ಮಂಗಳೂರು: ಧರ್ಮ ಮತ್ತು ಸಂಸ್ಕೃತಿಯನ್ನು ಅರ್ಥೈಸಿ ಕೊಂಡು ಜೀವನದಲ್ಲಿ ಪಾಲಿಸಿದಾಗ ಸಾರ್ಥಕತೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಂಗಳೂರು ರಾಮಕೃಷ್ಣ ಮಿಶನ್ ಬಾಲಕಾಶ್ರಮದ ಸ್ವಾಮಿ ಧರ್ಮವ್ರತಾನಂದ ಅವರು ಹೇಳಿದರು.
ಅವರು ನಗರದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ವಾರ್ಷಿಕ ಕುಂಭ ಮಹೋತ್ಸವದಲ್ಲಿ ಶನಿವಾರ ಜರಗಿದ ಧಾರ್ಮಿಕ ಸಭೆಯಲ್ಲಿ ಅಶೀರ್ವಚನ ನೀಡಿದರು. ಬದುಕಿನಲ್ಲಿ ಧಾರ್ಮಿಕ ಪ್ರಜ್ಞೆ, ಸತ್‌ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಬದಿಯಡ್ಕ ಉಪ್ಪೇರಿ ಶ್ರೀ ಮಂತ್ರಮೂರ್ತಿ ಗುಳಿಗ ಕ್ಷೇತ್ರದ ಪ್ರಧಾನಕರ್ಮಿ ಗೋಪಾಲ ಕೃಷ್ಣ ಕುಲಾಲ್ ವಾಂತಿಚ್ಚಾಲು ಅವರು ಮಾತನಾಡಿ, ಧರ್ಮಮಾರ್ಗದಲ್ಲಿ ನಡೆದಾಗ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.
ನವದುರ್ಗಾ ಕನ್‌ಸ್ಟ್ರಕ್ಷನ್ ಮಾಲಕ ಪುರುಷೋತ್ತಮ ಕೊಟ್ಟಾರಿ ಅವರು ಮಾತನಾಡಿ, ಮನುಷ್ಯ ಜೀವನದ ಉದ್ದೇಶವನ್ನು ಅರ್ಥೈಸಿಕೊಂಡಾಗ ಸಾಧಿಸಬೇಕಾದ ಗುರಿಯ ಅರಿವು, ಭಗವಂತನ ಒಲವು ಸಾಕಾರಗೊಳ್ಳುತ್ತದೆ ಎಂದು ಹೇಳಿದರು. ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ದೈವ ದೇವರಲ್ಲಿ ಭಕ್ತಿಯಿಂದ ಬದುಕು ಪಾವನವಾಗುತ್ತದೆ ಎಂದರು.
ದ.ಕ. ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಸದಾನಂದ ನಾವರ, ಬೆಂಜನಪದವು ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶು ಪಾಲ ಎ.ಟಿ. ಗಿರೀಶ್‌ಚಂದ್ರ, ಗೋರಿ ಗುಡ್ಡ ಕಿಟ್ಟಲ್ ಮೆಮೋರಿಯಲ್ ಪ.ಪೂ. ಕಾಲೇಜಿನ ಪ್ರಾಂಶುಪಾಲ ವಿಟuಲ್, ಮರೋಳಿ ಸೂರ್ಯನಾರಾಯಣ ದೇವಸ್ಥಾನ ಅಭಿವೃದ್ಧಿ ಸಮಿ ತಿಯ ಪ್ರಧಾನ ಕಾರ್ಯದರ್ಶಿ ಗುಡ್ಡೆಗುತ್ತು ಗಣೇಶ್ ಶೆಟ್ಟಿ ಅವರು ಅತಿಥಿಗಳಾಗಿದ್ದರು.
ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರು ಷೋತ್ತಮ ಕುಲಾಲ್ ಕಲಾºವಿ ಪ್ರಸ್ತಾವನೆಗೈದರು. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಸುಜೀರ್ ಶ್ರೀಧರ್ ಕುಡುಪು, ದೇವ ಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಭವಾನಿ ಶಂಕರ್ ಮರೋಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ಎ., ಮೊಕ್ತೇಸರರಾದ ಪುರುಷೋತ್ತಮ ಎಸ್. ಬಿಜೈ, ಎಂ.ಪಿ. ಬಂಗೇರ ಬಿಜೈ, ಪಿ. ಶೀನ ಮೂಲ್ಯ, ಗೋಪಾಲ ಸಾಲ್ಯಾನ್ ಪಡೀಲ್, ಎ. ಕೃಷ್ಣ ಬಂಗೇರ, ಗಿರಿಧರ ಜೆ. ಮೂಲ್ಯ ಬಿಜೈ ಉಪಸ್ಥಿತರಿದ್ದರು.
ಮೊಕ್ತೇಸರರಾದ ರವೀಂದ್ರ ಮುನ್ನಿ ಪಾಡಿ ಸ್ವಾಗತಿಸಿದರು. ಕೆ. ಸುಂದರ ಕುಲಾಲ್ ವಂದಿಸಿದರು. ಪ್ರಸಾದ್ ಕುಲಾಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರ್ವ ಹಿಸಿದರು. ವಿಶೇಷ ಸಾಧನೆಗೈದ ನಿಶೆಲ್ ಪ್ಲೋರಾಆಲ್ಮೆಡಾ ಅವರನ್ನು ಸಮ್ಮಾನಿಸಿ ಅಭಿನಂದಿಸಲಾಯಿತು.