Advertisement

ಎಸೈನ್‌ಮೆಂಟ್‌ ನೆನಪು 

06:00 AM Jun 22, 2018 | |

ತಪ್ಪು ಮಾಡುವುದು ಸಹಜ ಕಣೊ, ತಿದ್ದಿ ನಡೆಯೋದು ಮನುಜ ಕಣೊ’ ಎಂಬುದು ಜನಪ್ರಿಯ ಮಾತು. ಮನುಷ್ಯನ ಜೀವನವೇ ಹಾಗೆ. ಇದರಲ್ಲಿ ಸರಿ-ತಪ್ಪುಗಳ ಸಮ್ಮಿಶ್ರವೇ ಜೀವನ. ಜೀವನದಲ್ಲಿ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ. ಆದರೆ, ತಪ್ಪನ್ನು ಅರಿತುಕೊಂಡು ತಿದ್ದಿ ನಡೆಯುವುದು ಜೀವನದ ಧರ್ಮವಾಗಿದೆ. ನಾನು ಕೂಡ ನನ್ನ ಕಾಲೇಜು ಬದುಕಿನಲ್ಲಿ ಒಂದು ತಪ್ಪು ಮಾಡಿದ್ದೆ. ಅದು ಈಗಲೂ ನನಗೆ ನೆನಪಾಗಿ ಪಶ್ಚಾತ್ತಾಪವಾಗುತ್ತಿದೆ.

Advertisement

ನಾನು ಕಾಲೇಜು ಜೀವನದ ದ್ವಿತೀಯ ವರ್ಷದಲ್ಲಿದ್ದೆ. ನಮಗೊಬ್ಬ ಭೌತಶಾಸ್ತ್ರ ಪ್ರಾಧ್ಯಾಪಕಿ ಇದ್ದರು. ಬಹಳ ಒಳ್ಳೆಯವರು. ಆದರೆ ಬಹಳ ಶಿಸ್ತನ್ನು ಅಪೇಕ್ಷಿಸುವವರು. ಅವರು ನಮಗೊಂದು ಅಸೈನ್‌ಮೆಂಟ್‌ ಕೊಟ್ಟಿದ್ದರು. ನಾನು ಅದನ್ನು ಮಾಡಿರಲಿಲ್ಲ. ಷವರ ಟೇಬಲ್‌ ಮೇಲೆ ಅಸೈನ್‌ಮೆಂಟ್‌ ಇಡದಿದ್ದಲ್ಲಿ ಲ್ಯಾಬ್‌ಗ ಪ್ರವೇಶವಿಲ್ಲ ಎಂದು ನಿಯವನ್ನು ಹಾಕಿದರು. ಛೆ! ನಾನು ಸೋಮಾರಿತನದಿಂದ ಅಸೈನ್‌ಮೆಂಟ್‌ ಬರೆದಿರಲಿಲ್ಲ. ಅಯ್ಯೋ! ಯಾರು ಈ ಕೆಲಸವನ್ನು ಮಾಡುವುದು ಎಂಬ ಉದಾಸೀನಭಾವ‌ ನನ್ನಲ್ಲಿ ಕಾಡುತ್ತಿತ್ತು. ಒಂದು ವೇಳೆ ಬರೆಯದಿದ್ದರೆ ಗೇಟ್‌ಪಾಸ್‌ ಖಂಡಿತ ಎಂದು ನನಗೆ ತಿಳಿಯಿತು. ಅವರ ಮುಂದೆಯೇ ಅಸೈನ್‌ಮೆಂಟ್‌ ಇಡದೇ ಹೋದರೆ ನಾನು ಲ್ಯಾಬ್‌ಗ ಹೋಗುವ ಹಾಗೆ ಇರಲಿಲ್ಲ. ಲ್ಯಾಬ್‌ಗ ಹೋಗದೆ ಮಾರ್ಕು ಸಿಗುವುದಿಲ್ಲ. ಏನು ಮಾಡುವುದು?

ನಾನು ಎಲ್ಲರೊಂದಿಗೆ ಹೋಗಿ ಬಂದು ಖಾಲಿ ಪುಸ್ತಕವನ್ನು ಟೇಬಲ್‌ ಮೇಲೆ ಇಟ್ಟು ಬಂದೆ. ಅದು ಅಸೈನ್‌ಮೆಂಟ್‌ ಪುಸ್ತಕವಲ್ಲ. ಸುಮಾರು ಇಪ್ಪತ್ತು ಪುಸ್ತಕಗಳ ರಾಶಿಯಲ್ಲಿ ನಾನು ಇಟ್ಟದ್ದು ಯಾವ ಪುಸ್ತಕ ಎಂದು ಯಾರಾದರೂ ತೆರೆದು ನೋಡುವ ಹಾಗಿರಲಿಲ್ಲ.

