Advertisement

ಸನ್ಮಾರ್ಗದ ನಡೆಯಿಂದ ಪುಣ್ಯ ಸಂಪಾದನೆ: ವಿದ್ವಾನ್‌ ಶ್ರೀ ರಾಮಚಂದ್ರ ಬಾಯಾರಿ

11:22 AM Jan 31, 2022 | Team Udayavani |

ನವಿಮುಂಬಯಿ: ಮನುಷ್ಯರು ಮಾಡಿದ ಒಳ್ಳೆಯ ಕೆಲಸಗಳು ಸದಾ ಸ್ಮರ ಣೀಯ ವಾಗಿ ರುತ್ತವೆ. ಅಂತಹ ಕೆಲಸಗಳಿಂದ ಪುಣ್ಯ ಸಂಪಾದನೆಯಾಗುತ್ತದೆ. ಆ ನಿಟ್ಟಿನಲ್ಲಿ ವೇದಿಕೆಯ ಲ್ಲಿರುವ ಎಲ್ಲ ಗಣ್ಯರು ಕೂಡ ಧಾರ್ಮಿಕ ಚಟು ವಟಿಕೆ ಯಲ್ಲಿ ತೊಡಗಿಸಿಕೊಂಡು ಸಮಾಜದ ಒಳಿ ತನ್ನು ಬಯಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿ ರುವ ಭಕ್ತರು ಕೂಡ ಅದೇ ಮಾರ್ಗ ದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಹಾಗಾಗಿ ಖಂಡಿತ ವಾಗಿ ಭಗವಂತನು ಎಲ್ಲರಿಗೂ ಸನ್ಮಂಗಳ ವನ್ನುಂಟು ಮಾಡುತ್ತಾನೆ. ಭಗವಂತನು ಈ ಕೊರೊನಾ ಮಹಾಮಾರಿಯನ್ನು ಆದಷ್ಟು ಬೇಗ ದೂರ ಮಾಡಲಿ ಎಂದು ತಂತ್ರಿ ವಿದ್ವಾನ್‌ ಶ್ರೀ ರಾಮಚಂದ್ರ ಬಾಯಾರಿ ತಿಳಿಸಿದರು.

Advertisement

ನೆರೂಲ್‌ನ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ 6ನೇ ವಾರ್ಷಿಕ ವರ್ಧಂತಿ ಉತ್ಸವದ ಸಂದರ್ಭ ಕ್ಷೇತ್ರದಲ್ಲಿರುವ ಭವಾನಿ ದೇರಣ್ಣ ಶೆಟ್ಟಿ ಧ್ಯಾನ ಮಂದಿರ ಸಮುತ್ಛಯದಲ್ಲಿರುವ ಶ್ರೀ ಒಡಿಯೂರು ಗುರುದೇವಾನಂದ ಸಭಾಗೃಹದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಶುಭ ಹಾರೈಸಿದರು.

ಶ್ರೀ ಮಣಿಕಂಠ ಸೇವಾ ಸಂಘಂ ಅಧ್ಯಕ್ಷ ಸುರೇಶ್‌ ಜಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ ವನ್ನು ಶೋಭಾ ಕರುಣಾಕರ ಶೆಟ್ಟಿಯವರ ಪ್ರಾರ್ಥ ನೆ ಯೊಂದಿಗೆ ಗಣ್ಯರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಅಧ್ಯಕ್ಷ ಸುರೇಶ ಜಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷೇತ್ರದ ಸಾಧನೆಗಳನ್ನು ವಿವರಿಸಿ ಸ್ವಾಗತಿಸಿದರು. ಅತಿಥಿಯಾಗಿದ್ದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಉಪಾಧ್ಯಕ್ಷ ಜಗದೀಶ್‌ ಶೆಟ್ಟಿ ನಂದಿಕೂರು ಮಾತನಾಡಿ, ಭಗವಂತನ ಸೇವೆ ಮಾಡುವ ಭಾಗ್ಯ ದೊರಕಿರುವುದು ನಮ್ಮೆಲ್ಲರ ಪುಣ್ಯ. ಭಗವಂತನ ಸೇವೆ ಮಾಡುತ್ತಿರುವುದರಿಂದಾಗಿ ಸಮಾಜದಲ್ಲಿ ನಮ್ಮೆಲ್ಲರ ಪರಿಚಯ ಸುಲಭವಾಗಿ ಆಗುತ್ತಿದೆ. ಇಂತಹ ಸೇವಾ ಕೆಲಸವನ್ನು ಎಲ್ಲರು ಒಟ್ಟು ಸೇರಿ ಮಾಡೋಣ ಎಂದರು.

ಶ್ರೀ ಶನೀಶ್ವರ ಮಂದಿರ ನೆರೂಲ್‌ ಅಧ್ಯಕ್ಷ ಧರ್ಮ ದರ್ಶಿ ರಮೇಶ್‌ ಎಂ. ಪೂಜಾರಿ ಮಾತ ನಾಡಿ, ಸಂಘ ಸಂಸ್ಥೆಯಲ್ಲಿ ಸೇವೆ ಮಾಡುವವರಿಗೆ ಬಹ ಳಷ್ಟು ಸಹನೆ ಇರಬೇಕು. ನಾವೆಲ್ಲರೂ ಜಾತಿ ಮತ ಮರೆತು ಒಗ್ಗಟ್ಟಾಗಿ ದೇವರ ಸೇವೆ ಮಾಡೋಣ ಎಂದರು.

