುತ ಪಡಿಸುತ್ತೇವೆ. ಇದರ ನಂತರ ಕೈಗಾರಿಕೆಗಳಿಗೆ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಬರುವ ಮಾದರಿಯಲ್ಲಿ ಮೂಲಸೌಕರ್ಯ ನಿರ್ಮಿಸುವಂತೆ ಕೈಗೊಳ್ಳಲು ಮನವಿ ಮಾಡಲಾಗುತ್ತದೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next