ಮಠದಲ್ಲಿ ಸರಳವಾಗಿ ಆಚರಿಸಲಾಯಿತು. ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ ಶಂಕರಾಚಾರ್ಯರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ
ಗೌರವ ಸಮರ್ಪಿಸಿದರು.
Advertisement
ಶಾಸಕ ಎಸ್.ಎ. ರಾಮದಾಸ್ ಮಾತನಾಡಿ, ಪ್ರಧಾನಿ ಮೋದಿಯವರು ಶಂಕರಾಚಾರ್ಯರ ಜನ್ಮದಿನವನ್ನು ವಿಶ್ವ ತತ್ವ ಶಾಸ್ತ್ರದಿನವನ್ನಾಗಿ ಆಚರಿಸಲು ಘೋಷಣೆ ಮಾಡಿದಾಗಿನಿಂದ ವಿಶ್ವದೆಲ್ಲೆಡೆ ಶಂಕರಾಚಾರ್ಯರ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದರು. ದೇಶದಲ್ಲಿ ಹಿಂದೂ ಧರ್ಮವಿದೆ ವಿದೇಶಿಯರು, ಅನ್ಯ ಧರ್ಮಗಳ ದಾಳಿಯಿಂದ ಸಂಪೂರ್ಣ ನಲುಗಿದ್ದ ಸಂದರ್ಭ 31 ಬಾರಿ ದೇಶ ಪರ್ಯಟನೆ ಮಾಡಿದ ಶಂಕರಾಚಾರ್ಯರು ಹಿಂದೂ ಧರ್ಮ ಉಳಿಸಿದರು. ಅವರ ಜಯಂತಿ ಆಚರಿಸುವ ಮೂಲಕ ಅದ್ವೈತ ಸಿದ್ಧಾಂತ ಅರ್ಥಮಾಡಿಕೊಳ್ಳಬೇಕು. ಈ ಸಿದ್ಧಾಂತ ಎಲ್ಲಾ ಜಾತಿ, ಧರ್ಮ ಮೀರಿದ ಮನುಷ್ಯತ್ವದ ತಣ್ತೀದಿಂದ ಕೂಡಿದೆ. ಪಾಕ್‌ಆಕ್ರಮಿತ ಕಾಶ್ಮಿರದಲ್ಲಿರುವ ಶಂಕರಾಚಾರ್ಯರು ನಿರ್ಮಿಸಿದ ಶಾರದಾ ಸನ್ನಿಧಿಯನ್ನು ಭಾರತೀಯರು ದರ್ಶನ ಮಾಡುವ ಭಾಗ್ಯ ಶೀಘ್ರದಲ್ಲೆ ಈಡೇರಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ದಿನಕ್ಕೆ ಆಗುವಷ್ಟು ದಿನಸಿ ಕಿಟ್‌ಗಳನ್ನು ಕೊಳಗೇರಿ ನಿವಾಸಿಗಳಿಗೆ ವಿತರಿಸಲಾಗಿದ್ದು, ಪೌರಕಾರ್ಮಿಕ ಮಹಿಳೆಯರಿಗೆ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು. ಮಠದಿಂದ ಪಿಎಂ ಕೇರ್‌ಗೆ 2 ಲಕ್ಷ ರೂ., ಸಿಎಂ ಪರಿಹಾರ ನಿಧಿಗೆ 1.50 ಲಕ್ಷ ರೂ. ಹಣವನ್ನು ದೇಣಿಗೆಯಾಗಿ ಡೀಸಿ ಅಭಿರಾಂ ಜಿ. ಶಂಕರ್ ಅವರಿಗೆ ನೀಡಲಾಯಿತು. ಶಾಸಕ ಎಲ್ ನಾಗೇಂದ್ರ, ಮಾಜಿ ಶಾಸಕ
ಎಂ.ಕೆ.ಸೋಮಶೇಖರ್, ಬಿಜೆಪಿ ಮುಖಂಡ ಎಚ್.ವಿ.ರಾಜೀವ್, ಪಾಲಿಕೆ ಸದಸ್ಯರಾದ ಮಂಜುನಾಥ್, ಎಂ.ವಿ.ರಾಮಪ್ರಸಾದ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಸ್, ಪಾಲಿಕೆ ಹೆಚ್ಚುವರಿ ಆಯುಕ್ತ ಎಂ.ಎನ್. ಶಶಿ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಚನ್ನಪ್ಪ, ಶಂಕರ ಮಠದ ಸಿ.ಎಸ್.ಯೋಗಾನಂದ, ರಾಮಚಂದ್ರ ಇದ್ದರು.