Advertisement

ಕೂದಲು ಉದುರುವಿಕೆಗೆ ಪರಿಹಾರ

09:44 PM Dec 09, 2019 | mahesh |

ಕೂದಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರಸ್ತುತ ಸ್ತ್ರೀ ಮತ್ತು ಪುರುಷರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ. ಕೂದಲು ಉದುರಲು ಅನೇಕ ಕಾರಣಗಳಿವೆ. ಅದು ವಂಶವಾಹಿಯೇ ಆಗಿರಬಹುದು ಅಥವಾ ಹಾರ್ಮೋನ್‌ ಅಸಮತೋಲನ, ಥೈರಾಯ್ಡ ಗ್ರಂಥಿಯ ನಿಷ್ಕ್ರಿಯತೆ, ಪೋಷಕಾಂಶಗಳ ಕೊರತೆಯಿಂದಲೂ ಕೂದಲು ಉದುರುತ್ತದ. ಈ ಸಮಸ್ಯೆ ನಿವಾರಣೆಗೆ ಕೆಲವು ಮನೆ ಮದ್ದು ಇಲ್ಲಿದೆ.

Advertisement

ನೆಲ್ಲಿಕಾಯಿ
ನೆಲ್ಲಿಕಾಯಿಯಲ್ಲಿರುವ ವಿಟಮಿನ್‌ ಸಿ ಅಂಶ ಕೋಶ ಪುನರ್‌ ಉದ್ದೀಪನಗೊಳಿಸುತ್ತದೆ. ನೆಲ್ಲಿ ಕಾಯಿ ಪುಡಿ ಅಥವಾ ರಸವನ್ನು ತಲೆಗೆ ಹಚ್ಚಿಕೊಳ್ಳಬಹುದು.

ಮದರಂಗಿ
ಮದುಮಗಳ ಕೈಯ ಅಂದವನ್ನು ಹೆಚ್ಚಿಸುವ ಮದಂರಂಗಿ ತಲೆಯ ಕೂದಲು ಉದುರುವಿಕೆ ಸಮಸ್ಯೆಯನ್ನು ನಿವಾರಿಸುತ್ತದೆ. ಮದರಂಗಿ ಎಲೆಯನ್ನು ರುಬ್ಬಿ ಪೇಸ್ಟ್‌ ರೀತಿಯಲ್ಲಿ ಹಚ್ಚಬಹುದು.

ವೀಳ್ಯದೆಲೆ
ವೀಳ್ಯದೆಲೆಯನ್ನು ನುಣ್ಣಗೆ ಅರೆದು, ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ, ಕೂದಲು ಉದುರುವುದು, ಹೊಟ್ಟು ಕಡಿಮೆಯಾಗುತ್ತದೆ.

ಬಿಸಿ ಎಣ್ಣೆ ಮಸಾಜ್‌
ಬಿಸಿ ಕೊಬ್ಬರಿ ಎಣ್ಣೆಯನ್ನು ತಲೆಗೆ ಸರಿಯಾಗಿ ಮಸಾಜ್‌ ಮಾಡಿ. ಅದರಲ್ಲೂ ತಲೆಗೆ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಹಚ್ಚಿದರೆ ಕೂದಲಿನ ಬುಡದ ರಂಧ್ರಗಳು ತೆರೆದುಕೊಂಡು ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.

Advertisement

ಮೊಟ್ಟೆ
ಮೊಟ್ಟೆಯಲ್ಲಿ ಅಪಾರ ಪ್ರಮಾಣದಲ್ಲಿ ಪ್ರೋಟಿನ್‌ ಅಂಶವಿದೆ. ಮೊಟ್ಟೆಯಲ್ಲಿರುವ ಸಲ#ರ್‌ ಅಂಶದಿಂದಾಗಿ ಕೂದಲು ಬೆಳವಣಿಗೆ ಉತ್ತಮವಾಗುತ್ತದೆ. ಆಲೀವ್‌ ಎಣ್ಣೆ ಜತೆ ಇದನ್ನು ಬಳಸಿದರೆ ಮತ್ತಷ್ಟು ಉತ್ತಮ ಫ‌ಲಿತಾಂಶ ನೀಡುತ್ತದೆ.

ಲೊಳೆಸರ
ಲೊಳೆಸರವೂ ನೆತ್ತಿಯ ಚರ್ಮದ ಆರೋಗ್ಯ ಮತ್ತು ಕೂದಲಿನ ಮರು ಬೆಳವಣಿಗೆ ಸಹಾಯ ಮಾಡುತ್ತದೆ. ಲೊಳೆಸರದ ರಸವನ್ನು ಹಚ್ಚಿ 1 ಗಂಟೆ ಬಿಟ್ಟು ತಲೆ ಸ್ನಾನ ಮಾಡುವುದರಿಂದ ಕೂದಲು ಉದುರುವಿಕೆಯಿಂದ ಪರಿಹಾರ ಲಭಿಸುತ್ತದೆ. ವಾರದಲ್ಲಿ ಮೂರು-ನಾಲ್ಕು ದಿನ ಇದನ್ನು ಹಚ್ಚಿಕೊಳ್ಳಬಹುದು.

ಮೆಂತ್ಯೆ
ಮೆಂತ್ಯೆಯನ್ನು ರಾತ್ರಿ ನೀರಿನಲ್ಲಿ ಹಾಕಿ ಬೆಳಗ್ಗೆ ರುಬ್ಬಿಕೊಂಡು ತಲೆಗೆ ಹಚ್ಚಬೇಕು. 30 ನಿಮಿಷದ ಅನಂತರ ಶ್ಯಾಂಪೂ, ಸಾಬೂನು ಬಳಸದೇ ತಲೆ ಸ್ನಾನ ಮಾಡಬೇಕು. ವಾರದಲ್ಲಿ 2 ಬಾರಿ ಈ ರೀತಿ ಮಾಡಿದರೆ ಉತ್ತಮ. ಮೆಂತ್ಯೆಯಲ್ಲಿರುವ ನಿಕೋಟಿನಿಕ್‌ ಆಮ್ಲವು ಕೂದಲ ಉದುರುವಿಕೆ ಕಡಿಮೆ ಮಾಡುತ್ತದೆ.

- ಧನ್ಯಾಶ್ರೀ ಬೋಳಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next