Advertisement

ಅಂತರಂಗ ಶುದ್ಧಿಯಿಂದ ಧರ್ಮ ಜಾಗೃತಿ

04:07 PM Jun 26, 2017 | |

ವಾಡಿ: ಬಹಿರಂಗ ಶುದ್ಧಿ ಬಾಹ್ಯ ಸೌಂದರ್ಯವಾಗಿ ಬಹುಬೇಗ ವ್ಯಕ್ತಿಯ ನಿಜಬಣ್ಣ ಕಳಚುತ್ತದೆ. ಅಂತರಂಗದ ಶುದ್ಧಿಯೇ ಧರ್ಮ ಜಾಗೃತಿ ಜೀವಂತವಿಟ್ಟು ಸಮಾಜಮುಖೀಯಾಗಿ ಜಗವ ಬೆಳಗುತ್ತದೆ ಎಂದು ಗುರುಮಠಕಲ ಶಾಖಾ ಮಠದ  ಪೀಠಾಧಿಪತಿ ಶ್ರೀ ಶಾಂತಿವೀರ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.  

Advertisement

ಸುಕ್ಷೇತ್ರ ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಮಾಸಿಕ ಶಿವಾನುಭವ ಚಿಂತನ ಗೋಷ್ಠಿ ಹಾಗೂ ವರ್ಷದ ಕೊನೆ ತನಾರತಿ ಮಹೋತ್ಸವ ಉದ್ಘಾಟಿಸಿ ಸ್ವಾಮೀಜಿ ಅಶೀರ್ವಚನ ನೀಡಿದರು. ಸಾನ್ನಿಧ್ಯ ವಹಿಸಿದ್ದ ಕೋರಿಸಿದ್ದೇಶ್ವರ ಮಠದ ಡಾ| ಸಿದ್ದ ತೋಟೇಂದ್ರ ಸ್ವಾಮೀಜಿ ಮಾತನಾಡಿದರು. 

ಭಕ್ತರ ಇಷ್ಟಾರ್ಥ ಈಡೇರಿದೆ ಎಂಬುದಕ್ಕೆ ಪ್ರತಿವರ್ಷ ನಡೆದುಕೊಂಡು ಬರುತ್ತಿರುವ ತನಾರತಿ ಉತ್ಸವವೇ ಜೀವಂತ ಸಾಕ್ಷಿಯಾಗಿದೆ ಎಂದು ಹೇಳಿದರು. ಚಿತ್ರಕಲಾವಿದ ಸಂಗಣ್ಣ ದೊರನಳ್ಳಿ, ಎಪಿಎಂಸಿ ಅಧ್ಯಕ್ಷ ಬಸವರಾಜ ಸಜ್ಜನ, ಸಂಗಮೇಶ ಸಾಹು ಗೋಗಿ, ಕಾಶೀನಾಥ  ಶಾಸ್ತ್ರಿ ಜೇರಟಗಿ, ಮಹೇಶ ಗೌಡ ಸೂಗೂರ, ವೀರಣ್ಣಗೌಡ ಪರಸರೆಡ್ಡಿ, ಮಲ್ಲಿಕಾರ್ಜುನ ಇದ್ದರು.  ಶ್ರೀಮಠದ ಗಾಯಕ ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರು.

ಡಾ| ಸಿದ್ದರಾಜ ಕರೆಡ್ಡಿ ನಿರೂಪಿಸಿದರು. ಶಂಕರ ಗವಾಯಿ, ಹಿತ್ತಲಶಿರೂರ ಗವಾಯಿ, ಸಾಬಣ್ಣ ಭಜಂತ್ರಿ, ಸಂಗಯ್ಯ ಗವಾಯಿ ಬಳವಡಗಿ, ಈರಣ್ಣ, ಶೇಖರ ಏವೂರ ಮತ್ತಿತರರು ಸಂಗೀತ ಸೇವೆ ನೀಡಿದರು. ರಾಜಶೇಖರ ಗೆಜ್ಜಿ, ನಾರಾಯಣ ಹೊಸೂರ ತಬಲಾ ಸಾಥ್‌ ನೀಡಿದರು. ಮಹಾಂತೇಶ ಹುಲ್ಲೂರ, ರಾಜಶೇಖರ ಹುಲ್ಲೂರ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.  

Advertisement

Udayavani is now on Telegram. Click here to join our channel and stay updated with the latest news.

Next