Advertisement
ಹಲವಾರು ವರ್ಷಗಳ ಆಗ್ರಹ
ರೆಂಜಿಲಾಡಿ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಪ್ರಾರಂಭಿಸಬೇಕೆಂಬ ಗ್ರಾಮಸ್ಥರ ಹಲವಾರು ವರ್ಷಗಳ ಆಗ್ರಹದಂತೆ ಉಪಕೇಂದ್ರ ಮಂಜೂರಾಗಿತ್ತು. ಆರೋಗ್ಯ ಸಹಾಯಕಿಯೋರ್ವರನ್ನು ನೇಮಿಸಲಾಗಿದೆ. ಆದರೆ ಜಾಗದ ಸಮಸ್ಯೆಯಿಂದಾಗಿ ಅಂದಿನಿಂದ ಇಂದಿನವರೆಗೂ ಆರೋಗ್ಯ ಕೇಂದ್ರ ಕಟ್ಟಡ ಪ್ರಾರಂಭಕ್ಕೆ ವಿಘ್ನಗಳೇ ಎದುರಾಗುತ್ತಿತ್ತು.
ಜಾಗದ ಸಮಸ್ಯೆಯಿಂದ ಕಟ್ಟಡ ಪ್ರಾರಂಭಕ್ಕೆ ಸಾಧ್ಯವಾಗದಿದ್ದ ಸಂದರ್ಭ ಸ್ಥಳೀಯ ಗ್ರಾ.ಪಂ. ಸದಸ್ಯರ ಮುತುವರ್ಜಿಯಿಂದ ಪಂಚಾಯತ್ ನೆರವಿನೊಂದಿಗೆ ರೆಂಜಿಲಾಡಿ ಗ್ರಾಮದ ಮೀನಾಡಿಯಲ್ಲಿ ಆರೋಗ್ಯ ಉಪಕೇಂದ್ರಕ್ಕೆ ಸರ್ವೆ ನಂಬರ್ 73ರಲ್ಲಿ 0.10 ಎಕ್ರೆ ಸ್ಥಳವನ್ನು ಖಾಸಗಿಯವರಿಂದ ಪಡೆದು ಕಂದಾಯ ಇಲಾಖೆಯಿಂದ ಸ್ಥಳ ಪರಿಶೀಲಿಸಿ, ಉಪಕೇಂದ್ರದ ಹೆಸರಿಗೆ ಪಹಣಿ ಪತ್ರ ಹಾಗೂ ನಕಾಶೆ ತಯಾರಿಸಿ ಗಡಿ ಗುರುತು ಮಾಡಿ ಜಮೀನಿಗೆ ಸೂಕ್ತ ಬೇಲಿ ಹಾಕಿ ಬಂದೋಬಸ್ತ್ ವ್ಯವಸ್ಥೆಯನ್ನು ಮೂರು ವರ್ಷಗಳ ಹಿಂದೆಯೇ ಮಾಡಲಾಗಿದ್ದರೂ ಉಪಕೇಂದ್ರ ಕಟ್ಟಡ ನಿರ್ಮಾಣಕ್ಕೆ ಅನುದಾನದ ಬಗ್ಗೆ ಯಾವುದೇ ಮಾಹಿತಿ ಆರೋಗ್ಯ ಇಲಾಖೆಯಿಂದ ಇನ್ನೂ ಬಂದಿಲ್ಲ.
Related Articles
ಆರೋಗ್ಯ ಉಪಕೇಂದ್ರಕ್ಕೆ ಕಟ್ಟಡದ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಅನುದಾನ ಬಿಡುಗಡೆಗೊಂಡ ಬಳಿಕ ಮುಂದಿನ ಕಾರ್ಯಕ್ಕೆ ಚಾಲನೆ ನೀಡಲಿದ್ದೇವೆ.
– ಡಾ| ರಾಮಕೃಷ್ಣ
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ
Advertisement
-ದಯಾನಂದ ಕಲ್ನಾರ್