Advertisement
ಜಯನಗರ ನಿವಾಸಿ ಮಾರುತಿ(23) ಬಂಧಿತ. ಆರೋಪಿಯಿಂದ ಆರು ರೆಮ್ ಡೆಸಿವಿಯರ್ ಅನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಆಸ್ಪತ್ರೆಯ ವೈದ್ಯರಿಗೆ ಆರೋಪಿಯ ಕೃತ್ಯದ ಬಗ್ಗೆ ಮಾಹಿತಿ ನೀಡಿ, ಮತ್ತೂಮ್ಮೆ ಈ ರೀತಿ ನಡೆದರೆ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಕೂಡ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.
Related Articles
ಆರೋಪಿ ಮಾರುತಿ 15 ದಿನಗಳ ಹಿಂದಷ್ಟೇ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದ. ಆಸ್ಪತ್ರೆ ಮತ್ತು ಹೊರಗಡೆ ತನ್ನ ಪರಿಚಯಸ್ಥರ ಮೂಲಕ ಅಕ್ರಮವಾಗಿ ರೆಮ್ ಡೆಸಿವಿಯರ್ ಮಾರಾಟದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ. ಬಳಿಕ ಒಂದು ವಾರ ಅಕ್ರಮವಾಗಿ ರೆಮ್ ಡೆಸಿವಿಯರ್ ಸಂಗ್ರಹದ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾನೆ. ಅನಂತರ ಅವುಗಳನ್ನು ರೋಗಿಗಳು ಹಾಗೂ ಆಸ್ಪತ್ರೆಯ ವೈದ್ಯರ ಕಣ್ಣು ತಪ್ಪಿಸಿ ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು. ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement