Advertisement
ಫೆ. 29ರಂದು ಬೆಳಗ್ಗೆ 10 ಗಂಟೆಗೆ ಶ್ರೀಮತ್ ಸಂಯಮೀಂದ್ರತೀರ್ಥ ಶ್ರೀಗಳು ನೂತನ ಮಠ ವನ್ನು ಉದ್ಘಾಟಿಸಲಿದ್ದಾರೆ. ಉದ್ಘಾ ಟನ ಸಮಾ ರಂಭದ ಪ್ರಯುಕ್ತ ಫೆ. 28ರಿಂದ ಮಾ.9ರ ವರೆಗೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳನ್ನು ಸ್ವಾಮೀಜಿಯವರ ಮಾರ್ಗದರ್ಶನ ದಲ್ಲಿ ಹಮ್ಮಿ ಕೊಳ್ಳಲಾಗಿದೆ.
ವಾಲ್ಕೇಶ್ವರ ಶ್ರೀ ಕಾಶೀ ಮಠವು 18ನೇ ಶತಮಾನ ದಲ್ಲಿ ಸ್ಥಾಪನೆಗೊಂಡಿದ್ದು, ತನ್ನದೇ ಆದ ಇತಿಹಾಸ ಹೊಂದಿ ಧಾರ್ಮಿಕ ಕೇಂದ್ರವಾಗಿ ಬೆಳೆದು ನಿಂತಿದೆ. ಕಾಶೀ ಮಠದ 7ನೇ ಯತಿಗಳಾದ ಶ್ರೀಮತ್ ಮಾಧವೇಂದ್ರತೀರ್ಥ ಸ್ವಾಮೀಜಿ ಹಾಗೂ 18ನೇ ಯತಿಗಳಾದ ಶ್ರೀಮತ್ ವರದೇಂದ್ರತೀರ್ಥ ಸ್ವಾಮೀಜಿಗಳ ವೃಂದಾವನಗಳು ಇಲ್ಲಿವೆ. ಪ್ರತೀ ವರ್ಷ ಮುಂಬಯಿ ಕಿಂಗ್ಸ್ ಸರ್ಕಲ್‌ನ ಜಿಎಸ್‌ಬಿ ಸೇವಾ ಮಂಡಲದ ಗಣೇಶೋತ್ಸವವು ನಡೆಯುವ ವೇಳೆ ಶ್ರೀಮತ್ ಮಾಧವೇಂದ್ರತೀರ್ಥ ಶ್ರೀಗಳ ವೃಂದಾವನದ ಮುಂದೆ ತೆಂಗಿನ ಕಾಯಿಯನ್ನು ಇರಿಸಿ ಪ್ರಾರ್ಥನೆ ಸಲ್ಲಿಸಿ ಬಳಿಕ ಅದನ್ನು ಗಣಪತಿ ವಿಗ್ರಹದೊಂದಿಗೆ ಇರಿಸುವ ಕ್ರಮವಿದೆ.
Related Articles
Advertisement
2022ರಲ್ಲಿ ಶಂಕುಸ್ಥಾಪನೆಶ್ರೀ ವಾಲ್ಕೇಶ್ವರ ಮಠದ ಸಮಗ್ರ ಜೀರ್ಣೋದ್ಧಾರಕ್ಕೆ ಶ್ರೀ ಕಾಶೀ ಮಠಾಧೀಶರಾದ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ 2022ರ ಮೇ ತಿಂಗಳಿನಲ್ಲಿ ಶಂಕುಸ್ಥಾಪನೆ ನೆರವೇರಿತ್ತು. ಈಗ ಸುಮಾರು 22,000 ಚದರ ಅಡಿಗಳ ಭವ್ಯವಾದ ಕಟ್ಟಡ ನಿರ್ಮಾಣಗೊಂಡಿದೆ.