Advertisement

ಮಾಜಿ ಸ್ಥಾನೀಯ ನಗರ ಸೇವಕಿ ಶಿಲ್ಪಾ ಕಾಂಬ್ಳಿ ಮಾತನಾಡಿ, ಕ್ಷೇತ್ರದಲ್ಲಿ ಬಹಳಷ್ಟು ಉತ್ತಮ ಕೆಲಸಗಳು ಆಗುತ್ತಿವೆ. ಇದಕ್ಕೆ ಹಿಂದಿನ ಅಧ್ಯಕ್ಷರ ಹಾಗೂ ಆಡಳಿತ ಮಂಡಳಿ ಸದಸ್ಯರ ಶ್ರಮವನ್ನು ಸ್ಮರಿಸಿದರು. ಪ್ರಸಕ್ತ ಅವಧಿಯ ಅಧ್ಯಕ್ಷರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ಗಜಾ ನನ ಮಹಾರಾಜಾ ಚಾರಿಟೆಬಲ್‌ ಟ್ರಸ್ಟ್‌ನ ಟ್ರಸ್ಟಿ ಡಾ| ಗುಲಾಬ್‌ ಪರ್ವೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕೊರೊನಾ ಆದಷ್ಟು ಬೇಗ ದೂರವಾಗಲಿ ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ 25ನೇ ವರ್ಷದ ಶಬರಿ ಮಲೆ ಯಾತ್ರೆಯನ್ನು ಕೈಗೊಂಡ ಸಂಸ್ಥೆಯ ವಿಶ್ವಸ್ಥ, ಗುರುಸ್ವಾಮಿ ಸುರೇಶ್‌ ಆರ್‌. ಶೆಟ್ಟಿ ಸೀತಾ ನದಿ ಅವರನ್ನು ಗೌರವಿಸಲಾಯಿತು. ಟ್ರಸ್ಟಿ ಹಾಗೂ ಸಾಂಸ್ಕೃ ತಿಕ ವಿಭಾಗದ ಅಧ್ಯಕ್ಷೆ ಇಂದಿರಾ ಎಸ್‌. ಶೆಟ್ಟಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಭಾವತಿ ವಿ. ಶೆಟ್ಟಿ ಅವರ ಸೇವೆಯನ್ನು ಪರಿಗಣಿಸಿ ಗೌರವಿಸಲಾಯಿತು. ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಭಾವತಿ ವಿ. ಶೆಟ್ಟಿಯವರು ಎಲ್ಲ ಸದಸ್ಯೆಯರಿಂದ ಒಟ್ಟು ಸೇರಿಸಿದ 60,000 ರೂ. ಗಳ ನಿಧಿಯನ್ನು ಮಂದಿರಕ್ಕೆ ಒಪ್ಪಿಸಿದರು.

ಸ್ವಯಂಸೇವಕರಾಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಂದಿರದ ಹೆಚ್ಚಿನ ಎಲ್ಲ ಸದಸ್ಯರನ್ನು ಗೌರವಿಸಲಾಯಿತು.

ಮಾಜಿ ಅಧ್ಯಕ್ಷ ಸಂಜೀವ ಎನ್‌. ಶೆಟ್ಟಿ, ಉಪಾಧ್ಯಕ್ಷ ದಾಮೋದರ್‌ ಎಸ್‌. ಶೆಟ್ಟಿ, ಧರ್ಮ ಶಾಸ್ತ ಭಕ್ತವೃಂದ ಚಾರಿಟೆಬಲ್‌ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಹರಿ ಎಲ್‌. ಶೆಟ್ಟಿ, ಕ್ಷೇತ್ರದ ಗುರುಸ್ವಾಮಿ, ಟ್ರಸ್ಟಿ ಹಾಗೂ ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್‌ ಎನ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ತಿ ಮೋಹನದಾಸ್‌ ಕೆ. ರೈ ವಂದಿಸಿದರು. ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.

ಸರ್ವರ ಸಹಕಾರ ಸದಾಯಿರಲಿ :

ಮಂದಿರ ಆರಂಭವಾಗಿ ಆರು ವರ್ಷಗಳಾಗುತ್ತಿದೆ. ಹಾಗಾಗಿ ನಾವು ಈಗ ಪ್ರಥಮ ತರಗತಿಯಲ್ಲಿರುವ ಮಗುವಿನಂತೆ ಇದ್ದೇವೆ. ಸಂಸ್ಥೆ ಬೆಳೆಯುವುದಕ್ಕೆ ಬಹಳಷ್ಟು ಇದೆ. ಮುಂದಿನ ದಿನಗಳಲ್ಲಿ ಉತ್ತಮ ಕೆಲಸವನ್ನು ಎಲ್ಲರ ಸಹಕಾರದಿಂದ ಮಾಡುತ್ತೇವೆ. ಶ್ರೀಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಅಧ್ಯಕ್ಷರ ಕೊಡುಗೆ ಅಪಾರವಾಗಿದೆ. ಕ್ಷೇತ್ರದ ಎಲ್ಲ ಭಕ್ತರ ಸಹಕಾರವನ್ನು ಮರೆಯುವಂತಿಲ್ಲ. ವಿದ್ವಾನ್‌ ರಾಮಚಂದ್ರ ಬಾಯಾರಿ ಅವರ ಮಾರ್ಗದರ್ಶನದ ಬಗ್ಗೆ ಗೌರವವಿದೆ. ಮುಂದಿನ ದಿನಗಳಲ್ಲೂ ಸರ್ವರ ಸಹಕಾರ ಸದಾಯಿರಲಿ.ಸುರೇಶ್‌ ಜಿ. ಶೆಟ್ಟಿ, ಅಧ್ಯಕ್ಷರು, ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರ

Advertisement

Udayavani is now on Telegram. Click here to join our channel and stay updated with the latest news.

Next