Advertisement

“ಕರಾವಳಿ ಪ್ರದೇಶದ ಅಭಿವೃದ್ಧಿಗೆ ಯೋಜನ ವರದಿ’

10:26 PM Mar 18, 2020 | mahesh |

ಮಹಾನಗರ: ಕರಾವಳಿ ಜಿಲ್ಲೆಗಳ ಜನತೆ ಅಭಿವೃದ್ಧಿ ಪ್ರಾಧಿಕಾರದಿಂದ ವಿನೂತನ ಯೋಜನೆ ಗಳನ್ನು ನಿರೀಕ್ಷಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಜನರಿಂದ ಹೊಸ ಯೋಜನಗಳ ಬಗ್ಗೆ ಸಲಹೆ, ಸೂಚನೆಗಳು ಬರುತ್ತಿವೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ವಿನೂತನ ಯೋಜನೆಗಳ ಬಗ್ಗೆ ಯೋಜನ ವರದಿ ಮತ್ತು ಅಂದಾಜು ಪಟ್ಟಿಯನ್ನು ತಯಾರಿಸಿ ಮಂಜೂರಾತಿ ಆದ ಕೂಡಲೇ ಆದ್ಯತೆಯ ಮೇಲೆ ಕೆಲವು ಕಾಮಗಾರಿಗಳನ್ನು ಆರಂಭಿಸುವಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಅಧಿಕಾರಿಗಳ ಸಭೆಯಲ್ಲಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್‌ ಡಿ’ಸೋಜಾ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಪಂಚಾಯತ್‌ರಾಜ್‌ ಎಂಜಿನಿಯರ್‌ ವಿಭಾಗ, ಕಾರ್ಯ ಪಾಲಕ ಅಭಿಯಂತರ ಆರ್‌.ಕೆ. ರಾಜು, ದಕ್ಷಿಣ ಕನ್ನಡ ನಿರ್ಮಿತಿ ಕೆಂದ್ರ, ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ನಾವಿ, ದಕ್ಷಿಣ ಕನ್ನಡ ಜಿಲ್ಲೆ ಮೀನುಗಾರಿಕೆ ಸಹಾಯಕ ನಿರ್ದೇಶಕಿ ಡಾ| ಸುಶ್ಮಿತಾ ರಾವ್‌, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ್‌ ಕುಮಾರ್‌ ಯು., ದಕ್ಷಿಣ ಕನ್ನಡ ಜಿಲ್ಲೆ ತೋಟಗಾರಿಕೆ ಉಪನಿರ್ದೇಶಕ ಎಚ್‌.ಆರ್‌. ನಾಯ್ಕ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಾ| ಉದಯ ಶೆಟ್ಟಿ, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಸೀನಿಯರ್‌ ಎಂಜಿನಿಯರ್‌ ಮಹಮ್ಮದ್‌ ನಝೀರ್‌ ಹುಸೇನ್‌, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಜಿ.ಕೆ. ಸಂಜೀವ ಕುಮಾರ್‌, ಕೆ.ಆರ್‌.ಐ.ಡಿ.ಎಲ್‌. ಸಹಾ ಯಕ ಅಭಿಯಂತರ ಮಿಥುನ್‌ ರಾಜ್‌. ಎಂ., ಮಂಗಳೂರು ಮಹಾನಗರ ಪಾಲಿಕೆ ಕಿರಿಯ ಅಭಿಯಂತರ ನಿತ್ಯಾನಂದ ಕೆ.ಎಸ್‌., ಕರಾವಳಿ ಪ್ರಾಧಿಕಾರದ ವಲಯಾಧಿಕಾರಿ ಕೆ. ಚಂದ್ರಕಾಂತ್‌ ಮೊದಲಾದವರು ಉಪಸ್ಥಿತರಿದ್ದರು.

ವಿನೂತನ ಯೋಜನೆಗಳ ಜಾರಿಗೆ ಚರ್ಚೆ
ವಿನೂತನ ಯೋಜನೆಗಳಾದ ಬಂಗ್ರ ಕೂಳೂರಿನಲ್ಲಿ ಜಲಕ್ರೀಡೆ ಅಳವಡಿಸಲು, ತೇಲುವ ಜೆಟ್ಟಿ ನಿರ್ಮಾಣ, ಬೀಚ್‌ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಜಿಟಲ್‌ ಸೈನ್‌ ಬೋರ್ಡ್‌ ಅಳವಡಿಕೆ, ಆದ್ಯತೆಯ ಮೇರೆಗೆ ಮೀನು ಮಾರುಕಟ್ಟೆ ನಿರ್ಮಾಣ, ತೋಟಗಾರಿಕೆ ಇಲಾಖೆಯ ಸಹಭಾಗಿತ್ವದಲ್ಲಿ ಕದ್ರಿ ಪಾರ್ಕ್‌ ಕೆರೆ ಅಭಿವೃದ್ಧಿ, ಮೀನುಗಾರಿಕೆ ಕೊಂಡಿ ರಸ್ತೆ ನಿರ್ಮಾಣ, ಹೈವೇ ಪಕ್ಕದಲ್ಲಿ ನದಿ ತೀರದ ಸೌಂದರ್ಯ ವೀಕ್ಷಣೆಗೆ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸುವುದು. ಆದ್ಯತೆಯ ಮೇರೆಗೆ ಕುದ್ರುಗಳ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಕೈಗೊಳ್ಳುವ ಬಗ್ಗೆ ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಯೋಜನ ವರದಿ ತಯಾರಿಸುವುದು ಕೆಲವು ಯೋಜನೆಗಳನ್ನು ಶೀಘ್ರ ಕೈಗೊಳ್ಳಬೇಕಾದ ಆವಶ್ಯಕತೆಯನ್ನು ಸಭೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next