Advertisement

ಪಂಚಾಯತ್‌ನಿಂದ ದುರಸ್ತಿ; ಹೊಂಡ,ಗುಂಡಿಗಳಿಗೆ ತಾತ್ಕಾಲಿಕ ಮುಕ್ತಿ 

05:55 AM Jul 21, 2017 | |

ಸಸಿಹಿತ್ಲು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಸಿಹಿತ್ಲು ಬೀಚ್‌ಗೆ ಆಗಮಿಸುವ ಪ್ರವಾಸಿಗ ರನ್ನು ಹೊಂಡ,ಗುಂಡಿಗಳಿಂದ ಸ್ವಾಗತಿಸುತ್ತಿದ್ದ ರಸ್ತೆಗೆ ಜು.20ರಂದು ಹಳೆ ಯಂಗಡಿ ಗ್ರಾಮ ಪಂಚಾಯತ್‌ ತಾತ್ಕಾ ಲಿಕ ಪರಿಹಾರವಾಗಿ ದುರಸ್ತಿ ಕಾರ್ಯ ನಡೆಸಿದೆ.

Advertisement

ಸಸಿಹಿತ್ಲು ಮುಂಡ ಪ್ರದೇ ಶದ ಬೀಚನ್ನು  ಪ್ರವೇ ಶಿ ಸುವ ಈ ರಸ್ತೆಯ ಸಮ ಸ್ಯೆ ಬಗ್ಗೆ ಉದಯವಾಣಿ ಸುದಿನದಲ್ಲಿ ಜು.13ರಂದು ವರದಿ ಪ್ರಕಟಗೊಂಡ ಬಳಿಕ ಹಳೆಯಂಗಡಿ ಗ್ರಾಮ ಪಂಚಾಯತ್‌ ಸದಸ್ಯರ ವಿಶೇಷ ಸಭೆಯನ್ನು ನಡೆಸಿ ರಸ್ತೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿತ್ತಲ್ಲದೆ, ಈಗಾಗಲೇ ಸುನಾಮಿ ಯೋಜನೆಯಲ್ಲಿ 3 ಕೋ. ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಕಾಂಕ್ರೀಟೀ ಕೃತಗೊಳಿಸುವ ಯೋಜನೆ ಇರು ವುದರಿಂದ ತಾತ್ಕಾಲಿಕವಾದರೂ ದುರಸ್ತಿ ಕಾರ್ಯ ನಡೆಸಲು ನಿರ್ಧರಿಸಲಾಗಿದೆ ಎಂದು ಗ್ರಾ. ಪಂ.ತಿಳಿಸಿದೆ.

ಈ ರಸ್ತೆ ಯಲ್ಲಿ ಪ್ರವಾಸಿಗರು ಹಾಗೂ ಮುಂಡ ಪ್ರದೇ ಶದ ನಿವಾಸಿಗಳು ತಮ್ಮ ವಾಹನಗಳ ಮೂಲಕ ಸಂಚ ರಿ ಸು ತ್ತಾರೆ. ಜತೆಗೆ ಸಸಿಹಿತ್ಲಿಗೆ ಬರುವ ಬಸ್ಸುಗಳು ಸಹ ಮುಂಡ ದಲ್ಲಿಯೇ ಸಂಚಾರವನ್ನು ಕೊನೆಗೊಳಿಸುವ ಪ್ರದೇ ಶ ವಾಗಿದ್ದು, ಪ್ರಯಾಣಿಕರು ಹತ್ತಿರದಲ್ಲಿಯೇ ಇರುವ ಬಸ್‌ ನಿಲ್ದಾಣವನ್ನು ಸಹಬಳಸುತ್ತದ್ದಾರೆ. ಈಗ ಪಂಚಾಯತ್‌ ಸಿಬಂದಿ  ಸಿಮೆಂಟ್‌ ಮಿಶ್ರಿತ ಕಲ್ಲು ಮಣ್ಣುಹಾಕಿ,ಹೊಂಡ, ಗುಂಡಿಗಳನ್ನು ಮುಚ್ಚಿರುವುದರಿಂದ ತಾತ್ಕಾಲಿಕ ಪರಿ ಹಾರ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next