Advertisement
ಹಳೆ ಕಟ್ಟಡ ಎಂಬ ಕಾರಣಕ್ಕೆ ಗಟ್ಟಿ ಮುಟ್ಟು ನಿಜ. ಆದರೆ ವಿದ್ಯಾರ್ಥಿಗಳು, ಶಾಲಾ ಸಿಬಂದಿ ಜೀವ ಅದಕ್ಕಿಂತ ಹೆಚ್ಚು ಪ್ರಾಮುಖ್ಯತೆ ಪಡೆ ಯುತ್ತದೆ. ಇದೇ ಕಾರಣಕ್ಕೆ ಈಗ ಈ ಶಾಲಾ ಕಟ್ಟಡ ಚರ್ಚಾ ವಿಷಯವಾಗಿದೆ. ಮಾತ್ರವಲ್ಲ ಡಾ| ಶಿವರಾಮ ಕಾರಂತರ ಹುಟ್ಟುಹಬ್ಬದ ಆಚರಣೆಗೆ ಸಿದ್ಧತೆ ನಡೆಯುವ ಹಂತದಲ್ಲಿ ಮತ್ತೆ ಇದು ಮುನ್ನೆಲೆಗೆ ಬಂದಿದೆ.
ಈ ಶಾಲಾ ಕಟ್ಟಡ ಒಂದು ರೀತಿಯಲ್ಲಿ ಆವರಣ ಗೋಡೆಯಾಗಿ ನಿಂತಿದೆ. ಶಾಲಾ ಕೊಠಡಿಯ ಒಳಗಿರುವ ಬೆಂಚು ಹಾಗೂ ರಸ್ತೆಯಲ್ಲಿ ಸಂಚರಿಸುವ ಘನ ವಾಹನಗಳ ನಡುವೆ ಶಾಲಾ ಗೋಡೆ ಮಾತ್ರವೇ ಇದೆ. ವಾಹನ ಬಂದು ಈ ಗೋಡೆಗೆ ಅಪ್ಪಳಿಸುವ ಮೊದಲು, ಸಂಬಂಧಪಟ್ಟವರು ಗಮನ ಹರಿಸುವ ಅಗತ್ಯವಿದೆ. ಕಾರಂತರ ಹುಟ್ಟು ಹಬ್ಬದ ನೆಪದಲ್ಲಾದರೂ ಶಾಲೆ ಗೊಂದು ವ್ಯವಸ್ಥಿತ ಕಾಯಕಲ್ಪ ನೀಡುವ ಅಗತ್ಯವಿದೆ. ಕಟ್ಟಡ ತೆರವಿಗೆ ಮನವಿ
ವಿದ್ಯಾರ್ಥಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಈಗ ಶಾಲಾ ಶಿಕ್ಷಕರ ಕೊಠಡಿ ಹಾಗೂ ಕಂಪ್ಯೂಟರ್ ಕೊಠಡಿ ಇದೆ. ರಸ್ತೆ ಅಂಚಿನ ಕಟ್ಟಡದಲ್ಲಿ ಕುಳಿತುಕೊಳ್ಳಲು ಎಲ್ಲರೂ ಭಯಪಡುತ್ತಾರೆ. ಆದ್ದರಿಂದ ಇದು ಅನಾಥವಾಗಿ ಬಿದ್ದಿದೆ. ಆದ್ದರಿಂದ ಈ ಕಟ್ಟಡವನ್ನು ತೆರವು ಮಾಡಿ, ಈ ಜಾಗದಲ್ಲಿ ಕ್ರೀಡಾಂಗಣಕ್ಕೆ ವ್ಯವಸ್ಥೆ ಮಾಡುವಂತೆ ಶಾಲಾ ವತಿಯಿಂದ ಮನವಿ ಮಾಡಲಾಗಿತ್ತು. ಕನಿಷ್ಠ, ಬದಿಯ ಎರಡು ಕೊಠಡಿಗಳನ್ನು ತೆರವು ಮಾಡಿದರೂ ಸಾಕಿತ್ತು. ಆದರೆ ಇಲಾಖೆ ಇದಾವುದನ್ನೂ ಮಾಡದೆ, ಜಿ.ಪಂ. ಅಧ್ಯಕ್ಷರ ನಿಧಿಯನ್ನು ಬಳಸಿಕೊಂಡು 2.5 ಲಕ್ಷ ರೂ. ಅನುದಾನ ಮಂಜೂರು ಮಾಡಿತು. ಕಿಟಕಿಗೆ ಎಸ್ಟಿಮೇಟ್ ತೆಗೆದುಕೊಂಡು ಹೋದವರ ಸುಳಿವೇ ಇಲ್ಲ. ಉಳಿದಂತೆ ಅರೆಬರೆ ಕಾಮಗಾರಿ ನಡೆಸಿ, ಕೈ ತೊಳೆದುಕೊಂಡಿತು. ಬಳಿಕ ಕಾಮಗಾರಿ ನಡೆದಿಲ್ಲ.
Related Articles
ಸೆ. 18ರಂದು ಖಾಸಗಿ ಬಸ್ಸೊಂದು ಡಾ| ಶಿವರಾಮ ಕಾರಂತರ ಪ್ರೌಢಶಾಲೆಯ ಆವರಣಕ್ಕೆ ಢಿಕ್ಕಿ ಹೊಡೆದಿತ್ತು. ಸಂಜೆ 6ರ ಸುಮಾರಿಗೆ ಅಪಘಾತ ಸಂಭವಿಸಿದ ಕಾರಣ, ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಬಸ್ ಶಾಲಾ ಆವರಣ ಗೋಡೆಯನ್ನು ಮುರಿದು ಒಳನುಗ್ಗಿತ್ತು. ಇದೇ ಬಸ್ ಶಾಲಾ ಗೋಡೆಗೆ ಅಪ್ಪಳಿಸುವ ಸಂಭವ ಹೆಚ್ಚಿತ್ತು. ಇದರ ಹಿಂದೆ ಹಲವು ವಾಹನಗಳು ಇದೇ ಕಟ್ಟಡವನ್ನು ಸವರಿಕೊಂಡು ಹೋದ ನಿದರ್ಶನ ಇದೆ. ಈ ಶಾಲಾ ಎರಡು ಕೊಠಡಿಗಳನ್ನು ತೆರವು ಮಾಡಿ, ಮುಂಬರುವ ಸಾಂಭವ್ಯಾ ಅನಾಹುತ ತಪ್ಪಿಸಿ ಎಂದು ಮೊರೆ ಇಡುತ್ತಿದ್ದಾರೆ.
Advertisement
ಕ್ರಮದ ಭರವಸೆಇರುವ ಕೊಠಡಿಯಲ್ಲಿ ಕ್ರೀಡಾ ಸಲಕರಣೆ, ಕಂಪ್ಯೂಟರ್ ಕೊಠಡಿ ಇದೆ. ಕಂಪೌಂಡ್ ಶಾಲಾ ಕೊಠಡಿ ಗೋಡೆ ಆಗಿರುವುದರಿಂದ ತೊಂದರೆ ಇದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು.
– ಸುಕನ್ಯಾ ಡಿ.ಎನ್.,
ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು ಗಣೇಶ್ ಎನ್. ಕಲ್ಲರ್ಪೆ