ಕುಂಬ್ರ : ಪರಮಾತ್ಮನ ಹೊರತಾದ ಕಾರ್ಯ ಯಾವುದು ಇಲ್ಲ. ಧರ್ಮ, ಸಂಸ್ಕಾರ, ಸನ್ನಡತೆ ಅನುಭವಕ್ಕೆ ಬರುವಂಥದ್ದು. ಧರ್ಮದ ವಿಚಾರದಲ್ಲಿ ಮೊದಲು ಯಾವುದು ಎಂಬುವುದನ್ನು ಅಳತೆ ಮಾಡಲು ಸಾಧ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆರ್ಶೀವಚನ ನೀಡಿದರು.
ಅವರು ಒಳಮೊಗ್ರು ಗ್ರಾಮದ ಶ್ರೀ ಸದಾಶಿವ ಭಜನ ಮಂದಿರ ಸದಾಶಿವ ನಗರ ಕುಟ್ಟಿನೋಪಿನಡ್ಕ ಇದರ ಬೆಳ್ಳಿಹಬ್ಬ ಸಂಭ್ರಮ ಮತ್ತು ರಂಗ ಮಂದಿರದ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಅಂಗವಾಗಿ ಮಂದಿರದ ವಠಾರದಲ್ಲಿ ನಡೆದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ಉದ್ಯಮಿ ಗಣೇಶ್ ಕೋಡಿಬೈಲು ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತೀಯ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ತಿಳಿಸುವಲ್ಲಿ ಭಜನ ಮಂದಿರಗಳು ಸಹಕಾರಿಯಾಗಿವೆ. ವಿವಿಧ ಚಟುವಟಿಕೆಯ ಕೇಂದ್ರವಾಗಿ ಮಂದಿರಗಳು ಬೆಳೆಯಬೇಕು ಎಂದು ತಿಳಿಸಿದರು.
ಬ್ರೈಟ್‌ವೇ ಇಂಡಿಯಾದ ನಿರ್ದೇಶಕ ಮನಮೋಹನ ರೈ ಸಿ.ಕೆ. ಚೆಲ್ಯಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉದ್ಯಮಿ ಅಶೋಕ್ ಕುಮಾರ್ ರೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸೀತಾರಾಮ ಶೆಟ್ಟಿ, ಸಂಪ್ಯ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ಅಬ್ದುಲ್ ಖಾದರ್, ಎಂಆರ್‌ಪಿಎಲ್ ಸುರತ್ಕಲ್‌ನ ಸೀತಾರಾಮ ರೈ ಕೈಕಾರ, ಉದ್ಯಮಿ ಜಯಂತ ನಡುಬೈಲು, ಮಂದಿರದ ಸ್ಥಾಪಕಾಧ್ಯಕ್ಷ ಬಾಬಣ್ಣ ರೈ ಇಂತ್ರುಮೂಲೆ, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ರೈ ನೀರ್ಪಾಡಿ, ಕಾರ್ಯದರ್ಶಿ ಪದ್ಮನಾಭ ಜಿ. ಅನಂತಾಡಿ, ಮಂದಿರ ಸಮಿತಿ ಅಧ್ಯಕ್ಷ ಸುಧಾಕರ ಆಳ್ವ ಕಲ್ಲಡ್ಕ, ಕಾರ್ಯದರ್ಶಿ ಸದಾನಂದ ನಾಯ್ಕ ಕುಂಡಚ್ಚಗುರಿ, ಪ್ರಮುಖರಾದ ಪ್ರಕಾಶ್ಚಂದ್ರ ರೈ ಕೈಕಾರ, ಗಿರೀಶ್ ರೈ ನೀರ್ಪಾಡಿ, ರಾಜೇಶ್ ರೈ ಪರ್ಪುಂಜ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಬೆಳಗ್ಗೆ ಗಣಪತಿ ಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಭಜನ ಕಾರ್ಯಕ್ರಮ ಶ್ರೀ ಸತ್ಯನಾರಾಯಣ ಭಜನ ಮಂದಿರ ಮೈಯಾಳ ದೇಲಂಪಾಡಿ ಅನಂತರ ಅನ್ನಸಂತರ್ಪಣೆ ಹಾಗೂ ಪುಟಾಣಿಗಳಿಂದ ನೃತ್ಯ ವೈವಿಧ್ಯ, ಪುತ್ತೂರು ತೆಂಕಿಲ ಚಿಣ್ಣರ ಬಳಗದಿಂದ ಯಕ್ಷಗಾನ “ಶಾಂಭವಿ ವಿಜಯ’ ಅನಂತರ ಸ್ಥಳೀಯರಿಂದ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮ, ಶಿವಶಕ್ತಿ ಬಳಗದಿಂದ ತಾಲೀಮು ಪ್ರದರ್ಶನ ಬಳಿಕ ವಿಧಾತ್ರಿ ಕಲಾವಿದೆರ್ ಕೈಕಂಬ ಕುಡ್ಲ ಅಭಿನಯದ ತುಳು ಹಾಸ್ಯಮಯ “ನಮ್ಮ ಮರ್ಯಾದಿದ ಪ್ರಶ್ನೆ’ ಪ್ರದರ್ಶನ ನಡೆಯಿತು.
