Advertisement

ಸರ್ಕಾರದಿಂದ ರೇಣುಕಾಚಾರ್ಯ ಜಯಂತಿ-ಹರ್ಷ

11:36 AM Mar 27, 2022 | Team Udayavani |

ಶಹಾಬಾದ: ಪ್ರತಿ ವರ್ಷ ಮಾರ್ಚ್‌ 16ರಂದು ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸುವುದಾಗಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶನಿವಾರ ನಗರದ ಲಕ್ಷ್ಮೀ ಗಂಜ್‌ನ ರೇಣುಕಾಚಾರ್ಯ ದೇವಸ್ಥಾನದ ಮುಂಭಾಗದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ, ಬೇಡ ಜಂಗಮ ಸಮಾಜದ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.

Advertisement

ಸಮಾಜದ ಮುಖಂಡ ಮೃತ್ಯುಂಜಯ ಹಿರೇಮಠ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿರುವುದಕ್ಕೆ ವೀರಶೈವ ಹಾಗೂ ಬೇಡ ಜಂಗಮ ಸಮಾಜದ ಜನರಿಗೆ ಸಂತಸವಾಗಿದೆ. ಸಮಾಜಕ್ಕಾಗಿ, ಧರ್ಮಕ್ಕಾಗಿ ತಮ್ಮ ಜೀವನವನ್ನೇ ಸವೆಸಿದ ರೇಣುಕಾಚಾರ್ಯ ಜಯಂತಿ ಆಚರಿಸಲು ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಎಂದರು.

ಮುಖಂಡರಾದ ಸೂರ್ಯಕಾಂತ ಕೋಬಾಳ, ಶಿವಕುಮಾರ ಹಿರೇಮಠ, ಶರಣಬಸಪ್ಪ ಕೋಬಾಳ, ಪ್ರದೀಪ ಗೊಳೇದ, ಶರಣಗೌಡ ಪಾಟೀಲ ಗೋಳಾ, ವಿಶ್ವಾರಾಧ್ಯ ಬಿರಾಳ, ಶೇಖುಗೌಡ, ಜಗದೀಶ ಮಠಪತಿ, ರಾಜು ಬೆಳಗುಂಪಿ, ಶರಣು ಜೇರಟಗಿ, ಸಿದ್ಧಯ್ಯ ಗೋಳಾ, ರಾಜಶೇಖರ ಘಂಟಿಮಠ, ಶಾಂತಯ್ಯಸ್ವಾಮಿ, ವಿಶ್ವಾರಾಧ್ಯ ಸ್ವಾಮಿ, ಜಗದೀಶ ಟೆಂಗಳಿ, ಮಲ್ಲಿಕಾರ್ಜುನ ಟೆಂಗಳಿ, ಬಾಬುರಾವ್‌ ಪಂಚಾಳ, ಶರಣಯ್ಯಸ್ವಾಮಿ ಹಿರೇಮಠ, ನಾಗಣ್ಣ ರಾಂಪುರೆ, ಅರುಣಕುಮಾರ ಪಟ್ಟಣಕರ್‌, ಶಿವಕುಮಾರ ಇಂಗಿನಶೆಟ್ಟಿ, ಚನ್ನಬಸಪ್ಪ ಕೊಲ್ಲೂರ್‌, ಶಾಂತಕುಮಾರ ವಾಲಿ, ಜಗದೀಶ ಬೆಳಗುಂಪಿ, ಎಮ್‌.ಆರ್‌. ಶರಣಯ್ಯಸ್ವಾಮಿ, ಶರಣು ನಂದಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next