Advertisement

ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ 27ರಂದು ಬಂದ್‌

01:56 PM Sep 25, 2021 | Team Udayavani |

ಶಹಾಪುರ: ವಿವಾದಿತ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಸೆ.27ರಂದು ನಡೆಯಲಿರುವ ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಂದ್‌ ಮಾಡಲಾಗುವುದು ಎಂದು ಹಿರಿಯ ನ್ಯಾಯವಾದಿ ಬಾಸ್ಕರ್‌ರಾವ್‌ ಮೂಡಬೂಳ ತಿಳಿಸಿದರು. ನಗರದ ಬಸವೇಶ್ವರ ವೃತ್ತದಲ್ಲಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿವಿಧ ಬೇಡಿಕೆ ಈಡೇರಿಕೆಗೆ ಹೋರಾಟ ನಡೆಸಲಾಗುತ್ತದೆ.

Advertisement

ಸಂಯುಕ್ತ ಕಿಸಾನ್‌ ಮೋರ್ಚಾ ವತಿಯಿಂದ ಬಂದ್‌ ಗೆ ಕರೆ ನೀಡಿದ್ದು, ಇದರಲ್ಲಿ ಪ್ರತಿಯೊಬ್ಬ ಅನ್ನದಾತರು ಕೂಡ ಭಾಗವಹಿಸುವುದು ಅಗತ್ಯ. ಸರ್ಕಾರ ಮೂರು ಕೃಷಿ ಕಾಯ್ದೆ ಜಾರಿಗೊಳಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾರಕ ಬೆಳವಣಿಗೆಯಾಗಿದೆ. ರೈತ ವಿರೋಧಿ ನೂತನ ಕೃಷಿ ಕಾಯ್ದೆಗಳಾದ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಿ ಜಾರಿಗೊಳಿಸಿರುವುದನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚೆನ್ನಪ್ಪ ಆನೇಗುಂದಿ ಮಾತನಾಡಿ, ಇಂಧನ ಬೆಲೆ ಇಳಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಡೆದ ಕೋಟ್ಯಂತರ ರೂ. ವೆಚ್ಚದ ಯಲ್ಲಮ್ಮದೇವಿ ಗುಡಿ, ಸೈದಾಪುರ, ಸಗರ, ಗೋಗಿ ಹೊಸಕೇರಿ, ರಸ್ತಾಪುರದಿಂದ ಶಾರದಳ್ಳಿ ರಸ್ತೆ ಅಗಲೀಕರಣ, ಡಾಂಬರೀಕರಣ ರಸ್ತೆಗಳು ಕಳಪೆ ಮಟ್ಟದಿಂದ ಕೂಡಿದ್ದು ಸಮಗ್ರ ತನಿಖೆ ಮಾಡಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಸಿದರು. ಈ ವೇಳೆ ಶರಣಗೌಡ ಗೂಗಲ್‌, ದಾವಲಸಾಬ್‌ ನದಾಫ್‌, ಜೈಲಾಲ್‌ ತೋಟದಮನಿ, ಎಸ್‌.ಎಂ. ಸಾಗರ್‌, ಶರಣು ಮದ್ರಕಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next