ವರದಿ: ಭೈರೋಬಾ ಕಾಂಬಳೆ
ಬೆಳಗಾವಿ: ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದ್ದಂತೆ ರೆಮ್‌ಡೆಸಿವಿಯರ್ ಕಾಳಸಂತೆಕೋರರು ಹೆಚ್ಚುತ್ತಿದ್ದು, ಪೊಲೀಸರು ಎಚ್ಚೆತ್ತುಕೊಂಡು ಕಾಳಸಂತೆಕೋರರ ಹೆಡೆಮುರಿ ಕಟ್ಟುತ್ತಿದ್ದಾರೆ.
ಕೊರೊನಾ ನೆಪದಲ್ಲಿ ಅಕ್ರಮ ದಂಧೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿ ಸಿ ಹೆಚ್ಚಿನ ತನಿಖೆ ನಡೆಸಿದ್ದಾರೆ. ಕೊರೊನಾ ಸೊಂಕು ಹೆಚ್ಚುತ್ತಿರುವುದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕಾಳ ಸಂತೆಕೋರರು ತಮ್ಮ ದಂಧೆ ಶುರು ಮಾಡಿದ್ದರು.
ಕೊರೊನಾ ಸೋಂಕಿತರಿಗೆ ಅಗತ್ಯ ಇರುವ ರೆಮ್ ಡೆಸಿವಿಯರ್ ಚುಚ್ಚುಮದ್ದು ಎಂಆರ್‌ಪಿ ದರ 3500 ರೂ. ಇದ್ದರೆ, ಕಾಳಸಂತೆಯಲ್ಲಿ 25-30 ಸಾವಿರ ರೂ.ವರೆಗೂ ಮಾರಾಟವಾಗುತ್ತಿತ್ತು. ಸಿಸಿಬಿ ಹಾಗೂ ಮಾಳಮಾರುತಿ ಠಾಣೆ ಪೊಲೀಸರು ಕಾಳಸಂತೆಯಲ್ಲಿ ರೆಮ್‌ಡೆಸಿವಿಯರ್ ಮಾರಾಟ ಮಾಡುತ್ತಿದ್ದ ಮೂವರನ್ನು ಬಂ ಧಿಸಿ ಇದರ ಹಿಂದಿನ ಜಾಲ ಭೇದಿಸಲು ತನಿಖೆ ನಡೆಸಿದ್ದಾರೆ.
ಮೂವರು ದಂಧೆಕೋರರು ಅಂದರ್: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪುರ ಗ್ರಾಮದ ಸದ್ಯ ಬೆಳಗಾವಿ ಶಾಹೂನಗರದ ಸಮರ್ಥ ಗಲ್ಲಿಯಲ್ಲಿದ್ದ ಮಂಜುನಾಥ ದುಂಡಪ್ಪ ದಾನವಾಡಕರ, ಬೆ„ಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ಸದ್ಯ ಶಿವಾಜಿ ನಗರದಲ್ಲಿದ್ದ ಸಂಜೀವ ಚಂದ್ರಶೇಖರ ಮಾಳಗಿ, ಬಾಗಲಕೋಟೆ ಜಿಲ್ಲೆ ಬೀಳಗಿಯ ಮಹೇಶ ಕೆಂಗಲಗುತ್ತಿ ಎಂಬಾತರನ್ನು ಬಂಧಿಸಿದ್ದಾರೆ.
ಮೂರು ರೆಮ್‌ಡೆಸಿವಿಯರ್ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ರೆಮ್‌ಡೆಸಿವಿಯರ್ ಮಾರಾಟದ ಜಾಲ ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದು, ಇದರ ಹಿಂದಿರುವ ಕೈವಾಡದ ಬಗ್ಗೆ ಬಂ ಧಿತರ ವಿಚಾರಣೆ ನಡೆಸಿದ್ದಾರೆ. ಕಲುºರ್ಗಿವರೆಗೂ ಇದರ ಜಾಲ ವ್ಯಾಪಿಸಿದೆ ಎಂದು ಹೇಳಲಾಗುತ್ತಿದೆ.