Advertisement

ವಾಯವ್ಯ ಸಾರಿಗೆಗೆ ಬಾಡಿಗೆ ನಷ್ಟದ ಬರೆ

05:09 PM Mar 10, 2021 | Team Udayavani |

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಡಿ ಇಲ್ಲಿನ ಹಳೇ ಬಸ್‌ನಿಲ್ದಾಣ ಹೊಸ ಕಟ್ಟಡ ಕಾಮಗಾರಿಗೆ ಯೋಜಿಸಲಾಗಿದೆ.ಆದರೆ, ಕಾಮಗಾರಿ ಆರಂಭವಾಗದೆ ವಿಳಂಬದಿಂದಾಗಿ ಈಗಾಗಲೇ ನಷ್ಟದಸುಳಿಗೆ ಸಿಲುಕಿರುವ ವಾಯವ್ಯ ಸಾರಿಗೆ ಸಂಸ್ಥೆ ಇನ್ನಷ್ಟು ನಷ್ಟ ಅನುಭವಿಸುವಂತಾಗಿದೆ.

Advertisement

ನೂತನ ಕಟ್ಟಡ ಕಾಮಗಾರಿಆರಂಭವಾಗುತ್ತದೆ ಎಂಬ ಉದ್ದೇಶದಿಂದವಾಯವ್ಯ ಸಾರಿಗೆ ಸಂಸ್ಥೆ, ಹಳೇ ಬಸ್‌ ನಿಲ್ದಾಣದಲ್ಲಿ ಇದ್ದ ಸುಮಾರು 37 ಮಳಿಗೆದಾರರನ್ನು ತೆರವುಗೊಳಿಸಿದ್ದು,ಕಾಮಗಾರಿಯೂ ಆರಂಭವಾಗಿಲ್ಲ. ಸಂಸ್ಥೆಗೆಬರುವ ಬಾಡಿಗೆ ಆದಾಯವೂ ಇಲ್ಲವಾಗಿದೆ.ವಿಳಂಬ ಆಗುತ್ತದೆ ಎಂದಾಗಿದ್ದರೆ ಇನ್ನಷ್ಟು ದಿನಗಳವರೆಗೆ ಮಳಿಗೆಗಳನ್ನು ಮುಂದುವರಿಸಬಹುದಾಗಿತ್ತಲ್ಲ ಎಂಬ ಚಿಂತನೆ ಕೆಲವರದ್ದಾಗಿದೆ.

ಹಳೇ ಬಸ್‌ ನಿಲ್ದಾಣಕ್ಕೆ ಆತ್ಯಾಧುನಿಕ ಸ್ಪರ್ಶ ನೀಡಲು ಸ್ಮಾರ್ಟ ಸಿಟಿ ಕಂಪನಿಮುಂದಾಗಿದ್ದು, ಅಂದಾಜು 36 ಕೋಟಿರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವಹಳೇ ಬಸ್‌ ನಿಲ್ದಾಣದ ನೂತನ ಕಟ್ಟಡಕಾಮಗಾರಿ ಟೆಂಡರ್‌ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದ್ದು, ಮುಂದಿನಪ್ರಕ್ರಿಯೆಗಳ ಮುಕ್ತಾಯದ ನಂತರಕಾಮಗಾರಿ ಆರಂಭವಾಗಬೇಕಿದೆ. ಸ್ಮಾರ್ಟ್‌ ಸಿಟಿ ಕಂಪನಿಯಿಂದ ಜನೆವರಿ ಕೊನೆಯವರೆಗೂ ಬಸ್‌ ನಿಲ್ದಾಣವನ್ನು ನಮಗೆ ಹಸ್ತಾಂತರಿಸುವಂತೆ ಪತ್ರಮುಖೇನ ಕೇಳಿಕೊಳ್ಳಲಾಗಿತ್ತು. ತದನಂತರಟೆಂಡರ್‌ ಪ್ರಕ್ರಿಯೆ ಒಂದು ತಿಂಗಳ ಕಾಲಮುಂದೂಡಿದ್ದರಿಂದ ಎಲ್ಲ ಕೆಲಸಗಳು ವಿಳಂಬವಾಗುತ್ತಿವೆ ಎನ್ನಲಾಗುತ್ತಿದೆ.

