Advertisement
ಶುಕ್ರವಾರ ಸಿ.ಎಸ್.ಪುಟ್ಟರಾಜು ಅವರನ್ನು ಭೇಟಿಯಾಗಿದ್ದ ರೇಣುಕಾಚಾರ್ಯ, ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದರು. ರಾಜಕೀಯ ವಿಚಾರಗಳ ಬಗ್ಗೆಯೂ ಈ ಸಂದರ್ಭದಲ್ಲಿ ಪ್ರಸ್ತಾಪವಾಯಿತು ಎಂದು ಹೇಳಲಾಗಿದೆ. ಈ ಕುರಿತು ರೇಣುಕಾಚಾರ್ಯ ಅವರನ್ನು ‘ಉದಯವಾಣಿ’ ಸಂಪರ್ಕಿಸಿದಾಗ, ‘ನನ್ನ ಕ್ಷೇತ್ರದ ಕೆಲಸಕ್ಕೆ ಸಂಬಂಧಿಸಿದಂತೆ ಸಚಿವರನ್ನು ಭೇಟಿಯಾಗಿದ್ದೆ. ಆ ಕುರಿತು ಮನವಿ ಸಹ ಸಲ್ಲಿಸಿದ್ದೇನೆ. ಉಳಿದ ಎಲ್ಲವೂ ಊಹಾಪೋಹ’ ಎಂದು ಹೇಳಿದರು. ಹಳೇ ಮಿತ್ರರ ನಡುವೆ ರಾಜಕೀಯವಾಗಿ ಏನಾದರೂ ಪ್ರಸ್ತಾಪವಾಯಿತೇ ಎಂದಾಗ, ಎಲ್ಲವನ್ನೂ ಹೇಳಲು ಆಗುತ್ತಾ ಎಂದು ಚಟಾಕಿ ಹಾರಿಸಿದರು. ಇತ್ತೀಚೆಗಷ್ಟೇ ಸಚಿವ ಪುಟ್ಟರಾಜು ಅವರು, ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದಾಗ ಚೆನ್ನಾಗಿತ್ತು ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರೇಣುಕಾಚಾರ್ಯ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. Advertisement
ರೇಣುಕಾಚಾರ್ಯ ಜತೆ ಪುಟ್ಟರಾಜು ಮಾತುಕತೆ
12:48 AM Feb 03, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.