ಸಾಧಕರಿಗೆ ಸಮ್ಮಾನ
ಕಾರ್ಯಕ್ರಮದಲ್ಲಿ ಯೋಧ ದಯಾನಂದ ಗೌಡ ಕೆಳಗಿನ ನೀರ್ಪಾಡಿ, ಪ್ರಗತಿಪರ ಕೃಷಿಕ ಹೊನ್ನಪ್ಪ ಗೌಡ ಇಡಿಂಜಿಲ, ಹೈನುಗಾರಿಕೆ ಎನ್. ಕಿಟ್ಟಣ್ಣ ರೈ ನೀರ್ಪಾಡಿ, ಕಾಲೇಜು ಪ್ರಾಂಶುಪಾಲ ಕೆ. ಶೇಖರ ರೈ, ಕ್ರೀಡಾಪಟು ಧನುಷ್ ಗೋವಿಂದಮೂಲೆ, ಛಾಯಾಗ್ರಾಹಕ ಶಿವಪ್ರಸಾದ್ ಆಳ್ವ ಕಲ್ಲಡ್ಕ, ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಬಿಜತ್ರೆ, ಅಂಗನವಾಡಿ ಕಾರ್ಯಕರ್ತೆ ನೀಲಮ್ಮ, ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಪತ್ರಕರ್ತ ರಾಜೇಶ್ ಪಲ್ಲತ್ತಾರು ಹಾಗೂ ಮಂದಿರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬಾಬಣ್ಣ ರೈ ಇಂತ್ರುಮೂಲೆ, ಸಂಕಪ್ಪ ಆಳ್ವ ಕಲ್ಲಡ್ಕ, ಜಯರಾಮ ರೈ ಎನ್., ಅಮ್ಮು ರೈ ಪೆರದನೆ, ಸತೀಶ್ ರೈ ಪೆರದನೆ, ರಮೇಶ್ ಆಳ್ವ ಕಲ್ಲಡ್ಕ, ಚಂದ್ರಶೇಖರ ರೈ ಕಲ್ಲಡ್ಕ, ಸುಧಾಕರ ಆಳ್ವ ಕಲ್ಲಡ್ಕ ಮತ್ತು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ವಸಂತ ಶೆಟ್ಟಿ ಕಲ್ಲಡ್ಕ, ಜಗನ್ನಾಥ ರೈ ನೀರ್ಪಾಡಿ, ಪದ್ಮನಾಭ ಜಿ. ಅನಂತಾಡಿ, ಸುನಿಲ್ ಕುಮಾರ್ ರೈ ನೀರ್ಪಾಡಿ, ಪ್ರವೀಣ್ ಕುಮಾರ್ ರೈ ನೀರ್ಪಾಡಿ, ವೆಂಕಪ್ಪ ನಾಯ್ಕ ಕುಂಡಚ್ಚಗುರಿ ಹಾಗೂ ಪ್ರಮುಖರಾದ ನೇಮಾಕ್ಷ ಸುವರ್ಣ ಅಮ್ಮುಂಜ, ಸಂತೋಷ್ ಕುಮಾರ್ ರೈ ಕೈಕಾರ, ಶಿವಶಕ್ತಿ ಫ್ರೆಂಡ್ಸ್ ಕ್ಲಬ್‌ನ ಕಿರಣ್ ಮತ್ತು ಪಾಕ ತಜ್ಞ ರುಕ್ಮಯ್ಯ ಅವರನ್ನು ಗೌರವಿಸಲಾಯಿತು.