Advertisement

ನವೀಕೃತ ಇಂಧನ ಬಳಕೆ-ಭಾರತಕ್ಕೆ 127ನೇ ಸ್ಥಾನ

03:05 AM Jul 19, 2017 | Team Udayavani |

ಉಡುಪಿ: ಭಾರತವು ನವೀಕೃತ ಇಂಧನಗಳ ಸಂಶೋಧನೆ, ಅಭಿವೃದ್ಧಿಯಲ್ಲಿ ವಿಶ್ವದಲ್ಲಿ 4ನೇ ಸ್ಥಾನದಲ್ಲಿದ್ದರೂ, ಅದರ ಬಳಕೆಯಲ್ಲಿ ಮಾತ್ರ 127ನೇ ಸ್ಥಾನದಲ್ಲಿದೆ. ಅಭಿವೃದ್ಧಿಶೀಲ ದೇಶದಲ್ಲಿ ಇದು ವಿಪರ್ಯಾಸ. ಈ ಬಗ್ಗೆ ಮತ್ತಷ್ಟು ಚಿಂತನೆ ಅಗತ್ಯ ಎಂದು ಸೆಲ್ಕೋ ಇಂಡಿಯಾದ ಸಿಒಒ ಮೋಹನ್‌ ಹೆಗ್ಡೆ ಅವರು ಹೇಳಿದರು.

Advertisement

ಸಿಂಡಿಕೇಟ್‌ ಬ್ಯಾಂಕ್‌ ಹಾಗೂ ಸೆಲ್ಕೋ ಫೌಂಡೇಶನ್‌ ವತಿಯಿಂದ ನವೀಕೃತ ಇಂಧನಕ್ಕೆ ಹಣಕಾಸು ನೆರವು ಕುರಿತು
ಸಿಂಡಿಕೇಟ್‌ ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯಲ್ಲಿ ಮಂಗಳ ವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶೇ. 33 ಮಂದಿ ವಿದ್ಯುತ್‌ ವಂಚಿತರು ದೇಶದಲ್ಲಿ ಶೇ. 72ರಷ್ಟು ಮಂದಿ ಹಳ್ಳಿ ಪ್ರದೇಶದಲ್ಲಿದ್ದಾರೆ. ನಾವು ವಿದ್ಯುತ್‌ ಪ್ರವಹಿಸುವ ವಿಧಾನದಲ್ಲಿ ಸಂಪೂರ್ಣ ಸ್ವಾವಲಂಬಿಗಳಾಗಿಲ್ಲ. ವಿದ್ಯುತ್‌ ಸೋರಿಕೆಯನ್ನು ತಡೆಯಲಾಗುತ್ತಿಲ್ಲ. ದೇಶದ
ಶೇ. 33 ಮಂದಿ ವಿದ್ಯುತ್‌ ವಂಚಿತರಾಗಿಯೇ ಇದ್ದಾರೆ. ಕರ್ನಾಟಕದಲ್ಲಿ ಸೋಲಾರ್‌ ಸಂಶೋಧನೆ ನಡೆಯುತ್ತಿದೆ. ನವೀಕೃತ ಇಂಧನಗಳ ಬಳಕೆಯ ಪ್ರೋತ್ಸಾಹಕ್ಕೆ ಬ್ಯಾಂಕುಗಳು ಕೂಡ ಸಹಕರಿಸಬೇಕು. ದೊಡ್ಡ ಮಟ್ಟದಲ್ಲಿ ವ್ಯವಹರಿಸುವವರು ಮಾತ್ರ ಬ್ಯಾಂಕಿನ ಸಾಲ ಮರುಪಾವತಿ ಮಾಡದೆ ವಂಚಿಸುತ್ತಾರೆ. ಸೌರಶಕ್ತಿ ಬಳಸುವವರು ಹೆಚ್ಚಿನವರು ಬಡವರು. ಅವರಿಗೆ ಸಾಲ ಕೊಡಿ. ಅವರು ಎಂದಿಗೂ ಮರುಪಾವತಿಯಲ್ಲಿ ಮೋಸ ಮಾಡೋದಿಲ್ಲ ಎಂದು ತಿಳಿಸಿದ ಮೋಹನ್‌ ಹೆಗ್ಡೆ ಅವರು, ಸೆಲ್ಕೋ ತನ್ನ ಯೋಜನೆಗಳನ್ನು ಈಶಾನ್ಯ ರಾಜ್ಯಗಳ ಹಿಂದುಳಿದ ಪ್ರದೇಶಗಳಿಗೆ ವಿಸ್ತರಿಸುವ ಚಿಂತನೆ ನಡೆಸಿದೆ ಎಂದರು.

ಸಿಂಡಿಕೇಟ್‌ ಬ್ಯಾಂಕ್‌ ಉಡುಪಿ ಪ್ರಾದೇಶಿಕ ಕಚೇರಿಯ ಡಿಜಿಎಂ ಎಸ್‌.ಎಸ್‌. ಹೆಗ್ಡೆ ಅವರು ಸೋಲಾರ್‌ ಬೆಳಕನ್ನು ಉರಿಸುವುದರ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ನಬಾರ್ಡ್‌ ಉಡುಪಿ-ಮಂಗಳೂರಿನ ಡಿಡಿಎಂ ರಮೇಶ್‌, ಸಿಂಡಿಕೇಟ್‌ ಬ್ಯಾಂಕಿನ ಅಸಿಸ್ಟೆಂಟ್‌ ಜನರಲ್‌ ಮ್ಯಾನೇ ಜರ್‌ ರಾಜೇಶ್‌ ಉಪಸ್ಥಿತರಿದ್ದರು.

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಫ್ರಾನ್ಸಿಸ್‌ ಬೋರ್ಗಿಯಾ ಸ್ವಾಗತಿಸಿ ದರು. ಸೆಲ್ಕೋ ಫೌಂಡೇಶನ್‌ನ ತರಬೇತುದಾರ ರಮಾನಾಥ್‌ ಎನ್‌. ದೀಕ್ಷಿತ್‌ ಮತ್ತು ಸ್ವಾತಿ ಮುರಲಿ ಅವರು ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next