Advertisement
ಅವಳಿ ನಗರದಲ್ಲಿ ಡ್ರೈವ್‌ಜಿ ಇಂಡಿಯಾ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ ಬಾಡಿಗೆ ಬೈಕ್‌ಗಳು ಹಾಗೂ ಬಾಡಿಗೆ ಕಾರುಗಳನ್ನು ಸೇವೆ ಒದಗಿಸಲಿದೆ. ಫೆ. 1ರಿಂದ ಅವಳಿ ನಗರದ ಜನರು ತಮ್ಮಿಷ್ಟದ ವಾಹನವನ್ನು ಚಾಲನೆ ಮಾಡುವ ಅವಕಾಶ ಲಭ್ಯವಾಗಲಿದೆ. ನಗರದ ಗಣೇಶಪೇಟ ವೃತ್ತ ಸಮೀಪದ ಲಕ್ಷ್ಮೀ ಬಾಲಕೃಷ್ಣ ಸ್ಕ್ವೇರ್ (ಹರ್ಷ ಕಾಂಪ್ಲೆಕ್ಸ್)ನಲ್ಲಿ ಸಂಸ್ಥೆಯ ಶಾಖಾ ಕಚೇರಿ ಆರಂಭಗೊಳ್ಳಲಿದೆ. ಈಗಾಗಲೇ 100 ಹೊಂಡಾ ಆಕ್ಟಿವಾ 5ಜಿ ಸ್ಕೂಟರ್‌ಗಳು ಬಂದಿದ್ದು, ನಗರದ ಜನರ ಬೇಡಿಕೆಗೆ ಅನುಗುಣವಾಗಿ ವಿವಿಧ ವಾಹನಗಳನ್ನು ರಸ್ತೆಗಿಳಿಸಲು ಸಂಸ್ಥೆ ನಿರ್ಧರಿಸಿದೆ.
Related Articles
ಗಂಟೆಗಳ ಆಧಾರದ ಮೇಲೆ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಬಾಡಿಗೆಗೆ ನೀಡಲಾಗುತ್ತದೆ. 18 ವರ್ಷಕ್ಕಿಂತ ಹೆಚ್ಚಿನ ವಯೋಮಿತಿಯ ಹಾಗೂ ಚಾಲನಾ ಲೈಸೆನ್ಸ್ ಹೊಂದಿರುವವವರು ವಾಹನ ಬಾಡಿಗೆ ಪಡೆದುಕೊಳ್ಳಬಹುದಾಗಿದೆ. ಡ್ರೈವ್‌ಜಿ ವಾಹನ ಬಾಡಿಗೆ ಪಡೆಯುವ ಪ್ರಕ್ರಿಯೆ ಸರಳೀಕರಿಸಿದೆ. ವಾಹನಗಳಿಗಾಗಿ ಕಾಯಬೇಕಾಗಿಲ್ಲ. ಸ್ಮಾರ್ಟ್ ಫೋನ್‌ನಿಂದ ಡ್ರೈವಜಿ ಅಪ್ಲಿಕೇಶನ್ ಮೂಲಕ ವಾಹನ ಪಡೆದುಕೊಳ್ಳಬಹುದು. ಇಲ್ಲವೇ ವೆಬ್‌ಸೈಟ್ ಮೂಲಕವೂ ಬುಕ್ ಮಾಡಬಹುದು. ಅಗತ್ಯ ದಾಖಲೆ ಒದಗಿಸಿದರೆ ಬಳಕೆದಾರರಿರುವ ಸ್ಥಳಕ್ಕೆ ಬಂದು ವಾಹನ ನೀಡಲಾಗುತ್ತದೆ. ಒಮ್ಮೆ ಹೆಸರು ನೋಂದಣಿಯಾದರೆ ವಾಹನ ಬಾಡಿಗೆ ಪಡೆಯುವುದು ಅತ್ಯಂತ ಸುಲಭ. ಇದೇ ಕಾರಣಕ್ಕೆ ಡ್ರೈವ್‌ಜಿ ಸಂಸ್ಥೆ ಸೇವೆ ಒದಗಿಸುವ ನಗರಗಳಲ್ಲಿ ಮನ್ನಣೆ ಪಡೆದುಕೊಂಡಿದೆ.
Advertisement
ದರಪಟ್ಟಿ ಹೀಗಿದೆಹೊಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ಕನಿಷ್ಟ 6 ಗಂಟೆ ಬಾಡಿಗೆ ಪಡೆಯಬೇಕಾಗುತ್ತದೆ. ಪ್ರತಿ ಗಂಟೆಗೆ 15 ರೂ. ಬಾಡಿಗೆ ನಿಗದಿಪಡಿಸಲಾಗಿದೆ. ವಾರದ ದಿನಗಳಲ್ಲಿ 10ರೂ.ನಿಂದ 130ರೂ.ವರೆಗೆ ಪ್ರತಿ ಗಂಟೆಗೆ ಬೈಕ್ ಹಾಗೂ ಎಸ್‌ಯುವಿ ಕಾರುಗಳವರೆಗೆ ವಿವಿಧ ವಾಹನ ಬಾಡಿಗೆ ಪಡೆದುಕೊಳ್ಳಬಹುದು. ವಾಹನ ಪಡೆಯಲು ಯಾವುದೇ ಭದ್ರತಾ ಠೇವಣಿ ಇಡಬೇಕಾಗಿಲ್ಲ. ವಾರಾಂತ್ಯದಲ್ಲಿ ವಾಹನಗಳ ಬಾಡಿಗೆ ದರ ಹೆಚ್ಚಾಗುತ್ತದೆ. ಇಬ್ಬರು ಶೇರಿಂಗ್ ಮೂಲಕ ವಾಹನ ಬಾಡಿಗೆ ಪಡೆಯಬಹುದು.