Advertisement

ಇಡಿ ನೋಟಿಸ್‌ಗೆ ಉತ್ತರಿಸುತ್ತೇನೆ

09:48 AM Jan 17, 2018 | |

ಬೆಂಗಳೂರು: ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಅಡಿ ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸ್‌ ನನ್ನ ಕೈಗೆ ತಲುಪಿಲ್ಲ ಎಂದು ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಜಾರಿ ನಿರ್ದೇಶನಾಲಯ ನನಗೆ ನೋಟಿಸ್‌ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ನನ್ನ ಮಗನ ಕಂಪನಿಗೆ ನೋಟಿಸ್‌ ಬಂದಿರುವ ಬಗ್ಗೆ ಆಡಿಟರ್‌ ಜೊತೆಗೆ ಚರ್ಚೆ ನಡೆಸಿ ನೋಟಿಸ್‌ಗೆ ಉತ್ತರ ನೀಡುತ್ತೇನೆ. 

Advertisement

ಚುನಾವಣೆ ಸಂದರ್ಭದಲ್ಲಿ ನೋಟಿಸ್‌ ನೀಡಿರುವ ಬಗ್ಗೆ ರಾಜ್ಯದ ಜನತೆಗೆ ಅರ್ಥ ವಾಗುತ್ತದೆ. ಈ ಬಗ್ಗೆ ನನಗೇನೂ ಭಯವಿಲ್ಲ. ನಾನು ಕಾನೂನು ಪ್ರಕಾರ ಉತ್ತರ ಕೊಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next