Advertisement

ಗರ್ಭಪಾತ ಬೇಕೋ, ಬೇಡವೋ ಐರ್ಲೆಂಡ್‌ನ‌ಲ್ಲಿಂದು ಜನಮತ ಸಂಗ್ರಹ

07:15 AM May 25, 2018 | |

ಬೆಳಗಾವಿ: ಬೆಳಗಾವಿ ಮೂಲದ ಡಾ.ಸವಿತಾ ಹಾಲಪ್ಪನವರ ಅವರು ಐರ್ಲೆಂಡ್‌ನ‌ಲ್ಲಿ ಗರ್ಭಪಾತಕ್ಕೆ ಬಲಿಯಾಗಿ ಆರು ವರ್ಷಗಳು ಕಳೆದಿದ್ದು, ಮೇ 25ರಂದು ಐರ್ಲೆಂಡ್‌ ಸರಕಾರ ಗರ್ಭಪಾತ ಬೇಕೋ, ಬೇಡವೋ ಎಂಬ ಬಗ್ಗೆ ಜನಾದೇಶ ಪಡೆಯಲಿದೆ.

Advertisement

ಡಾ.ಸವಿತಾ ಹಾಲಪ್ಪನವರ ಸಾವಿನ ಪ್ರಕರಣ ಇಡೀ ವಿಶ್ವದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತ್ತು.ಇದು ಐರ್ಲೆಂಡ್‌ ದೇಶದ ಕಾನೂನು ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಆ ದೇಶದ ಮಾನವೀಯತೆ ಹಾಗೂ
ಸಂಪ್ರದಾಯದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಮಗಳ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದ ಕುಟುಂಬ ಸದಸ್ಯರು ಸಹ ಕಾನೂನು ಹೋರಾಟ ನಡೆಸಿದ್ದರು.

ಈ ಎಲ್ಲ ಟೀಕೆ, ಕಾನೂನು ಹೋರಾಟ ಹಾಗೂ ಪ್ರತಿಭಟನೆಗಳಿಗೆ ಸ್ಪಂದಿಸಿ, ಐರ್ಲೆಂಡ್‌ ಸರಕಾರ ಗರ್ಭಪಾತ ನಿಷೇಧ ಕಾನೂನಿಗೆ ತಿದ್ದುಪಡಿ ತರಲು ಜನಾದೇಶ ಪಡೆಯುಲು ಮುಂದಾಗಿದೆ. ಇದಕ್ಕೆ ಅನುಗುಣವಾಗಿ ಮೇ 25ರಂದು ಜನಮತ ಸಂಗ್ರಹ ನಡೆಯಲಿದೆ.

ಈ ಕುರಿತು “ಉದಯವಾಣಿ’ ಜತೆ ಮಾತ  ನಾಡಿದ ಸವಿತಾ ಹಾಲಪ್ಪನವರ ತಂದೆ ಅಂದಾನಪ್ಪ ಯಾಳಗಿ, ಗರ್ಭಪಾತ ನಿಷೇಧ ಕಾನೂನಿಗೆ ತಿದ್ದುಪಡಿಯಾಗಬೇಕು. ಅಲ್ಲಿನ ಜನರು ಈಗಿನ ಕಾನೂನಿಗೆ ವಿರುದಟಛಿವಾಗಿ
ಮತ ಚಲಾಯಿಸಬೇಕು. ನನ್ನ ಮಗಳಿಗೆ ಆಗಿರುವ ಅನ್ಯಾಯ ಬೇರೆಯವರಿಗೆ ಆಗ ದಂತೆ ತಡೆಯಬೇಕು. ಶುಕ್ರವಾರ ನಡೆಯುವ ಜನಾದೇಶದಲ್ಲಿ ಕಾನೂನು ತಿದ್ದುಪಡಿ ಆಗಬೇಕು ಎಂದು ಐರ್ಲೆಂಡ್‌ ಜನರಿಗೆ ವಾಟ್ಸ್‌ಅಪ್‌ ಮೂಲಕ
ಮನವಿ ಮಾಡಿಕೊಂಡಿದ್ದೇವೆ.

ಕಾನೂನು ತಿದ್ದುಪಡಿಯಾದರೆ ಅದಕ್ಕೆ ತಮ್ಮ ಮಗಳ ಹೆಸರಿಡಬೇಕು ಎಂದು ಕೇಳಿದ್ದೇವೆ ಎಂದು ಹೇಳಿದರು.

Advertisement

ನನ್ನ ಪುತ್ರಿ ಸಾವಿಗೀಡಾದ ಮೊದಲ ದಿನದಿಂದಲೇ ನಾವು ಈಗಿನ ಐರ್ಲೆಂಡ್‌ ದೇಶದ ಕಾನೂನಿನ ವಿರುದಟಛಿ ಹೋರಾಟ ನಡೆಸಿದ್ದೇವೆ. ಈಗ ನಮ್ಮ ಹೋರಾಟ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ನಮ್ಮ ಹೋರಾಟ ಫಲಪ್ರದವಾಗಲಿದೆ ಎಂಬ ಆಶಯವಿದೆ ಎಂದು ಅಂದಾನಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next