Advertisement

ರಸ್ತೆಗಳನ್ನು ಆದಷ್ಟು ಬೇಗ ಸರಿಪಡಿಸಿ

10:02 PM Sep 21, 2019 | mahesh |

ಈ ಬಾರಿ ಮಳೆಗಾಲ ಆರಂಭಗೊಂಡಿದ್ದೇ ಜುಲೈ ತಿಂಗಳ ಕೊನೆಯಲ್ಲಿ . ತದನಂತರ ಬಿರುಸಿನ ಮಳೆ . ಈಗ ಸಹ ಗಾಳಿ ಮಳೆ ಮುಗಿದಿಲ್ಲ ಮಳೆಯೋ ಮಳೆ . ನಗರದ ಕೆಲವೆಲ್ಲಾ ಮುಖ್ಯ ರಸ್ತೆಗಳೆಲ್ಲಾ ತೋಡಿನಲ್ಲಿ, ನದಿಗಳಲ್ಲಿ ನೀರು ಹರಿದಂತೆ ಭಾಸವಾಗುತ್ತಿತ್ತು. ಸಿಟಿ ಸೆಂಟರ್‌ ಎದುರು ನವಭಾರತ್‌ ಸರ್ಕಲ್‌, ಬಂಟ್ಸ್‌ ಹಾಸ್ಟೆಲ್‌, ಜ್ಯೋತಿ ಟಾಕೀಸಿನಿಂದ ಇತ್ಯಾದಿ ಕಡೆಗಳಲ್ಲಿ ಕೃತಕ ನೆರೆ ಬಂದು ವಾಹನ ಸಂಚಾರಕ್ಕೆ ಹಾಗೂ ಪಾದಾಚಾರಿಗಳಿಗೆ ತುಂಬಾ ತೊಂದರೆ , ಸಂಕಷ್ಟಗಳನ್ನು ಅನುಭವಿಸಬೇಕಾದ ಪ್ರಸಂಗ ಉದ್ಭವವಾಯಿತು.

Advertisement

ರಸ್ತೆಗಳಲ್ಲಿ ಮಳೆ ನೀರು ರಭಸದಿಂದ ಹರಿಯುವಾಗ ಇಳಿಜಾರು ಪ್ರದೇಶಗಳಲ್ಲಿನ ರಸ್ತೆಗಳ ಡಾಮರು ಕೊಚ್ಚಿ ಹೋಗಿ ಚಿಂದಿಯಾಗಿ ರಸ್ತೆಗಳಲ್ಲಿ ದೊಡ್ಡ ದೊಡ್ಡ ಹೊಂಡಗಳು ಕಾಣ ಸಿಗುತ್ತವೆ. ನೆಲ್ಲಿಕಾಯಿ ರಸ್ತೆಯಿಂದ (ಸ್ಟೇಟ್‌ಬ್ಯಾಂಕ್‌ ಬದಿಯ ರಸ್ತೆ) ಬಂದರು ಪೊಲೀಸ್‌ ಠಾಣೆಗೆ ಹೋಗುವ ರಸ್ತೆಯ ದುರಾವಸ್ಥೆ ಏನೆಂದು ಹೇಳುವುದು. ದ್ವಿಚಕ್ರ ವಾಹನ ಸವಾರರಿಗೆ ಇತ್ತ ಕಡೆ ಹೋಗುವಾಗ ಸೊಂಟ ಜಾರಿ ಹೋಗಿ ಬಿದ್ದಂತೆ ಅನುಭವ. ವಾಹನ ಚಾಲಕರು ಸಹ ಡಿಸ್ಕೊ ಡ್ಯಾನ್ಸ್‌ ಮಾಡಿದಂತ ಅನುಭವ. ಇತ್ತ ರಾವ್‌ ಆ್ಯಂಡ್‌ ಸರ್ಕಲ್‌ನಿಂದ ಬಂದರಿಗೆ ಹೋಗುವ ರಸ್ತೆಯು ಸಹ ಹೊಂಡ ಗುಂಡಿಗಳಿಂದ ತುಂಬಿ ತುಂಬಾ ದುಸ್ಥಿತಿಯಲ್ಲಿದೆ.

ಪಾದಚಾರಿಗಳ ವಾಹನ ಚಾಲಕರ ಗೋಳು ಹೇಳತೀರದು. ಇಲ್ಲಿ ಮಾತ್ರ ಅಲ್ಲ ನಗರದ ಇನ್ನಿತರ ಕಡೆಗಳಲ್ಲೂ ಅಂದರೆ ಬಲ್ಮಠ ನ್ಯೂ ರೋಡ್‌, ಹೈಲ್ಯಾಂಡ್‌, ಪಳ್ನೀರ್‌ ಕಾಪಿ ಗುಡ್ಡಕ್ಕೆ ಹೋಗುವ ರಸ್ತೆ, ವಾಮನ್‌ ನಾಯಕ್‌ ರಸ್ತೆ, ಜೆಪ್ಪು, ಬಿ.ವಿ. ರಸ್ತೆ, ಅತ್ತಾವರ ಹೀಗೆ ಹಲವಾರು ರಸ್ತೆಗಳಲ್ಲಿ ಹೊಂಡ- ಗುಂಡಿ ಬಿದ್ದು, ಸಂಚಾರಕ್ಕೆ ಅಯೋಗ್ಯವಾಗಿ ಅಪಘಾತಗಳಿಗೆ ಕಾರಣವಾಗಿದೆ. ಮನಪಾ ಎಂಜಿನಿಯರ್‌ಗಳು ಇಂಥ ರಸ್ತೆಗಳನ್ನು ಪರಿಶೀಲಿಸಿ ಕೂಡಲೇ ರಸ್ತೆಗಳನ್ನು ರಿಪೇರಿ ಮಾಡಲು ಕ್ರಮ ತೆಗೆದುಕೊಳ್ಳಬೇಕಾಗಿದೆ.

-  ಜೆ.ಎಫ್. ಡಿ’ಸೋಜಾ, ಅತ್ತಾವರ

Advertisement

Udayavani is now on Telegram. Click here to join our channel and stay updated with the latest news.

Next