ಹಳೇ ಬಸ್‌ ನಿಲ್ದಾಣದ ನೂತನ ಕಟ್ಟಡ ನಿರ್ಮಾದ ಗುತ್ತಿಗೆಯನ್ನು ಟ್ರಿನಿಟಿಏಜೆನ್ಸಿ ಪಡೆದುಕೊಂಡಿದ್ದು, ಟ್ರಿನಿಟಿಸಂಸ್ಥೆಯವರು ಸ್ಮಾರ್ಟ್‌ ಸಿಟಿ ಕಂಪೆನಿಯವರೊಂದಿಗೆ ಒಪ್ಪಂದ ಮಾಡಿಕೊಂಡು, ಕಾಮಗಾರಿ ಆರಂಭಗೊಳಿಸಬೇಕಿದೆ. ತಾಂತ್ರಿಕ ಸೇರಿದಂತೆ ವಿವಿಧ ಕಾರಣಗಳಿಗಾಗಿ ಗುತ್ತಿಗೆ ಪಡೆದಸಂಸ್ಥೆಗೆ ಕೆಲಸದ ಕಾರ್ಯಾದೇಶ ಇನ್ನೂ ದೊರೆತಿಲ್ಲ ಎನ್ನಲಾಗುತ್ತಿದೆ.

ಮಳಿಗೆಗಳಿಂದ ಬರುತ್ತಿದ್ದ 20-25 ಲಕ್ಷ ಆದಾಯ ನಷ್ಟ  :

Advertisement

ಹಳೇ ಬಸ್‌ ನಿಲ್ದಾಣದ ನೂತನ ಕಟ್ಟಡ ನಿರ್ಮಾಣ ಉದ್ದೇಶದಿಂದಾಗಿ ನಿಲ್ದಾಣದಲ್ಲಿ ಇದ್ದ ಮಳಿಗೆಗಳನ್ನು ಖಾಲಿ ಮಾಡಿಸಲಾಗಿದ್ದು, ಇದರಿಂದ ವಾಯವ್ಯ ಸಾರಿಗೆ ಸಂಸ್ಥೆಗೆ ಮಾಸಿಕ20-25 ಲಕ್ಷ ರೂ. ಆದಾಯವೂ ಇಲ್ಲವಾಗಿದೆ. ಇನ್ನೊಂದು ಕಡೆ ಕಟ್ಟಡ ಕಾಮಗಾರಿಯೂ ಆರಂಭವಾಗುತ್ತಿಲ್ಲವಾಗಿದೆ. ಹಳೇ ಬಸ್‌ ನಿಲ್ದಾಣದ ನೂತನ ಕಟ್ಟಡ ಕಾಮಗಾರಿಹಿನ್ನೆಲೆಯಲ್ಲಿ ಇಲ್ಲಿನ ಬಹುತೇಕ ಬಸ್‌ಗಳ ಕಾರ್ಯಾ ಚರಣೆಯನ್ನು  ಹೊಸೂರು ಹಾಗೂಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣಗಳಿಗೆ ಸ್ಥಳಾಂತರಿಸಲಾಗದೆ. ಈಗಲೂ ಅಷ್ಟು ಇಷ್ಟು ಬಸ್‌ಗಳು ಹಳೇ ಬಸ್‌ ನಿಲ್ದಾಣದಿಂದ ಓಡಾಡುತ್ತಿವೆ. ನೂತನ ಕಟ್ಟಡ ಕಾಮಗಾರಿಆರಂಭ ಯಾವಾಗ ಎಂದು ವಾಯವ್ಯ ಸಾರಿಗೆ ಸಂಸ್ಥೆ ಎದುರು ನೋಡುತ್ತಿದೆ. ಇದ್ದ ಕಟ್ಟಡ ತೆರವಾಗಬೇಕಿದ್ದು, ನಂತರವಷ್ಟೇ ನೂತನ ಕಟ್ಟಡ ಕಾಮಗಾರಿ ಆರಂಭವಾಗಲಿದೆ.

ಈಗಾಗಲೇ ಹಳೇ ಬಸ್‌ ನಿಲ್ದಾಣದ ಕಾಮಗಾರಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಮೌಲ್ಯಮಾಪನಮುಕ್ತಾಯಗೊಳಿಸಲಾಗಿದೆ. ಅರ್ಹ ಸಂಸ್ಥೆಗೆ ಎಲ್‌ಓಇ ನೀಡಲಾಗಿದ್ದು, ಒಪ್ಪಂದ ಪತ್ರ ಆದ ನಂತರ ಮುಂದಿನ ಕಾರ್ಯ ಆರಂಭಗೊಳ್ಳಲಿದೆ.- ಎಸ್‌.ಎಚ್‌. ನರೇಗಲ್ಲ, ಸ್ಮಾರ್ಟ್‌ ಸಿಟಿ ವಿಶೇಷಾಧಿಕಾರಿ

 

­ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next