Advertisement

ದೇಶದಲ್ಲಿ ಚಿಲ್ಲರೆ ಸಮಸ್ಯೆ ಇಲ್ಲ: ಜೇಟ್ಲಿ

03:45 AM Feb 17, 2017 | Team Udayavani |

ರಾಂಚಿ/ ನವದೆಹಲಿ: “ದೇಶದಲ್ಲಿ ಚಿಲ್ಲರೆ ಸಮಸ್ಯೆ ನೀಗಿದ್ದು, ಆರ್ಥಿಕ ವಹಿವಾಟು ಸಹಜ ಸ್ಥಿತಿಗೆ ಮರಳಿದೆ’. 500 ಹಾಗೂ 1000 ಮುಖ ಬೆಲೆಯ ನೋಟು ನಿಷೇಧಗೊಂಡು 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ದೇಶದ ಆರ್ಥಿಕತೆಯನ್ನು ಹೀಗೆ ಸಮರ್ಥಿಸಿಕೊಂಡರು.

Advertisement

ಜಾರ್ಖಂಡ್‌ನ‌ಲ್ಲಿ ಹೂಡಿಕೆದಾರರ ಸಮ್ಮೇಳನದಲ್ಲಿ  ಅವರು, “ಆರ್‌ಬಿಐ ಈಗ ದೈನಂದಿನ ವಹಿವಾಟಿಗೆ ಅಗತ್ಯವಿರುವಷ್ಟು ಹಣವನ್ನು ನಿಯಂತ್ರಿ ಸಲು ಶಕ್ತವಾಗಿದೆ. ದೇಶದ ಯಾವ ಎಟಿಎಂನಲ್ಲೂ ಹಣಕಾಸಿನ ಸಮಸ್ಯೆ ಎದುರಾಗಿಲ್ಲ. ಅಕಸ್ಮಾತ್‌ ಕೊರತೆ ಆಗಿದ್ದರೆ, ಗುತ್ತಿಗೆ ಏಜೆನ್ಸಿಗಳು ಅವರಿಗೆ ತಡವಾಗಿ ಹಣ ಪೂರೈಸಿರುವ ಸಾಧ್ಯತೆ ಇರುತ್ತದೆ. ಫೆ.20ರಿಂದ ಎಟಿಎಂಗಳಿಂದ 50 ಸಾವಿರದ ವರೆಗೆ ಹಣ ತೆಗೆಯಬಹುದು. ಮಾರ್ಚ್‌ 13ರ ನಂತರ ಹಣ ಪಡೆಯುವ ಮಿತಿ ಮೇಲಿನ ನಿರ್ಬಂಧವನ್ನು ತೆಗೆದುಹಾಕಲಾಗುವುದು’ ಎಂದಿದ್ದಾರೆ.

18 ತಿಂಗಳು ಬೇಕು!: ಇನ್ನೊಂದೆಡೆ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಸಂದರ್ಶನವೊಂದರಲ್ಲಿ, “ನೋಟು ಅಮಾನ್ಯದಿಂದ ದೇಶದ ಆರ್ಥಿಕತೆ ಸುಧಾರಿಸಿಕೊಳ್ಳಲು ಇನ್ನೂ 18 ತಿಂಗಳು ಬೇಕು. ಈ ವರ್ಷದ ಪೂರ್ತಿ ಇದರ ಸಂಕಟದಿಂದ ಹೊರಗೆ ಬರಲು ಸಾಧ್ಯವಿಲ್ಲ. ಮುಂದಿನ ವರ್ಷ ನಾವು ಚೇತರಿಸಿಕೊಳ್ಳಬಹುದು’ ಎಂದಿ ದ್ದಾರೆ. “ಹಣವನ್ನು ಯಾರೂ ಬಚ್ಚಿಡಲಾಗದು. ಅದು ಎಲ್ಲಿಗೆ ಹೋದರೂ ಭಾರತಕ್ಕೆ ಬಂದೇ ಬರುತ್ತೆ. ನೇಪಾಳ, ಭೂತಾನ್‌ ಅಲ್ಲದೆ, ಎನ್‌ಆರ್‌ಐಗಳ ವಿದೇಶಿ ವಿನಿಮಯದ ಹಣವೂ ವಾಪಸು ಬರಬೇಕು. ಮೋದಿ ಇದನ್ನು ನೋಟು ಅಪಮೌಲ್ಯ ಎಂದರು, ಈಗ ಆರ್ಥಿಕ ಸುಧಾರಣೆ ಎನ್ನುತ್ತಿದ್ದಾರೆ’ ಎಂದರು.

9 ಲಕ್ಷ ಖಾತೆಗಳು!: ಅಪನಗದೀಕರಣದ ಬಳಿಕದ 50 ದಿನಗಳ ಅವಧಿಯಲ್ಲಿ  ಅಕ್ರಮವಾಗಿ ಹಣ ತುಂಬಿದ 9 ಲಕ್ಷ ಖಾತೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಈಗ ಹದ್ದುಗಣ್ಣಿಟ್ಟಿದೆ. ಒಟ್ಟಾರೆ 18 ಲಕ್ಷ ಖಾತೆಯನ್ನು ಐಟಿ ಪರೀಕ್ಷೆಗೊಳಪಡಿಸಿದ್ದು, ಅದರಲ್ಲಿ 9 ಲಕ್ಷ ಖಾತೆಗಳನ್ನು ಅನುಮಾನದ ಪಟ್ಟಿಗೆ ಸೇರಿಸಲಾಗಿದೆ. “ಆಪರೇಶನ್‌ ಕ್ಲೀನ್‌ ಮನಿ’ ಯೋಜನೆ ಅಡಿಯಲ್ಲಿ ಇಲಾಖೆ ಈಗಾಗಲೇ 18 ಲಕ್ಷ ಮಂದಿಗೆ ಠೇವಣಿಗೆ ಸೂಕ್ತ ದಾಖಲೆ ಸಲ್ಲಿಸುವಂತೆ ಎಸ್‌ಎಂಎಸ್‌,  ಇಮೇಲ್‌ಗ‌ಳನ್ನು ಕಳುಹಿಸಿದೆ. ಫೆ.15ರ ಒಳಗೆ ದಾಖಲೆ ಸಲ್ಲಿಕೆಗೆ ಗಡುವು ನೀಡಲಾಗಿತ್ತು. ಇದರಲ್ಲಿ ಅರ್ಧದಷ್ಟು ಮಂದಿ ಸೂಕ್ತ ಪ್ರತಿಕ್ರಿಯೆ ನೀಡದ ಕಾರಣ, ಈ ಖಾತೆಗಳನ್ನು ಅನುಮಾನದ ಪಟ್ಟಿಗೆ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next