Advertisement

ವೀರಶೈವರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ

04:59 PM Mar 29, 2021 | Team Udayavani |

ಹಿರೇಕೆರೂರ: ವೀರಶೈವ ಧರ್ಮ ವಿಶ್ವ ವಿಖ್ಯಾತಿಯಾಗಿದೆ. ಎಲ್ಲ ಧರ್ಮಗಳೊಂದಿಗೆ ಸಹಿಷ್ಣುತೆಯಿಂದ ಇದ್ದುಕೊಂಡು ತನ್ನದೇ ಆದ ಛಾಪು ಮೂಡಿಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

Advertisement

ಪಟ್ಟಣದ ಗುರು ಭವನದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ನೂತನ ಸಂಘಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ವೀರಶೈವರೆಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು.ವೀರಶೈವರು ದೇಶದ ಹಲವು ರಾಜ್ಯಗಳಲ್ಲಿದ್ದು, ವೀರಶೈವಒಳಪಂಗಡಗಳಲ್ಲಿ ಕಿತ್ತಾಟ ಬೇಡ. ನಾವೆಲ್ಲ ಒಂದೇ ಎಂಬಮನೋಭಾವ ನಮ್ಮದಾಗಬೇಕು ಎಂದರು.

ಜಗದ್ಗುರು ರೇಣುಕಾಚಾರ್ಯರನ್ನು ನಿತ್ಯ ಸ್ಮರಿಸಿ ಅವರ ಸಂದೇಶಗಳನ್ನು ಪಾಲನೆ ಮಾಡಬೇಕು. ಪಾಲಕರು ಮಕ್ಕಳಿಗೆ ವೀರಶೈವ ಧರ್ಮದ ತತ್ವ ಸಿದ್ಧಾಂತಗಳನ್ನು ತಿಳಿಸಿ ಧರ್ಮದ ಆಚರಣೆಗಳನ್ನು ಅನುಷ್ಠಾನ ಮಾಡಲು ಚಿಕ್ಕಂದಿನಿಂದಲೇ ರೂಢಿಸಬೇಕು ಎಂದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರಮಾತನಾಡಿ, ಸಮಾಜದ ಎಲ್ಲರೊಂದಿಗೆ ಅನ್ಯೋನ್ಯವಾಗಿರುವ ಜತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಜಂಗಮ ಸಮಾಜವಾಗಿದೆ. ಶ್ರೀ ರೇಣುಕಾಚಾರ್ಯರಜಯಂತಿ ಆಚರಣೆ ಮಾಡುವ ಮೂಲಕ ಅವರಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

Advertisement

ತಿಪ್ಪಾಯಿಕೊಪ್ಪದ ಶ್ರೀ ಗುರು ಮೂಕಪ್ಪ ಶಿವಯೋಗಿಗಳಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಮನುಷ್ಯಮಹಾದೇವನಾಗಲು ಅಧ್ಯಾತ್ಮದ ಚಿಂತನೆಗಳುಅವಶ್ಯಕವಾಗಿವೆ. ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಮೂಲಕ ಸುಲಭವಾಗಿ,ಸರಳವಾಗಿ ಬೋಧನೆ ಮಾಡಿದ್ದಾರೆ. ಅವುಗಳನ್ನು ಪಾಲನೆ ಮಾಡಬೇಕು. ಜಂಗಮರಿಗೆ ಸಮಾಜ ಗೌರವನೀಡುತ್ತಿದೆ. ಸಮಾಜದ ಅಭ್ಯುದಯಕ್ಕೆ ಜಂಗಮಸಮಾಜ ತೊಡಗಿಸಿಕೊಂಡಿದೆ. ಪ್ರತಿಯೊಬ್ಬರೂ ಸಿದ್ಧಾಂತಶಿಖಾಮಣಿಯನ್ನು ಪಾರಾಯಣ ಮಾಡಬೇಕು ಮತ್ತು ಅಧ್ಯಯನ ಮಾಡಬೇಕು ಎಂದರು.ಪ್ರಭುಸ್ವಾಮಿ ಹಾಲೇವಾಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಟ್ಟೀಹಳ್ಳಿ ಕಬ್ಬಿಣಕಂಥಿ ಮಠದ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಡ್ಲೂರು ಮುರುಘಾಮಠದ ಮುರುಘ ರಾಜೇಂದ್ರಸ್ವಾಮೀಜಿ ನೇತೃತ್ವ ವಹಿಸಿದ್ದರು. ತಹಶೀಲ್ದಾರ್‌ ಕೆ.ಎ.ಉಮಾ, ಅಖೀಲ ಕರ್ನಾಟಕ ಬೇಡ ಜಂಗಮ ಸಂಘದ ತಾಲೂಕುಘಟಕದ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂಥಿ ಮಠ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಷಣ್ಮುಖಯ್ಯ ಮಳಿಮಠ, ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಮದ್ವೀರಶೈವಸಮಾಜದ ಅಧ್ಯಕ್ಷ ವಿ.ಡಿ.ಹಂಪಾಳಿ, ರಾಜಶೇಖರ ಹಂಪಾಳಿ, ವೀರಶೈವ ಜಂಗಮ ಅರ್ಚಕರು ಮತ್ತು ಪುರೋಹಿತಸಂಘದ ತಾಲೂಕು ಗೌರವಧ್ಯಕ್ಷ ಪಂಚಾಕ್ಷರಯ್ಯ ಹಿರೇಮಠ,ಎಸ್‌.ಡಿ.ಹಿರೇಮಠ, ನಾಗಯ್ಯ ಚಿಕ್ಕನರಗುಂದಮಠ,  ಮಹಾಂತಯ್ಯ ಪಾಟೀಲ ಸೇರಿದಂತೆ ಅಖೀಲ ಕರ್ನಾಟಕಬೇಡಜಂಗಮ ಸಂಘ ಹಾಗೂ ವೀರಶೈವ ಜಂಗಮಅರ್ಚಕರು ಮತ್ತು ಪುರೋಹಿತರ ಸಂಘದ ಪದಾ ಧಿಕಾರಿಗಳು,ತಾಲೂಕಿನ ವಿವಿಧ ಗ್ರಾಮಗಳ ಜಂಗಮ ಸಮಾಜದವರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಪಟ್ಟಣದ ಜಿ.ಬಿ.ಶಂಕರರಾವ್‌ ವೃತ್ತದಿಂದಗುರುಭವನದ ವರೆಗೆ ವಿವಿಧ ವಾದ್ಯದೊಂದಿಗೆ ಶ್ರೀಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next