Advertisement
ವರ್ತೆ ಕಲ್ಕುಡದ ಮೂಲವೇ ಬಸ್ತಿಉಡುಪಿ ಜಿಲ್ಲೆ ಬೊಮ್ಮರಬೆಟ್ಟು ಗ್ರಾಮದ ಬಸ್ತಿ ಎಂಬ ಕ್ಷೇತ್ರದ ಮೂಲ ಸ್ಥಾನದಲ್ಲಿ ನೆಲೆಯಾದ ವರ್ತೆ ಕಲ್ಕುಡ ಕ್ಷೇತ್ರಿಯ ಅಧ್ಯಯನದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದು ಮೂಲ ವರ್ತೆ ಕಲ್ಕುಡ ಸ್ಥಾನ ಎಂದು ಪ್ರಸಿದ್ಧಿ ಪಡೆದಿದೆ. ವಿಶೇಷ ಕಾರ್ನಿಕದ ಶಕ್ತಿ ಸಾನ್ನಿಧ್ಯ ಹೊಂದಿ
ರುವ ಬಸ್ತಿ ವರ್ತೆ ಕಲ್ಕುಡ ದೈವಸ್ಥಾನ ಉಡುಪಿ ಜಿಲ್ಲೆ ಮಾತ್ರವಲ್ಲದೆ ಇತರ ಜಿಲ್ಲೆಗಳ ಭಕ್ತರು ಈ ಕ್ಷೇತ್ರಕ್ಕೆ ಹರಕೆ ಸೇವೆ ಸಲ್ಲಿಸುತ್ತಾರೆ. ಸನ್ನಿಧಿಯಲ್ಲಿ ಹಗಲು ಪನಿಯಾರ(ಪ್ರತಿ ಮಂಗಳವಾರ)ಸಂಕ್ರಾತಿ ಪೂಜೆ, ಹರಕೆ ಹೂವಿನ ಪೂಜೆ, ಕಾಲಾವಧಿ ನೇಮ ಮತ್ತು ಹರಕೆ ನೇಮ ನಡೆಯುತ್ತದೆ.ಜೀರ್ಣೋದ್ಧಾರ ಸಹಕಾರ
ಇತಿಹಾಸ ಪ್ರಸಿದ್ಧ ಬೊಮ್ಮರಬೆಟ್ಟು ಬಸ್ತಿಯಲ್ಲಿ ಪೂಜಿಸುತ್ತಾ ಬಂದಿರುವ ವರ್ತೆ ಕಲ್ಕುಡ ದೈವಸ್ಥಾನ ಈಗಾಗಲೇ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮುತ್ತೂರು ಮೋಹನದಾಸ ಹೆಗ್ಡೆಯವರ ಸಾರಥ್ಯದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುಯಿಲಾಡಿ ಸುರೇಶ್‌ನಾಯಕ್, ಉಪಾಧ್ಯಕ್ಷ ರವಿ ಶೆಟ್ಟಿ ಬಸ್ತಿ, ಅರ್ಚಕ ಶೇಖರ ಶೆಟ್ಟಿ ಬಸ್ತಿ ಹಾಗೂ ಸಮಿತಿಯ ಗೌರವಾಧ್ಯಕ್ಷರು, ಸರ್ವ ಸದಸ್ಯರ ಮುಂದಾಳತ್ವದಲ್ಲಿ ದಾನಿಗಳ, ಗ್ರಾಮಸ್ಥರ ಹಾಗೂ ಭಕ್ತರ ಸಹಕಾರದಿಂದ ಪುನಃಪ್ರತಿಷ್ಠೆ, ಕಲಶಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳ ಸಿದ್ಧತೆ ನಡೆಯುತ್ತಿದೆ.
ಸಿರಿ ಸಿಂಗಾರ ನೇಮ ದೈವಸ್ಥಾನದಲ್ಲಿ ಫೆ. 17ರಂದು ರಾತ್ರಿ 7ರಿಂದ ವಿವಿಧ ಭಜನ ಮಂಡಳಿಗಳಿಂದ ಕುಣಿತ ಭಜನ ಕಾರ್ಯಕ್ರಮ, 8ರಿಂದ ಅನ್ನಸಂತರ್ಪಣೆ ಹಾಗೂ 10ರಿಂದ ವರ್ತೆ ಕಲ್ಕುಡ ದೈವಗಳ ಸಿರಿಸಿಂಗಾರ ನೇಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.