Advertisement

ಹತ್ತನೇ ಬಾರಿಗೆ ಬಡ್ಡಿದರ ಯಥಾ ಸ್ಥಿತಿ; ಆರ್‌ಬಿಐ ವಿತ್ತೀಯ ಸಲಹಾ ಸಮಿತಿ ನಿರ್ಧಾರ

09:31 PM Feb 10, 2022 | Team Udayavani |

ಮುಂಬೈ: ಸತತ ಹತ್ತನೇ ಬಾರಿಗೆ ಬಡ್ಡಿದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಲಾಗಿದೆ. ಮುಂಬೈನಲ್ಲಿ ಗುರುವಾರ ಮುಕ್ತಾಯಗೊಂಡ ಆರ್‌ಬಿಐನ ಆರು ಸದಸ್ಯರ ವಿತ್ತೀಯ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಹೀಗಾಗಿ ರೆಪೋ ಮತ್ತು ರಿವರ್ಸ್‌ ರೆಪೋ ದರ ಕ್ರಮವಾಗಿ ಶೇ.4, ಶೇ.3.35ರಲ್ಲಿ ಮುಂದು ವ ರಿಯಲಿದೆ. 2020ರ ಆಗಸ್ಟ್‌ನಿಂದ ಬಡ್ಡಿದರ ಯಥಾಸ್ಥಿತಿ ಕಾಪಾಡಿಕೊಂಡು ಬರಲಾಗುತ್ತಿದೆ.

ಸಭೆ ಬಳಿಕ ಮಾತನಾಡಿದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌, ಹಣದುಬ್ಬರ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ವಿಶೇಷವಾಗಿ ಹಣದುಬ್ಬರ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದರಿಂದ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ ಎಂದಿ ದ್ದಾರೆ.

ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ 2022-23ನೇ ಸಾಲಿನಲ್ಲಿ ಮಧ್ಯಮ ಪ್ರಮಾಣದಲ್ಲಿ ಅಂದರೆ ಶೇ.4.5ರ ಪ್ರಮಾಣದಲ್ಲಿ ಇರುವ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಳಿಕೆಯೇ ಸವಾಲಿನದ್ದಾಗಲಿದೆ ಎಂದಿದ್ದಾರೆ. 22-23ನೇ ವಿತ್ತ ವರ್ಷದಲ್ಲಿ ಜಿಡಿಪಿ ಪ್ರಗತಿ ದರ ಶೇ.7.8ರಷ್ಟಿರ ಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:ಸ್ಯಾಮ್‌ಸಂಗ್‌ನ 3 ಫೋನ್‌ ಬಿಡುಗಡೆ; ಎಸ್‌22, ಎಸ್‌22+, ಎಸ್‌22 ಅಲ್ಟ್ರಾ

Advertisement

ವಿತ್ತೀಯ ಸ್ಥಿರತೆಗೆ ಖಾಸಗಿ ಕ್ರಿಪ್ಟೋ ಆತಂಕ
ದೇಶದ ವಿತ್ತೀಯ ಸ್ಥಿರತೆಗೆ ಖಾಸಗಿ ಕ್ರಿಪ್ಟೋ ಕರೆನ್ಸಿ ಅಪಾಯಕಾರಿ ಎಂದು ಆರ್‌ಬಿಐ ಗವರ್ನರ್‌ ಪ್ರತಿಪಾದಿಸಿದ್ದಾರೆ. ಅಂಥ ವ್ಯವಸ್ಥೆಗೆ ಯಾವುದೇ ರೀತಿಯ ಮೂಲಭೂತ ಮೌಲ್ಯ ಇಲ್ಲ. ಖಾಸಗಿ ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡುವವರು ತಮ್ಮದೇ ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು ಎಂದಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಡಿಜಿಟಲ್‌ ರೂಪಾಯಿ ಸಾಮಾನ್ಯ ಕರೆನ್ಸಿಯಂತೆಯೇ ಇರಲಿದೆ ಎಂದು ಆರ್‌ಬಿಐನ ಡೆಪ್ಯುಟಿ ಗವರ್ನರ್‌ ಟಿ.ರವಿಶಂಕರ್‌ ಹೇಳಿದ್ದಾರೆ.

ಅದು ಏನಿದ್ದರೂ, ಪರಿವರ್ತನೆ ಮಾಡಿಕೊಳ್ಳಲು ಅವಕಾಶ ಇದೆ ಎಂದಿದ್ದಾರೆ. ಸಾಮಾನ್ಯ ರೂಪಾಯಿಯನ್ನು ಪರ್ಸ್‌ಗಳಲ್ಲಿ, ಪಾಕೆಟ್‌ಗಳಲ್ಲಿ ಇರಿಸಲು ಸಾಧ್ಯವಾದರೆ, ಮೊಬೈಲ್‌ನಲ್ಲಿ ಡಿಜಿಟಲ್‌ ರೂಪಾಯಿ ಇರಿಸಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next