Advertisement

370ನೇ ವಿಧಿ ರದ್ದು: ಸುಪ್ರೀಂ ವಿಚಾರಣೆ ಆರಂಭ

09:54 PM Aug 02, 2023 | Team Udayavani |

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಬುಧವಾರ ಸುಪ್ರೀಂ ಕೋರ್ಟ್‌ ಆರಂಭಿಸಿದೆ. ಸಿಜೆಐ ಡಿ.ವೈ.ಚಂದ್ರಚೂಡ್‌, ನ್ಯಾ. ಸಂಜಯ್‌ ಕಿಶನ್‌ ಕೌಲ್‌, ನ್ಯಾ. ಸಂಜೀವ್‌ ಖನ್ನಾ, ನ್ಯಾ. ಬಿ.ಆರ್‌.ಗವಾಯ್‌ ಮತ್ತು ನ್ಯಾ. ಸೂರ್ಯಕಾಂತ್‌ ಅವರಿದ್ದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು, ಪ್ರತಿದಿನದ ಆಧಾರದಲ್ಲಿ ವಿಚಾರಣೆ ನಡೆಸಲು ಅರ್ಜಿಗಳನ್ನು ಕೈಗೆತ್ತಿಕೊಂಡಿದೆ. ಸೋಮವಾರ ಮತ್ತು ಶುಕ್ರವಾರ ಹೊರತುಪಡಿಸಿ, ಪ್ರತಿದಿನ ಈ ಅರ್ಜಿಗಳ ವಿಚಾರಣೆ ನಡೆಸಲಾಗುವುದು ಎಂದು ಈ ಹಿಂದೆ ನ್ಯಾಯಪೀಠ ಹೇಳಿತ್ತು.

Advertisement

“ನ್ಯಾಯಾಲಯವು ಅರ್ಜಿದಾರರ ಪರವಾಗಿ ಪ್ರಮುಖ ನ್ಯಾಯವಾದಿಗೆ ಎಲ್ಲಾ ಅಂಶಗಳ ಮೇಲೆ ವಾದಿಸಲು ಅವಕಾಶ ನೀಡುತ್ತದೆ ಮತ್ತು ಉಳಿದ ನ್ಯಾಯವಾದಿಗಳು ಕೆಲವು ಅಂಶಗಳನ್ನು ಸೇರಿಸಬಹುದು. ಇದರಿಂದ ಯಾವುದೇ ಅಂಶಗಳು ಪುನರಾವರ್ತನೆ ಆಗುವುದಿಲ್ಲ” ಎಂದು ಸಿಜೆಐ ಡಿ.ವೈ.ಚಂದ್ರಚೂಡ್‌ ಹೇಳಿದರು. ಅರ್ಜಿದಾರರ ಪರವಾಗಿ ಪ್ರಮುಖ ನ್ಯಾಯವಾದಿಯಾಗಿ ವಾದ ಮಂಡಿಸಲಿರುವ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌, “ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರದ ಏಕೀಕರಣವು ಪ್ರಶ್ನಾತೀತವಾಗಿದೆ, ಈ ಹಿಂದೆಯೂ ಪ್ರಶ್ನಾತೀತವಾಗಿತ್ತು ಹಾಗೂ ಯಾವಾಗಲೂ ಪ್ರಶ್ನಾತೀತವಾಗಿಯೇ ಉಳಿಯಲಿದೆ” ಎಂದು ಹೇಳಿದರು.

2019ರ ಆ.5ರಂದು, ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದುಪಡಿಸಿತ್ತು. ಅಲ್ಲದೇ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಗಂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next