Advertisement

ಕವಿವಿ ಗೋಪುರ ಗಡಿಯಾರಗಳ ದುರಸ್ತಿ

04:20 PM Sep 02, 2021 | Team Udayavani |

ಹುಬ್ಬಳ್ಳಿ: ರಾಜ್ಯದ ಪ್ರಮುಖ ವಿಶ್ವ ವಿದ್ಯಾಲಯಗಳಲ್ಲಿ ಒಂದಾದ ಕರ್ನಾಟಕ ‌ ವಿಶ್ವವಿದ್ಯಾಲಯದ ವಿದ್ಯಾಸೌಧದಲ್ಲಿ ಏಳಂತಸ್ತುಗಳ ‌ ಮೇಲಿದ್ದ ಐತಿಹಾಸಿಕ ‌ ಗೋಪುರ ಗಡಿಯಾರ‌ಗಳನ್ನು ನೈರುತ್ಯ ರೈಲ್ವೆಯ ಹುಬ್ಬಳ್ಳಿಯ ರೈಲ್ವೆ ಕಾರ್ಯಾಗಾರ‌ ತಾಂತ್ರಿಕ ಸಿಬ್ಬಂದಿ ತಂಡ ‌ ದುರ‌ಸ್ತಿ ಮಾಡಿದೆ.

Advertisement

1962 ರಲ್ಲಿ ಇಂಗ್ಲೆಂಡ್‌ನ‌ಲ್ಲಿ ತಯಾರಾಗಿ ಮುಂಬೈಮ ಟೈಮ್‌ ಮಷಿನ್‌ ಕಂಪನಿಯಿಂದ ಜೋಡಿಸಲ್ಪಟ್ಟು ಸ್ಥಾಪಿತವಾದ ಗ‌ಡಿಯಾರ ಗೋಪುರದ ಉತ್ತರ ‌ ಹಾಗೂ ದಕ್ಷಿಣಾಭಿಮುಖವಾದ ಎರಡು ಗ‌ಡಿಯಾರಗಳು ಕೆಲ ವರ್ಷಗಳಿಂದ ನಿಂತು ಹೋಗಿದ್ದವು. ವಿಶ್ವ ವಿದ್ಯಾಲಯದ ಕುಲಪತಿ ಪ್ರೊ|ಕೆ.ಬಿ.ಗುಡಸಿ ಅವರು ನೈರುತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ‌ವ್ಯವಸ್ಥಾಪಕ ಪಿ.ಕೆ.ಮಿಶ್ರಾ ಅವರನ್ನು ಈ ಐತಿಹಾಸಿಕ ‌ ಗೋಪುರ ‌ ಗಡಿಯಾರ‌ಗಳ‌ ದುರಸ್ತಿಗಾಗಿ ಸಂಪರ್ಕಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಸಹಾಯಕ ಕಾರ್ಯಾಗಾರ ನಿರ್ವಾಹಕ ‌ ಪ್ರಭಾತ ಝಾ ನೇತೃತ್ವದಲ್ಲಿ ವರಿಷ್ಠ ವಿಭಾಗೀಯ ಅಭಿಯಂತರ ‌ ವಿಶ್ವನಾಥ, ಗಡಿಯಾರ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ತಾಂತ್ರಿಕ ಸಿಬ್ಬಂದಿಗಳಾದ  ಮನ್ಸೂರ್‌ ಅಲಿ ಮುಲ್ಲಾ, ದೇವೇಂದ್ರ ಎಸ್‌. ಲೊಂಡೆ, ಯೂನಸ್‌ ಅವರೊಂದಿಗೆ ವರಿಷ್ಠ ವಿಭಾಗೀಯ ಅಭಿಯಂತರ ‌ ಎದ್ದುವೆಂಕಟರಾವ್‌, ಟೆಕ್ನಿಷಿಯನ್‌ ವಿಜಯ ಕುಮಾರ ಹೆಬ್ಬಳ್ಳಿ ಅವರನ್ನೊಳಗೊಂಡ ತಂಡ ಈ ಗಡಿಯಾರಗಳನ್ನು ದುರ‌ಸ್ತಿ ಮಾಡಿದೆ

ಗ‌ಡಿಯಾರದ ಕೆಲ ಬಿಡಿಭಾಗಗಳು ಸ್ಥಳೀಯ ಮಾರುಕಟ್ಟೆಯಲ್ಲಿ ದೊರಕ ‌ ದ್ದರಿಂದ ಸಿಬ್ಬಂದಿ ಕಾರ್ಯಾಗಾರದ‌ಲ್ಲೇ ತಯಾರಿಸಿದರು. ಎಲ್ಲಾ ಸವಾಲುಗ ‌ಳನ್ನು ಎದುರಿಸಿ ಪರಂಪ‌ರೆಯ ಸಂರ‌ಕ್ಷಣೆಯ ಕಾರ್ಯದಲ್ಲಿ ಸುಮಾರು ಒಂದು ತಿಂಗಳು ತ‌ಮ್ಮನ್ನು ತೊಡಗಿಸಿಕೊಂಡಿದ್ದರು. ಕೊನೆಗೆ ಆಗಸ್ಟ್‌ 28 ರಂದು ಯಶ‌ಸ್ವಿಯಾಗಿ ಈ ಕಾರ್ಯನಿರ್ವಹಿಸಿದೆ.

ಧಾರವಾಡ ‌ ಕ‌ರ್ನಾಟಕ ಕಾಲೇಜಿನ ಕಟ್ಟಡದ ‌ ಆವರ‌ಣವು ಹಿಂದಿನ ‌ ಸದರ್ನ್ ಮರಾಠಾ ರೈಲ್ವೆಯ ಪ್ರಥಮ ಪ್ರಧಾನ ಕ‌ಚೇರಿಯಾಗಿ ಸುಮಾರು ನೂರು ವರ್ಷಗಳ ಹಿಂದೆ ಕಾರ್ಯ ನಿರ್ವಹಿಸುತ್ತಿತು ಎಂಬುದು ಇಲ್ಲಿ ಗಮನಿಸ‌ಬೇಕಾದ ಅಂಶ. ರೈಲ್ವೆ ಕಾರ್ಯಾಗಾರದ‌ ತಂಡದ ಪರಿಶ್ರಮವನ್ನು ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ‌ ಸಂಜೀವ ಮಿಶ್ರಾ ಶ್ಲಾಘಿಸಿದರು. ಅಲ್ಲದೇ ಈ ಬಗೆಯ ಪ್ರಯತ್ನಗಳು ಸಾರ್ವಜನಿಕ ‌ರಲ್ಲಿ ಜಾಗೃತಿ ಮೂಡಿಸುವುವು. ನೈಋತ್ಯ ರೈಲ್ವೆ ಈ ನಿಟ್ಟಿನಲ್ಲಿ ಆಸ‌ಕ್ತಿಯುಳ್ಳ ವ್ಯಕ್ತಿಗಳು, ಖಾಸಗಿ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳೊಂದಿಗೆ ಕೈಜೋಡಿಸಲು ಸಿದ್ಧ ಎಂದ‌ರು.

Advertisement

Udayavani is now on Telegram. Click here to join our channel and stay updated with the latest news.

Next