Advertisement

ನೀಟ್‌ ಬರೆಯಲು ಒಳ ಅಂಗಿ ತೆಗೆಸಿದರು!

09:32 AM May 08, 2017 | Karthik A |

ಹೊಸದಿಲ್ಲಿ: ‘ಏ ಫ‌ುಲ್‌ ಕೈ ಶರ್ಟ್‌ ಹಾಕಿದ್ದೀಯಾ? ತೊಂದರೆ ಅಲ್ಲ. ಅದನ್ನು ಹರಿದರಾಯಿತು. ನೀವು ಧರಿಸಿದ ಒಳ ಅಂಗಿ ಪರೀಕ್ಷಿಸಬೇಕಾಗಿದೆ…’ ಇದು ಯಾವುದೇ ಸಿನಿಮಾ ಡೈಲಾಗ್‌ ಅಲ್ಲ ಕರ್ನಾಟಕ ಸೇರಿದಂತೆ ದೇಶದ 1,900 ಕೇಂದ್ರಗಳಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್‌) ನಡೆದ ಕೇಂದ್ರಗಳಲ್ಲಿ ನಡೆದ ಅಂಶಗಳಿವು. ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸಿದ ಪ್ರವೇಶ ಪರೀಕ್ಷೆ ಬರೆಯುವುದಕ್ಕೆ ಮುನ್ನ ಅಭ್ಯರ್ಥಿಗಳನ್ನು ಭದ್ರತಾ ಸಿಬ್ಬಂದಿ, ತಪಾಸಣೆ ವೇಳೆ ಕಂಡು ಬಂದ ಹೈಡ್ರಾಮ ಇದು. ನಿಯಮಗಳ ಹೊರತಾಗಿಯೂ ಆಭರಣ, ಹೇರ್‌ಕ್ಲಿಪ್‌, ವಾಚ್‌ ಧರಿಸಿ ಬಂದಿದ್ದರಿಂದ ಅವುಗಳನ್ನು ಕಟ್ಟುನಿಟ್ಟಾಗಿ ತೆಗೆಸಲಾಟಯಿತು. ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರಿಂದ ದೇಶಾದ್ಯಂತ ಪೂರ್ಣ ಪ್ರಮಾಣದಲ್ಲಿ ನೀಟ್‌ ನಡೆದಿದೆ.

Advertisement

ಕೇರಳದ ಕಣ್ಣೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ವಿದ್ಯಾರ್ಥಿನಿಯ ಒಳಉಡುಪು ತೆಗೆಯುವಂತೆ ಪರೀಕ್ಷಾಧಿಕಾರಿಗಳು ಸೂಚಿಸಿದ ಆಕ್ಷೇಪಾರ್ಹ ಘಟನೆಯೂ ನಡೆದಿದೆ. ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಆಕೆಯ ಹೆತ್ತವರು ಇಂಥ ಕ್ರಮ ಖಂಡಿಸಿದ್ದಾರೆ. ಮತ್ತೂಬ್ಬ ವಿದ್ಯಾರ್ಥಿನಿಯ ಡ್ರೆಸ್‌ನಲ್ಲಿದ್ದ ಲೋಹದ ಗುಂಡಿಗಳನ್ನು ತೆಗೆಯಲು ಆದೇಶಿಸಲಾಯಿತು.

ಶರ್ಟ್‌ ಹರಿದರು: ತಮಿಳುನಾಡಿನ ಹಲವು ಭಾಗಗಳಲ್ಲಿ ತುಂಬು ತೋಳಿನ ಶರ್ಟ್‌ ಧರಿಸಿ ಬಂದಿದ್ದವರ ಅಂಗಿಯನ್ನು ತುಂಡರಿಸಲಾಯಿತು. ಚಿನ್ನದ ಉಂಗುರ ತೆಗೆಯಲು ಸೂಚಿಸಲಾಯಿತು. ಬೂಟ್‌ ಹಾಕಿ ಬಂದವರನ್ನು ಅದನ್ನು ಕಳಚಿತ್ತು ಚಪ್ಪಲಿ ಧರಿಸಿ ಬರುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಯಿತು. ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳಿಗಾಗಿ 11 ಲಕ್ಷ ಮಂದಿ ಪರೀಕ್ಷೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next