ನನಗೆ ಲ್ಯಾಬ್‌ಗ ಪ್ರವೇಶ ಸಿಕ್ಕಿತು. ಆಮೇಲೆ ಯಾರಿಗೂ ಗೊತ್ತಾಗದಂತೆ ಆ ಪುಸ್ತಕವನ್ನು ಹಾರಿಸಿಕೊಂಡು ಬಂದೆ. ಆ ಕ್ಷಣಕ್ಕೆ ತುಂಬ ಸಂತೋಷವಾಯಿತು. ಮೇಡಂದು ಕಣ್ಣು ತಪ್ಪಿಸಿದೆನಲ್ಲ, ಲ್ಯಾಬ್‌ಗ ಪ್ರವೇಶ ಮಾಡಿದೆನಲ್ಲ ಎಂದು ನನ್ನೊಳಗೆ ನಾನು ಅಭಿಮಾನ ಪಟ್ಟುಕೊಂಡೆ.

ಆದರೆ, ಮೇಡಂಗೆ ಇದು ಗೊತ್ತಾಗಲಿಲ್ಲ. ಅವರು ನನ್ನನ್ನು ಎಂದಿನ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ನಾನು ಕೂಡ ಅವರಿಗೆ ಕಣ್ಣಿಗೆ ಮಣ್ಣೆರಚಿದ್ದು ಗೊತ್ತಾಗದಂತೆ ವರ್ತಿಸುತ್ತಿದ್ದೆ.ಈಗ ಮಾತ್ರ ಅದನ್ನು ನೆನಪಿಸಿಕೊಂಡರೆ ತುಂಬ ಬೇಸರವಾಗುತ್ತದೆ. ನಮ್ಮ ಮೇಡಂ ತುಂಬ ಒಳ್ಳೆಯವರು. ಅವರು ಯಾವತ್ತೂ ತಪ್ಪು ಎಣಿಸುವವರಲ್ಲ. ನಮ್ಮ ಒಳ್ಳೆಯದಕ್ಕಾಗಿಯೇ ಅಸೈನ್‌ಮೆಂಟ್‌ ಕೊಟ್ಟಿದ್ದರು. ನಾನು ಮಾತ್ರ ಮಾಡಲಿಲ್ಲ. ಮಾಡದಿರುವುದು ನನ್ನ ಒಂದನೆಯ ತಪ್ಪು. ಅವರಿಗೆ ಮೋಸ ಮಾಡಿದ್ದು ಎರಡನೆಯ ತಪ್ಪು. ಹೀಗೆ ಭಾವಿಸುತ್ತ ತುಂಬ ಸಂಕಟ ಅನುಭವಿಸಿದ್ದೇನೆ.

Advertisement

ಆ ಮೇಡಂ ನಮಗೆಲ್ಲ ತುಂಬ ಬೈಯ್ಯುತ್ತಿದ್ದರು. ಹಾಗಾಗಿ, ಅವರ ಬಗ್ಗೆ ತುಂಬ ಬೇಸರವಿತ್ತು. ಆದರೆ, ಅವರು ಯಾಕೆ ಬೈಯ್ಯುತ್ತಿದ್ದಾರೆಂದು ಈಗ ಗೊತ್ತಾಗುತ್ತಿದೆ. ಗೊತ್ತಾಗುವಾಗ ಅವರ ಜೊತೆ ಮಾತನಾಡೋಣವೆಂದರೆ ಅವರ ಎಲ್ಲಿದ್ದಾರೋ ಗೊತ್ತಿಲ್ಲ. “ನಾನು ತಪ್ಪು ಮಾಡಿದ್ದೆ ಮೇಡಂ, ಕ್ಷಮಿಸಿ’ ಎಂದು ಈ ಮೂಲಕವೇ ನನ್ನ ತಪ್ಪೊಪ್ಪಿಗೆಯನ್ನು ಕಳುಹಿಸುತ್ತಿದ್ದೇನೆ, ಮೇಡಂ.

ನಿರ್ಮಲಾ
ಮಿಲಾಗ್ರಿಸ್‌ ಕಾಲೇಜು, ಕಲ್ಯಾಣಪುರ

Advertisement

Udayavani is now on Telegram. Click here to join our channel and stay updated with the latest news.

Next