ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚುಭಾಷೆಗೆ ರಿಮೇಕ್ ಆಗಿರುವ ಚಿತ್ರ ಯಾವುದು ಎಂಬಪ್ರಶ್ನೆಗೆ ಉತ್ತರ “ಯು ಟರ್ನ್’. ಹೌದು, ಪವನ್ ಕುಮಾರ್‌ನಿರ್ದೇಶನದಲ್ಲಿ ಮೂಡಿಬಂದಿದ್ದ “ಯು ಟರ್ನ್’ ಚಿತ್ರಬರೋಬ್ಬರಿ 8 ಭಾಷೆಗೆ ರಿಮೇಕ್ ಆಗುವ ಮೂಲಕಕನ್ನಡದಲ್ಲಿ ದಾಖಲೆ ನಿರ್ಮಿಸಿದೆ. ಸೌಥ್ ಇಂಡಿಯಾದಭಾಷೆಗಳಾದ ತಮಿಳು, ತೆಲುಗು, ಮಲೆಯಾಳಂ ಜೊತೆಗೆಸಿಂಹಳಿ, μಲಿಪಿನೋ, ಹಿಂದಿ ಮತ್ತು ಬಂಗಾಳಿಭಾಷೆಗಳಿಗೂ “ಯು ಟರ್ನ್’ ಚಿತ್ರ ರಿಮೇಕ್ ಆಗಿದೆ.2016ರಲ್ಲಿ ತೆರೆಗೆ ಬಂದ “ಯು ಟರ್ನ್’ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಸೌಂಡ್ ಮಾಡದಿದ್ದರೂ, ಚಿತ್ರದಕಥಾಹಂದರ, ನಿರೂಪಣೆ ಬಹುತೇಕರ ಗಮನ ಸೆಳೆದಿತ್ತು.
ರಶ್ಮಿಕಾ ರಿಂಗ್ ಸಸ್ಪೆ ನ್
ಸಿನಿಮಾದ ಜೊತೆ ಜೊತೆಗೆ ಬೇರೆ ಬೇರೆ ವಿಷಯಗಳಿಗೂಸುದ್ದಿಯಾಗುವ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಕೂಡಒಬ್ಬರು. ಸದ್ಯ ಹಿಂದಿಯ “ಮಿಷನ್ ಮಜ್ನು’ ಚಿತ್ರದಶೂಟಿಂಗ್‌ನಲ್ಲಿ ಬಿಝಿಯಾಗಿರುವ ರಶ್ಮಿಕಾ ಮಂದಣ್ಣ,ತಮ್ಮ ಕೈಯಲ್ಲಿ ಹೊಸದಾಗಿ ಧರಿಸಿರುವ ರಿಂಗ್ ಒಂದರಫೋಟೋವನ್ನು ಕ್ಲಿಕ್ ಮಾಡಿ, “ನಾನು ನಿಮ್ಮನ್ನುಹುಡುಕಿಕೊಂಡಿದ್ದೇನೆ. ನಾನು ಇದನ್ನು ಸ್ವೀಕರಿಸಿದ್ದೇನೆ.ನಾನು ನಿಮ್ಮ ರಹಸ್ಯವಾದ ಪುಟ್ಟ ಸಂದೇಶವನ್ನು ಓದಿದ್ದೇನೆ.ಉಂಗುರ ನನಗೆ ಪಫೆìಕ್ಟ್ ಆಗಿ μಟ್ ಆಗುತ್ತದೆ. ನನಗೆಇಷ್ಟವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಆದ್ರೆ ರಶ್ಮಿಕಾಈ ಮಾತನ್ನ ಯಾರಿಗೆ ಹೇಳಿದ್ದಾರೆ ಅನ್ನೋದು ಮಾತ್ರಇನ್ನೂ ಗೊತ್ತಾಗದಿರುವುದರಿಂದ, ಒಂದಷ್ಟುಅಭಿಮಾನಿಗಳು ರಶ್ಮಿಕಾ ಮಾತಿಗೆ ತಲೆಕೆಡಿಸಿಕೊಂಡಿದ್ದಾರೆ.
ಸುದೀಪ್ ಅಭಿಮಾನಿಗಳ ಕ್ಯಾನ್ಸರ್ ಜನಜಾಗೃತಿ
“ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ’ ವತಿಯಿಂದಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕ್ಯಾನ್ಸರ್ ಬಗ್ಗೆಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಮೊದಲಭಾಗವಾಗಿ ಚನ್ನಪಟ್ಟಣ ತಾಲೂಕಿನ ಸರಕಾರಿ ಪ್ರಥಮದರ್ಜೆ ಕಾಲೇಜಿನ ಅವರಣದಲ್ಲಿ “ಕಿಚ್ಚ ಸುದೀಪ್‌ಚಾರಿಟೇಬಲ್ ಸೊಸೈಟಿ’ ವತಿಯಿಂದ ಕಿದ್ವಾಯ ಸ್ಮಾರಕಕ್ಯಾನ್ಸರ್ ಸಂಸ್ಥೆ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆನಡೆಯಿತು. ಈ ಸಾಮಾಜಿಕ ಕಾರ್ಯದಲ್ಲಿ ಕಿಚ್ಚ ಸುದೀಪ್‌ಅಭಿಮಾನಿಗಳು ಸಾಥ್ ನೀಡಿದ್ದು, ಮುಂದಿನ ದಿನಗಳಲ್ಲಿರಾಜ್ಯದ ಇತರ ಗ್ರಾಮೀಣ ಪ್ರದೇಶಗಳಲ್ಲೂ ಈಕಾರ್ಯಕ್ರಮ ಆಯೋಜಿಸಲು ಯೋಚಿಸಲಾಗಿದೆ.