Advertisement
ವಾರ್ಡ್ ಸಂಖ್ಯೆ-1 ಹೆಬ್ಟಾಳು-ಲಕ್ಷ್ಮೀಕಾಂತ ನಗರ( ಬಿಸಿಎಂ-ಎ,ಮಹಿಳೆ): ಉತ್ತರಕ್ಕೆ ಹೊರ ವರ್ತುಲ ರಸ್ತೆಯಲ್ಲಿ ಇನ್ಫೋಸಿಸ್ ರಸ್ತೆ ಮತ್ತು ಹೊರ ವರ್ತುಲ ರಸ್ತೆ ಸೇರುವ ಬಿಂದುವಿನಿಂದ ಪೂರ್ವಕ್ಕೆ ತಿರುಗಿ ಟಾಟಾ ಮೋಟಾರ್ಸ್ ಹತ್ತಿರ ಬಸವನಗುಡಿ ರಸ್ತೆಗೆ ಸೇರುವುದು.
Related Articles
Advertisement
ದಕ್ಷಿಣಕ್ಕೆ ಸೂರ್ಯಬೇಕರಿ ವೃತ್ತದಿಂದ ಪಶ್ಚಿಮದ ಕಡೆಗೆ ಅಭಿಷೇಕ್ ವೃತ್ತ ತಲುಪುವುದು.ಅಭಿಷೇಕ್ ವೃತ್ತದಿಂದ ದಕ್ಷಿಣದ ಕಡೆಗೆ 80 ಅಡಿ ರಸ್ತೆಯಲ್ಲಿ ಮುಂದುವರೆದು ಮಹಾಜನ ಬಡಾವಣೆಯ 3ನೇ ಮುಖ್ಯ ರಸ್ತೆಯಿಂದ ಪಶ್ಚಿಮಕ್ಕೆ ಸಂಗಮ ವೃತ್ತ ಸೇರುವುದು. ಪೂರ್ವಕ್ಕೆ ಕುವೆಂಪು ವೃತ್ತದಿಂದ ದಕ್ಷಿಣದ ಕಡೆಗೆ ಸೂರ್ಯ ಬೇಕರಿ ವೃತ್ತ ತಲುಪುವುದು.
ಪಶ್ಚಿಮಕ್ಕೆ 80 ಅಡಿ ವಾಟರ್ ಟ್ಯಾಂಕ್ ರಸ್ತೆ ಮತ್ತು ಮಹಾಜನ ಬಡಾವಣೆ 3ನೇ ಮುಖ್ಯರಸ್ತೆಯಿಂದ ಪಶ್ಚಿಮಕ್ಕೆ ಸಂಗಮ ವೃತ್ತ-ಹಂಪಿ ವೃತ್ತದ ಮುಖಾಂತರ ಸೇರುವ ಬಿಂದುವಿನಿಂದ ಪಶ್ಚಿಮಕ್ಕೆ ಹೊರವರ್ತುಲ ರಸ್ತೆ ಮತ್ತು ಹೈಟೆನ್ಷನ್ ಜೋಡಿ ರಸ್ತೆಗೆ ಸೇರುವ ಬಿಂದುವಿನವರೆಗೆ.
ವಾರ್ಡ್ ಸಂಖ್ಯೆ 3 ಮಹದೇಶ್ವರ ಬಡಾವಣೆ(ಬಿಸಿಎಂ-ಬಿ ಮಹಿಳೆ):ಉತ್ತರಕ್ಕೆ ಎಸ್‌ಬಿಐ ಬ್ಯಾಂಕ್ ರಸ್ತೆ ಮತ್ತು ಕಾಳಿಕಾಂಭ ದೇವಸ್ಥಾನ ರಸ್ತೆ ಸೇರುವ ಬಿಂದುವಿನಿಂದ ಕಾಳಿಕಾಂಭ ದೇವಸ್ಥಾನದ ಮುಖಾಂತರ ಕುಂಬಾರಕೊಪ್ಪಲು 60 ಅಡಿ ರಸ್ತೆ ತಲುಪುವುದು.
ದಕ್ಷಿಣಕ್ಕೆ ಕಾಂಟೂರ್ ರಸ್ತೆ ಮತ್ತು ಸಿಎಫ್ಟಿಆರ್‌ಐ ಕಾಂಪೌಂಡ್ ಸೇರುವ ಬಿಂದುವಿನಿಂದ ವಿದ್ಯಾವರ್ಧಕ ಕಾಲೇಜು ಮುಖಾಂತರ ಕನ್ನಡ ಸಾಹಿತ್ಯ ಭವನ ರಸ್ತೆಯನ್ನು ಸೇರಿ, ಕನ್ನಡ ಸಾಃಇತ್ಯ ಭವನ ರಸ್ತೆಯಲ್ಲಿ ವಿಜಯ ನಗರ ಜೋಡಿ ರಸ್ತೆಯ ಮುಖಾಂತರ 80 ಅಡಿ ರಸ್ತೆ ಸೇರುವ ಬಿಂದುವಿನವರೆಗೆ.
ಪೂರ್ವಕ್ಕೆ ಸಿಎಫ್ಟಿಆರ್‌ಐ ಕಾಂಪೌಂಡ್ ಮತ್ತು ಕಾಂಟೂರ್ ರಸ್ತೆ ಸೇರುವ ಬಿಂದುವಿನಿಂದ ಉತ್ತರದ ಕಡೆಗೆ ಕುಂಬಾರ ಕೊಪ್ಪಲು ಸ್ಟೇಡಿಯಂ ತಲುಪುವುದು. ಅಲ್ಲಿಂದ ಸ್ಟೇಡಿಯಂ ಪಕ್ಕದ ರಸ್ತೆಯಲ್ಲಿ ಕಿಡಿಗಣ್ಣಮ್ಮನ ಬಡಾವಣೆ, ರಾಘವೇಂದ್ರ ಮಠದ ರಸ್ತೆ ಸೇರುವುದು. ರಾಘವೇಂದ್ರ ಮಠದ ರಸ್ತೆಯಲ್ಲಿ ಉತ್ತರದ ಕಡೆಗೆ ಕಾಳಿಕಾಂಭ ರಸ್ತೆಗೆ ತಲುಪುವುದು.
ಪಶ್ಚಿಮಕ್ಕೆ ವಿಜಯನಗರ ಜೋಡಿ ರಸ್ತೆ ಮತ್ತ 80 ಅಡಿ ವಾಟರ್ ಟ್ಯಾಂಕ್ ರಸ್ತೆ ಸೇರುವ ಬಿಂದುವಿನಿಂದ ಉತ್ತರದ ಕಡೆಗೆ ಅಭಿಷೇಕ್ ವೃತ್ತ ತಲುಪುವುದು. ಅಲ್ಲಿಂದ ಪೂರ್ವಕ್ಕೆ ಸೂರ್ಯ ಬೇಕರಿ ವೃತ್ತ ತಲುಪಿ ಪುನಾ ಉತ್ತರದ ಕಡೆಗೆ ತಿರುಗಿ ಕಾಳಿಕಾಂಭ ದೇವಸ್ಥಾನ ಮತ್ತು ಹೆಬ್ಟಾಳು ಮುಖ್ಯ ರಸ್ತೆ ಸೇರುವ ಬಿಂದುವಿನವರೆಗೆ.
ವಾರ್ಡ್ ಸಂಖ್ಯೆ 4 ಹೆಬ್ಟಾಳು-ಲೋಕನಾಯಕ ನಗರ (ಸಾಮಾನ್ಯ): ಉತ್ತರಕ್ಕೆ ಹೊರವರ್ತುಲ ರಸ್ತೆಯಲ್ಲಿ ಹೆಬ್ಟಾಳು ಬಸವನಗುಡಿ ರಸ್ತೆ ಸೇರುವ ಬಿಂದುವಿನಿಂದ ಪೂರ್ವದ ಕಡೆಗೆ ಹೊರವರ್ತುಲ ರಸ್ತೆಯಲ್ಲಿಯೇ ಮುಂದುವರಿದು ರಾಯಲ್ ಇನ್ ಹೋಟೆಲ್ ಹತ್ತಿರ ಕೆಆರ್‌ಎಸ್ ರಸ್ತೆಯನ್ನು ತಲುಪುವುದು.
ದಕ್ಷಿಣಕ್ಕೆ ಹೆಬ್ಟಾಳ್ ಮುಖ್ಯ ರಸ್ತೆ (ಎಸ್‌ಬಿಐ ಬ್ಯಾಂಕ್ ರಸ್ತೆ) ಮತ್ತು ಕಾಳಿಕಾಂಭ ದೇವಸ್ಥಾನ ರಸ್ತೆ ಸೇರುವ ಬಿಂದುವಿನಿಂದ ಕುಂಬಾರಕೊಪ್ಪಲು 60 ಅಡಿ ರಸ್ತೆಯನ್ನು ತಲುಪಿ ಮಳೆ ನೀರು ಚರಂಡಿಯ ಪಕ್ಕದಲ್ಲಿ ಕೆಆರ್‌ಎಸ್ ರಸ್ತೆಯನ್ನು ತಲುಪುವುದು.
ಪೂರ್ವಕ್ಕೆ ಕೆಆರ್‌ಎಸ್ ರಸ್ತೆಯಲ್ಲಿ ಕುಂಬಾರ ಕೊಪ್ಪಲು ಮಳೆ ನೀರು ಚರಂಡಿ ಸೇರುವ ಬಿಂದುವಿನಿಂದ ಉತ್ತರದ ಕಡೆಗೆ ಕುವೆಂಪು ವೃತ್ತವನ್ನು ತಲುಪಿ, ಪೂರ್ವಕ್ಕೆ ತಿರುಗಿ ಬಸವನಗುಡಿ ವೃತ್ತ ತಲುಪುವುದು. ಬಸವನಗುಡಿ ವೃತ್ತದಿಂದ ಉತ್ತರದ ಕಡೆಗೆ ಹೊರವರ್ತುಲ ರಸ್ತೆ ತಲುಪುವುದು.
