Advertisement

ವಿದೇಶಗಳಿಂದ ಹಣ ರವಾನೆ : ಭಾರತಕ್ಕೆ ಅಗ್ರಸ್ಥಾನ ; ಚೀನ, ಮೆಕ್ಸಿಕೋವನ್ನು ಹಿಂದಿಕ್ಕಿದ ಭಾರತ

01:07 AM Jul 21, 2022 | Team Udayavani |

ವಿಶ್ವಸಂಸ್ಥೆ: 2021ರಲ್ಲಿ ಭಾರತಕ್ಕೆ ವಿದೇಶಗಳಲ್ಲಿರುವ ಭಾರತೀಯರು ಒಟ್ಟಾರೆ 87 ಶತಕೋಟಿ ಡಾಲರ್‌ ಮೊತ್ತವನ್ನು ಕಳುಹಿಸಿದ್ದು, ಜಗತ್ತಿನಲ್ಲೇ ಅತೀ ಹೆಚ್ಚು ರೆಮಿಟೆನ್ಸ್‌ ಪಡೆದ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ವಿಶೇಷವೆಂದರೆ, ವಿದೇಶದಲ್ಲಿರುವ ಭಾರತೀಯರು ರವಾನಿಸಿರುವ ಮೊತ್ತದಲ್ಲಿ ಚೀನ ಮತ್ತು ಮೆಕ್ಸಿಕೋ ದೇಶಗಳನ್ನೂ ಭಾರತ ಹಿಂದಿಕ್ಕಿದೆ. ಹೀಗೆಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಿದೆ.

Advertisement

ಕಳೆದ ವರ್ಷದ ಟಾಪ್‌ 5 ರೆಮಿಟೆನ್ಸ್‌ ಸ್ವೀಕೃತ ದೇಶಗಳೆಂದರೆ ಭಾರತ, ಚೀನ, ಮೆಕ್ಸಿಕೋ, ಫಿಲಿಪ್ಪೀನ್ಸ್‌ ಮತ್ತು ಈಜಿಪ್ಟ್. ಕಡಿಮೆ ಮತ್ತು ಮಧ್ಯಮ ಆದಾಯವಿರುವ ದೇಶಗಳ ಪೈಕಿ ವಿದೇಶಗಳಿಂದ ಅತೀ ಹೆಚ್ಚು ಹಣ ಹರಿದುಬಂದಿರುವುದು ಭಾರತಕ್ಕೆ. 2ನೇ ಸ್ಥಾನದಲ್ಲಿರುವ ಚೀನ ಮತ್ತು 3ನೇ ಸ್ಥಾನದಲ್ಲಿರುವ ಮೆಕ್ಸಿಕೋ 53 ಶತಕೋಟಿ ಡಾಲರ್‌ ಮೊತ್ತವನ್ನು ಸ್ವೀಕರಿಸಿದ್ದರೆ, ಫಿಲಿಪ್ಪೀನ್ಸ್‌ಗೆ 36 ಶತಕೋಟಿ ಡಾಲರ್‌, ಈಜಿಪ್ಟ್ಗೆ 33 ಶತಕೋಟಿ ಡಾಲರ್‌ ಹರಿದುಬಂದಿದೆ ಎಂದು ವರದಿ ತಿಳಿಸಿದೆ.

ಅಮೆರಿಕ, ಯುಎಇ, ಸೌದಿ ಅರೇಬಿಯಾ ಮತ್ತು ಸ್ವಿಜರ್ಲೆಂಡ್‌ನಿಂದಲೇ ಅತೀ ಹೆಚ್ಚು ಹಣವು ವಿದೇಶಗಳಿಗೆ ರವಾನೆಯಾಗಿದೆ ಎಂದೂ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next