ಪಶ್ಚಿಮಕ್ಕೆ ಕಾಳಿಕಾಂಭ ದೇವಸ್ಥಾ ರಸ್ತೆ ಮತ್ತು ಹೆಬ್ಟಾಳು ಮುಖ್ಯ ರಸ್ತೆ (ಎಸ್‌ಬಿಐ) ಸೇರುವ ಬಿಂದುವಿನಿಂದ ಉತ್ತರದ ಕಡೆಗೆ ಕುವೆಂಪು ವೃತ್ತವನ್ನು ತಲುಪಿ ಪೂರ್ವಕ್ಕೆ ತಿರುಗಿ ಬಸವನಗುಡಿ ವೃತ್ತ ತಲುಪುವುದು. ಬಸವನಗುಡಿ ವೃತ್ತದಿಂದ ಉತ್ತರದ ಕಡೆಗೆ ಹೊರ ವರ್ತುಲ ರಸ್ತೆಯನ್ನು ತಲುಪುವುದು.
ವಾರ್ಡ್ ಸಂಖ್ಯೆ 5 ಕುಂಬಾರ ಕೊಪ್ಪಲು (ಬಿಸಿಎಂ-ಎ): ಉತ್ತರಕ್ಕೆ ರಾಘವೇಂದ್ರ ಮಠದ ರಸ್ತೆ ಮತ್ತು ಕಾಳಿಕಾಂಭ ರಸ್ತೆ ಸೇರುವ ಬಿಂದುವಿನಿಂದ ಪೂರ್ವದ ಕಡೆಗೆ ಕುಂಬಾರ ಕೊಪ್ಪಲು 60 ಅಡಿ ರಸ್ತೆಯಲ್ಲಿ ಮಳೆ ನೀರು ಚರಂಡಿಯ ಹತ್ತಿರ ಕೆಆರ್‌ಎಸ್ ರಸ್ತೆಗೆ ತಲುಪುವುದು.
ದಕ್ಷಿಣಕ್ಕೆ ಕಿಡಿಗಣ್ಣಮ್ಮನ ಬಡಾವಣೆ, ರಾಘವೇಂದ್ರ ಸ್ವಾಮಿ ಮಠ ಮತ್ತು ಕುಂಬಾರ ಕೊಪ್ಪಲು ಸ್ಟೇಡಿಯಂ ಪಕ್ಕದ ರಸ್ತೆ ಸೇರುವ ಬಿಂದುವಿನಿಂದ ಪೂರ್ವಕ್ಕೆ ಕಾಂಟೂರ್ ರಸ್ತೆಯನ್ನು ತಲುಪಿ ಸ್ಯಾನಿಟೋರಿಯಂ ಆಸ್ಪತ್ರೆ ಕಾಂಪೌಂಡ್ ಮುಖಾಂತರ ಕೆಆರ್‌ಎಸ್ ರಸ್ತೆಗೆ ಸೇರುವುದು.
ಪೂರ್ವಕ್ಕೆ ಕೆಆರ್‌ಎಸ್ ರಸ್ತೆ ಮತ್ತು ಸ್ಯಾನಿಟೋರಿಯಂ ಆಸ್ಪತ್ರೆ ಕಾಂಪೌಂಡ್ ಸೇರುವ ಬಿಂದುವಿನಿಂಧ ಕೆಆರ್‌ಎಸ್ ರಸ್ತೆಯಲ್ಲಿ ಉತ್ತರದ ಕಡೆಗೆ ಕುಂಬಾರ ಕೊಪ್ಪಲು ಮಳೆ ನೀರು ಚರಂಡಿ ಸೇರುವ ಬಿಂದುವಿನವರೆಗೆ.
ಪಶ್ಚಿಮಕ್ಕೆ ಕುಂಬಾರ ಕೊಪ್ಪಲು ಸ್ಟೇಡಿಯಂ ಮತ್ತು ಕಿಡಿಗಣ್ಣಮ್ಮನ ಬಡಾವಣೆ ರಾಘವೇಂದ್ರ ಮಠದ ರಸ್ತೆಗೆ ಸೇರುವ ಬಿಂದುವಿನಿಂದ ಉತ್ತರದ ಕಡೆಗೆ ಸುಭಾಷ್ ನಗರದ ಮುಖಾಂತರ ಕಾಳಿಕಾಂಭ ದೇವಸ್ಥಾನ ರಸ್ತೆಗೆ ಸೇರುವುದು.